ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಪಡಿತರದಾರರಗೆ ಕಳೆದ ತಿಂಗಳು ಹಂಚಬೇಕಾಗಿದ್ದ ಧಾನ್ಯಗಳ ಕೋಟಾ ಉಳಿದಿದ್ದರೆ ಅದನ್ನು ಇದೇ ತಿಂಗಳಲ್ಲಿ ಹಂಚಿಬಿಡಬೇಕು. ಇದರ ಬಗ್ಗೆ ಯಾವುದಾದರೂ ದೂರು ಕೇಳಿ ಬಂದರೆ ಅಂತಹ ನ್ಯಾಯಬೆಲೆ ಅಂಗಡಿಕಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಖಡಕ್ ಸೂಚನೆ ನೀಡಿದ್ದಾರೆ.
ಪಟ್ಟಣದ ತಮ್ಮ ಸ್ವಗೃಹದಲ್ಲಿ ತಾಲೂಕಿನ ನ್ಯಾಯಬೆಲೆ ಅಂಗಡಿಕಾರರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನ್ಯಾಯಬೆಲೆ ಅಂಗಡಿಕಾರರ ವಿರುದ್ಧ ಯಾವುದೇ ಸಣ್ಣಪುಟ್ಟ ದೂರು ಬಂದರೂ ಅದನ್ನು ಅಲ್ಲಿಯೇ ಬಗೆಹರಿಸುವಂತೆ ಸೂಚನೆ ನೀಡಿದ್ದೆ. ಆದರೆ ಸದ್ಯಕ್ಕೆ ಲಾಕ್‌ಡೌನ್ ಇದ್ದು ಇಂತಹ ದೂರುಗಳನ್ನು ಗಂಭಿರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸಾಮಾನ್ಯವಾಗಿ ನಾನು ಎದರಲ್ಲಿಯೂ ರಾಜಕೀಯ ಬೆರೆಸಿಲ್ಲ. ಅಲ್ಲದೇ ಯಾವುದೇ ಅಂಗಡಿಕಾರರ ಮೇಲೂ ಕಠೀಣ ಕ್ರಮ ಕೈಗೊಂಡಿಲ್ಲ. ಆದರೆ ಈಗಾಗಲೇ ಬಡವರು ಆಹಾರಕ್ಕಾಗಿ ಪರದಾಡುತ್ತಿದ್ದು ಈ ಸಂದರ್ಭದಲ್ಲಿ ಅವರೊಂದಿಗೆ ಯಾವುದೇ ರೀತಿಯ ಅನ್ಯಾಯವಾದರೂ ನಾನು ಸುಮ್ಮನಿರುವುದಿಲ್ಲ. ಇದರ ಬಗ್ಗೆ ಈಗಾಗಲೇ ತಹಸೀಲ್ದಾರ ಅವರಿಗೆ ಸೂಚಿನೆ ನೀಡಿದ್ದು ಎಲ್ಲ ನ್ಯಾಯಬೆಲೆ ಅಂಗಡಿಕಾರರು ಸರಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಹೇಳಿದರು.
ಪಡಿತರ ಚೀಟಿದಾರರಿಗೆ ಮನೆಮನೆಗೆ ಪಡಿತರ ವಿತರಣೆ ಮಾಡಿ:
ತಾಲೂಕಿನ ಪ್ರತಿಯೊಬ್ಬ ಪಡಿತರ ಚೀಟಿದಾರರಿಗೆ ಅವರ ಕುಟುಂಬಕ್ಕೆ ನೀಡಬೇಕಾದ ಪಡಿತರಧಾನ್ಯವನ್ನು ನೇರವಾಗಿ ಅವರ ಮನೆಗಳಿಗೆ ತಲುಪಿಸುವ ಕೆಲಸ ನ್ಯಾಯಬೆಲೆ ಅಂಗಡಿಕಾರರು ತಪ್ಪದೇ ಮಾಡಬೇಕು. ಆಯಾ ಕುಟುಂಬದ ಪಡಿತರ ಚೀಟಿಗೆ ಎಷ್ಟು ರೇಷನ್ ನೀಡಬೇಕೊ ಅಷ್ಟು ರೇಷನ್ ಒಂದು ಪ್ಯಾಕೇಟ್‌ನಲ್ಲಿ ಪ್ಯಾಕ್ ಮಾಡಿ ಅದನ್ನು ಅವರ ಮನೆಗೆ ತಲುಪಿಸಬೇಕು. ಬಡವರಿಂದ ರೇಷನ್ ಹಂಚಲು ಹಣ ವಸೂಲಿ ಮಾಡಿದ ದೂರುಗಳು ಕೇಳಿಬಂದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ನಡಹಳ್ಳಿ ಅವರು ತಿಳಿಸಿದರು.
ಈ ಸಂದರ್ಭಲದಲಿ ತಹಸೀಲ್ದಾರ ಜಿ.ಎಸ್.ಮಳಗಿ, ಪುರಸಭೆ ಮುಖ್ಯಾಕಾರಿ ಗೋಪಾಲ ಕಾಸೆ, ಸಿಪಿಐ ಆನಂದ ವಾಗ್ಮೊಡೆ, ಬಿಜೆಪಿ ಮುಖಂಡರಾದ ಸೋಮನಗೌಡ ಬಿರಾದಾರ, ಮಲಕೇಂದ್ರಗೌಡ ಪಾಟೀಲ ಇದ್ದರು.
ತಾಲೂಕಿನ ನ್ಯಾಯಬೆಲೆ ಅಂಗಡಿಕಾರರ ಮೇಲೆ ಇಲ್ಲಿಯವರೆಗೂ ಯಾವುದೇ ಒತ್ತಡ ಹಾಕಿಲ್ಲ. ಆದರೆ ಇದು ಲಾಕ್‌ಡೌನ್ ಇರುವುದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಬಡವರೇ ನನಗೆ ದೇವರು. ಆದ್ದರಿಂದ ಎಲ್ಲ ನ್ಯಾಯಬೆಲೆ ಅಂಗಡಿಕಾರರು ಈ ಸಂದರ್ಭದಲ್ಲಿ ಈ ಆದೇಶಗಳನ್ನು ಪಾಲಿಸಬೇಕು. ಪಡಿತರ ಧಾನ್ಯ ಪ್ಯಾಕ್ ಮಾಡಲು ಚೀಲಗಳು ಅವಶ್ಯ ಬಿದ್ದರೆ ನನ್ನನ್ನು ಸಂಪರ್ಕಿಸಬೇಕು.
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು.
Be the first to comment