ಜೀಲ್ಲಾ ಸುದ್ದಿಗಳು
ಪಾರದರ್ಶಕವಾಗಿ ಪಡಿತರ ಮುಟ್ಟಿಸಲು ಸೂಚನೆ.
ಭಾಲ್ಕಿ:(ಅಂಬಿಗ ನ್ಯೂಸ್) ಹಳೇ ಪಟ್ಟಣದ ೧೨೩ ಸಂಖ್ಯೆಯ ನ್ಯಾಯಬೆಲೆ ಅಂಗಡಿಯಲ್ಲಿ ಗುರುವಾರ ಶಾಸಕ ಈಶ್ವರ ಖಂಡ್ರೆ ಅವರು ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರ ವಿತರಣೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಹಾಮಾರಿ ಕೋವಿಡ್ ೧೯ ಸೋಂಕು ಜನರ ಜೀವ ಹಿಂಡುತ್ತಿದೆ. ಲಾಕ್ ಡೌನ್ ನಿಂದ ಕೃಷಿಕರು, ಬಡವರು, ಕೂಲಿ ಕಾರ್ಮಿಕರು, ಅಲೆಮಾರಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೇತ್ರದ ಜನರು ಆತಂಕ ಪಡಬೇಕಿಲ್ಲ. ಯಾರು ಧೈರ್ಯ ಕಳೆದು ಕೊಳ್ಳಬಾರದು. ನಿಮ್ಮೊಂದಿಗೆ ನಾನಿದ್ದೇನೆ ಎಂದು ಅಭಯ ನೀಡಿದ ಶಾಸಕರು ಇಂತಹ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ೨.೧೦ ಲಕ್ಷ ಜನರಿಗೆ ಕೋವಿಡ್-೧೯ ಸಂಬಂಧ ನೀಡುತ್ತಿರುವ ಪಡಿತರ ಏಪ್ರಿಲ್ ತಿಂಗಳಲ್ಲೇ ನೀಡಬೇಕಿತ್ತು ಒಂದಷ್ಟು ವಿಳಂಬವಾಗಿದೆ.
ಇದೀಗ ಚಾಲನೆ ನೀಡಿದ್ದು ತಾಲೂಕಿನ ಎಲ್ಲ ೧೩೫ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿಯೊಬ್ಬರಿಗೂ ಅಕ್ಕಿ ೫ ಕೆ.ಜಿ, ಬೇಳೆ ೧ ಕೆ.ಜಿ.ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ನ್ಯಾಯ ಬೆಲೆ ಅಂಗಡಿ ಮಾಲೀಕರು ಪಡಿತರ ತೂಕದಲ್ಲಿ ವ್ಯತ್ಯಾಸ ಆಗದಂತೆ ಪಾರದರ್ಶಕವಾಗಿ ಹಾಗೂ ಯಾವುದೇ ದೂರು ಬರದಂತೆ ಎಲ್ಲ ಫಲಾನುಭವಿಗಳಿಗೆ ಪಡಿತರ ವಿತರಿಸಬೇಕು ಇಲ್ಲದಿದ್ದರೇ ಅಂತವರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಅಣ್ಣಾರಾವ ಪಾಟೀಲ್, ಡಿವೈಎಸ್ಪಿ ಡಾ.ದೇವರಾಜ ಬಿ ಸೇರಿದಂತೆ ಹಲವರು ಇದ್ದರು.
Be the first to comment