ಜೀಲ್ಲಾ ಸುದ್ದಿಗಳು
-
ಹಳಿ ತಪ್ಪಿದ ಜಿಲ್ಲಾಧಿಕಾರಿಯ ಲೆಕ್ಕ .
ದಾವಣಗೆರೆ:-ಇನ್ನೇನು ಎಲ್ಲವೂ ಮುಗಿಯಿತು ಮುಂದಿನ ದಿನಗಳು ಅತ್ಯುತ್ತಮವಾಗಿರುತ್ತದೆ ಎಂದುಕೊಂಡ ಜಿಲ್ಲೆಯ ಜನತೆಗೆ.’ನರ್ಸ’ಮ್ಮನ ಆಟದಿಂದ ದಾವಣಗೆರೆ ಜಿಲ್ಲೆಯ ಜನತೆ ಪೀಕಲಾಟ ಪಡುವಂತಾಗಿತ್ತು .ಹಸಿರು ವಲಯಕ್ಕೆ ಪ್ರವೇಶ ಪಡೆದು ಸಂಭ್ರಮಿಸಬೇಕಾದ ಜನತೆ ಹಾಗೂ ಜಿಲ್ಲಾಧಿಕಾರಿಯ ಲೆಕ್ಕ ಬುಡಮೇಲಾಯಿತು .
ಒಂದು ಸಲ ಹಳಿ ತಪ್ಪಿದರೆ ಮತ್ತೆ ಆ ಹಳಿ ಮೇಲೆ ಸಾಗಬೇಕು ಎಂದು ಹೊರಟರೆ ಬರುವುದು ಅನೇಕ ಕಷ್ಟದ ಸರಮಾಲೆಗಳು .ಈಗ ದಾವಣಗೆರೆ ಜಿಲ್ಲೆಯ ಕಥೆಯೂ ಅದೇ ರೀತಿಯಾಗಿದೆ.
ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಲೆಕ್ಕಾಚಾರ ತಪ್ಪಿದ್ದರೂ ಎಲ್ಲಿ .?ಎಂಬ ಅನುಮಾನಗಳು ಜನತೆಯಲ್ಲಿ ಕಾಡತೊಡಗಿದೆ ಹಸಿರು ವಲಯದಲ್ಲಿ ಇದ್ದು ನೆಮ್ಮದಿಯಿಂದ ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳನ್ನು ಮಾಡಿಕೊಂಡು ಸಂಸಾರ ತೂಗಿಕೊಂಡು ಹೋಗುವ ಎನ್ನುವಷ್ಟರಲ್ಲಿ ಮೇಡ್ ಇನ್ ಚೀನಾದ ಕರೋನಾ ವೈರಸ್ ದಾವಣಗೆರೆಗೆ ಬಂದೇ ಬಿಟ್ಟಿತ್ತು .
ಇದೀಗ ಬಂದ ವರದಿಯ ಪ್ರಕಾರ ಹಳೆಯ ಎರಡು ಈಗ ಎಂಟು ಒಟ್ಟು ಹತ್ತು ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡು ಹಸಿರು ಇಲ್ಲ ,ಕೇಸರಿಯು ಇಲ್ಲ ,ಕೆಂಪು ಬಣ್ಣಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ .
ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಎಲ್ಲ ಇಲಾಖೆಯ ಅಧಿಕಾರಿಗಳು ಇದುವರೆಗೆ ಪಟ್ಟ ಶ್ರಮವೆಲ್ಲ ಸಮುದ್ರದ ನೀರಿನಲ್ಲಿ ಹುಣಸೆ ಹಣ್ಣು ಹಿಂಡಿದಂತಾಗಿದೆ .
ಮತ್ತೆ ಎಲ್ಲ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಕೆಳ ಹಂತದಿಂದ ಕರೋನಾ ಜಾಗೃತಿಯ ಜೊತೆಗೆ ಮುಂಜಾಗೃತಾ ಕ್ರಮ ಬಗ್ಗೆ ಕಟ್ಟುನಿಟ್ಟಿನ ಪಾಲನೆಗೆ ಆದೇಶಿಸಬೇಕು ,ಹದ್ದಿನ ಕಣ್ಣು ಇಟ್ಟು ಕಾರ್ಯ ನಿರ್ವಹಿಸುವಂತಾಗಿದೆ .
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಲೆಕ್ಕಾಚಾರ ತಪ್ಪಿದ್ದು ಎಲ್ಲಿ .?ಹಸಿರು ವಲಯಕ್ಕೆ ಪ್ರವೇಶ ಪಡೆದು ಹದಿನೆಂಟು ತಾಸಿನಲ್ಲಿ ನರ್ಸ್ ಮೂಲಕ ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿ ಕೇಸರಿ ವಲಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಂತೆ ಮತ್ತೆ 6 ಹೊಸ ಪ್ರಕರಣಗಳು ಸೇರ್ಪಡೆಗೊಂಡು ಕೆಂಪು ವಲಯಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಹಾಗಾದರೆ ಇವರ ಲೆಕ್ಕಾಚಾರದ ಹಳಿ ತಪ್ಪಿಸಿದ್ದು 533 ನೇ ಶಂಕಿತ ಕರೋನಾ ವೈರಸ್ ರೋಗಿಯಿಂದ ಅಲ್ಲವೇ .?
ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಇದ್ದರೂ, ಅಂತರ್ ಜಿಲ್ಲಾ ಪ್ರವೇಶ ನಿರ್ಬಂಧವಿದ್ದರೂ, ಈ 533 ನೇ ಶೊಂಕಿತ ಮಹಿಳೆಯೂ ಬಾಗಲಕೋಟೆಗೆ ಹೋಗಿ ಬಂದಿದ್ದಾದರೂ ಹೇಗೆ .ಇಲ್ಲಿ ಎಲ್ಲೋ ಒಂದು ಕಡೆ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿಲ್ಲವೇ .?
ಈಗಾಗಲೇ ಜಿಲ್ಲೆಯಲ್ಲಿ ಹತ್ತು ಪ್ರಕರಣಗಳು ಪತ್ತೆಯಾಗಿದ್ದರೂ ಜನತೆಯು ಮಾತ್ರ ಎಚ್ಚೆತ್ತುಕೊಳ್ಳದೇ ,ಸಾಮಾಜಿಕ ಅಂತರ ಕಾಪಾಡದೆ ಬೇಜವಾಬ್ದಾರಿ ತೋರುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ .
ಮಾರಿ ಊರಿಗೆ ಬಂದಾಯ್ತು ,ಕೇರಿಗೂ ಬಂದಾಯ್ತು, ಹೀಗೆ ಮೈಮರೆತರೆ ಮುಂದೆ ಜಿಲ್ಲೆಯ ಪ್ರತಿ ವ್ಯಕ್ತಿಯ ಮೈಮೇಲೂ ಕರೋನಾ ಎಂಬ ಮಾರಿ ಬಂದರೂ ಆಶ್ಚರ್ಯವಿಲ್ಲ .
29 ನೇ ತಾರೀಖಿನವರೆಗೆ ಜಿಲ್ಲಾಧಿಕಾರಿಗಳು ಕರೋನಾ ವೈರಸ್ ನಿಯಂತ್ರಣದ ವಿಚಾರದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳ ಒಟ್ಟಿಗೆ ಸಾಗಿ ಅತ್ಯುತ್ತಮ ಫಲಿತಾಂಶದೊಂದಿಗೆ ಹಸಿರು ವಲಯಕ್ಕೆ ಪ್ರವೇಶ ಪಡೆದ ಕ್ಷಣಾರ್ಧದಲ್ಲೇ ‘ನರ್ಸ್’ ಅಮ್ಮನಿಂದ ಜಿಲ್ಲೆಯ ಜನತೆಗೆ ಹೊಸ ಪೀಕಲಾಟ ,ತೊಳಲಾಟ, ಮನಸ್ಸಿನಲ್ಲಿ ತಳಮಳ ಆತಂಕ ಮನೆ ಮಾಡಿದೆ .ಮುಂದೆ ಏನು ಎಂಬ ಚಿಂತೆ ಶುರುವಾಗಿದೆ .
ಏನು ಇಲ್ಲದಿದ್ದ ಸಂದರ್ಭದಲ್ಲಿ ಹೊಸ ಎಂಟು ಪ್ರಕರಣಗಳು ಹುಟ್ಟಿಕೊಂಡಿದ್ದು .ಇನ್ನು ಮುಂದೆ ಅಧಿಕಾರಿಗಳು ಯಾವ ರೀತಿಯಲ್ಲಿ ಕರೋನಾ ವೈರಸ್ ನಿಯಂತ್ರಿಸುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ .
Be the first to comment