ಜೀಲ್ಲಾ ಸುದ್ದಿಗಳು
ಶಾಸಕ ಈಶ್ವರ ಖಂಡ್ರೆ ಪ್ರಸ್ತಾವನೆಗೆ ಪಾರ್ಲೆ-ಜಿ ಕಂಪನಿ ಸಮ್ಮತಿ
ಭಾಲ್ಕಿ:- ಭಾರತದ ಅತಿದೊಡ್ಡ ಬಿಸ್ಕೆಟ್ ತಯಾರಕ ಕಂಪನಿ ಪಾರ್ಲೆ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಕೊರೊನಾ ವಿರುದ್ಧದ ಸಮರಕ್ಕೆ ಸಾಥ್ ನೀಡಿದೆ. ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಪ್ರಸ್ತಾವನೆಗೆ ಸಮ್ಮತಿಸಿ ತಾಲೂಕಿಗೆ ಉಚಿತವಾಗಿ ೫೦ ಸಾವಿರ ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೇಟ್ ನೀಡಿದೆ
ಈ ಹಿನ್ನೆಲೆಯಲ್ಲಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ದತ್ತು ಕೇಂದ್ರದಲ್ಲಿ ಗುರುವಾರ ಶಾಸಕರು ಅನಾಥ, ವಿಶೇಷ ಚೇತನ ಮಕ್ಕಳಿಗೆ ಪಾರ್ಲೆ-ಜಿ ಬಿಸ್ಕೆಟ್ ವಿತರಿಸುವ ಮೂಲಕ ಚಾಲನೆ ನೀಡಿದರು
ಬಳಿಕ ಮಾತನಾಡಿದ ಅವರು, ಕೋವಿಡ್ ೧೯ ವಿರುದ್ಧದ ಹೋರಾಟಕ್ಕೆ ಪಾರ್ಲೆ-ಜಿ ಸಾಥ್ ನೀಡಿದ್ದು, ನನ್ನ ಮನವಿಗೆ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಪಾರ್ಲೆ-ಜಿ ಕಂಪನಿ ಸ್ಪಂದಿಸಿ ಲಾಕ್ ಡೌನ್ ಸಂಕಷ್ಟದಲ್ಲಿರುವ ಬಡವರು, ಕೂಲಿ ಕಾರ್ಮಿಕರು, ಮಕ್ಕಳು, ನಿರ್ಗತಿಕರು, ಬೀಕ್ಷುಕರಿಗೆ ವಿತರಿಸಲು ತಾಲೂಕಿಗೆ ೫೦ ಸಾವಿರ ಬಿಸ್ಕೆಟ್ ಪ್ಯಾಕೇಟ್ ಉಚಿತವಾಗಿ ನೀಡಿರುವುದು ಸಂತಸ ತಂದಿದೆ
ಪಾರ್ಲೆ-ಜಿ ಬಿಸ್ಕೆಟ್ ನಲ್ಲಿ ಪೌಷ್ಟಿಕಾಂಶ ಹೊಂದಿದ್ದು ಈ ಬಿಸ್ಕೆಟ್ ಸೇವನೆಯಿಂದ ರೋಗ ನಿರೋಧಕ ಶಕ್ತಿ ಬೆಳೆಯಲಿದ್ದು, ಕ್ಷೇತ್ರದಲ್ಲಿನ ಬಡ ಜನರು, ಮಕ್ಕಳನ್ನು ಗುರುತಿಸಿ ಅಧಿಕಾರಿಗಳು ಹಾಗೂ ನಮ್ಮ ಬೆಂಬಲಿಗರ ಮೂಲಕ ಸಮಾರೋಪಾದಿಯಲ್ಲಿ ಮನೆ ಮನೆಗೂ ನಿಷ್ಪಕ್ಷಪಾತವಾಗಿ ಎಲ್ಲರಿಗೂ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ತಹಸೀಲ್ದಾರ ಅಣ್ಣಾರಾವ ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್, ಗ್ರಾಪಂ ಅಧ್ಯಕ್ಷ ಶಶಿಧರ ಕೋಸಂಬೆ, ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಬಿರಾದಾರ್, ಆಡಳಿತಾಧಿಕಾರಿ ಮೋಹನ ರೆಡ್ಡಿ ಇದ್ದರು.
Be the first to comment