ಸುರಪುರದಲ್ಲಿ ಲಾಕ್ ಡೌನ್ ಸಡಿಲಿಕೆ ಬೆಳಗ್ಗೆ 4 ರಿಂದ ಮಧ್ಯಾಹ್ನ 3 ರವರೆಗೆ ಅಂಗಡಿಗಳು ಓಪನ್: ಪೌರಾಯುಕ್ತ ಜೀವನ ಕುಮಾರ್ ಕಟ್ಟೀಮನಿ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್:- 28 ಕೊರಾನಾ ವೈರಸ್ ಲಾಕ್ ಡೌನ್ ಸಡಿಲಿಕೆ ಹಿನ್ನಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸುರಪುರ ನಗರಸಭೆಯ ವ್ಯಾಪ್ತಿಯ-ರಂಗಂಪೇಟೆ, ದೀವಳಗುಡ್ಡ,ತಿಮ್ಮಾಪುರ,ಕುಂಬಾರಪೇಟ,ಸತ್ಯಂಪೇಟ,ವೆಂಕಟಾಪುರ ಸೇರಿದಂತೆ ಎಲ್ಲ ಕಡೆ ಕಿರಾಣಿ,ತರಕಾರಿ,ಹಣ್ಣಿನ ಅಂಗಡಿಗಳು ಇಂದಿನಿಂದ ಬುಧವಾರ 28 ನೇ ತಾರೀಖನಿಂದ ಮೇ 3 ರವರೆಗೆ ಬೆಳಗಿನ ಜಾವ 4 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಾಗೂ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರೈತರ ಕೃಷಿಗೆ ಸಂಬಂಧಿಸಿದ ಹಾರ್ಡ್ ವೆರ್,ರಸಗೊಬ್ಬರ,ಮೋಟಾರ್ ರಿವೈಡಿಂಗ್ ವರ್ಕ್ಸ್,ಬುಕ್ ಸ್ಟಾಲ್ ,ಸಿಮೆಂಟ್,ಕಬ್ಬಿಣ,ಅಂಗಡಿಗಳು ತೆರೆದಿರುತ್ತವೆ ಎಂದು ಪೌರಾಯುಕ್ತ ಜೀವನ ಕಟ್ಟೀಮನಿಯವರು ತಿಳಿಸಿದರು.

ಕಡ್ಡಾಯವಾಗಿ ಸಾಮಾಜಿಕ ಅಂತರ,ಮಾಸ್ಕ್ ಹಾಕಿಕೊಂಡು ವ್ಯಾಪಾರ ವಹಿವಾಟು ಮಾಡಬೇಕು ಹಾಗೂ ನಿಗದಿ ಮಾಡಿದ ಸಮಯ ಮುಗಿದ ನಂತರ ಅಂಗಡಿಗಳು ತೆರೆದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಆರಂಭದಲ್ಲಿ. ಜನತೆಗೆ ದಿನ ನಿತ್ಯದ ಬಳಕೆಗಾಗಿ ಗುಂಪು ಗುಂಪಾಗಿ ಸೇರದಿರಲು ಕಿರಾಣಿ,ತರಕಾರಿ,ಹಣ್ಣಿನ ಅಂಗಡಿಯ ಮುಂದೆ ಅಂತರ ಕಾಯ್ದು ಕೊಳ್ಳಲು ಸುಣ್ಣದಿಂದ 3 ಫೀಟ್ ನಂತೆ ಬಾಕ್ಸ್ ಗಳ ಗುರುತು ಹಾಕಿ ಎಡ-ಬಲ ಭಾಗದವರಿಗೆ ಒಂದೊಂದು ದಿನ ಅಂಗಡಿ ಬೆಳಗ್ಗೆ 10 ರಿಂದ 5 ರವರೆಗೆ ನಿಗದಿ ಮಾಡಿದ್ದರು. ಆದರೆ ಯುವಕರು ಮಾತ್ರ ದ್ವಿಚಕ್ರ ವಾಹನ ತೆಗೆದುಕೊಂಡು ತರಕಾರಿ,ಕಿರಾಣಿ ಏನೇನೊ ನೆಪ ಹೇಳಿ ತಿರುಗಾಡಲು ಆರಂಭಿಸಿದರು.ಅದಕ್ಕೆ ಬ್ರೇಕ್ ಹಾಕಲು ಬೆಳಗಿನ ಜಾವ 4 ರಿಂದ ಮಧ್ಯಾಹ್ನ 12 ರವರೆಗೆ ಅಂಗಡಿಗಳಿಗೆ ಓಪನ್ ಮಾಡಲು ಅವಕಾಶ ಕೊಟ್ಟು ನಂತರ ಬೇಕಾಬಿಟ್ಟಿಯಾಗಿ ತಿರುಗಾಡುವರಿಗೆ ಬ್ರೇಕ್ ಹಾಕಿದ್ದರು. ಎರಡನೇ ಹಂತದ ಲಾಕ್ ಡೌನ್ ಮೇ 3 ಅಂತ್ಯದ ನಂತರ ಸೋಂಕಿತರ ಪ್ರಕರಣ ಕಂಡು ಬರದ ಕಾರಣ 13 ಜಿಲ್ಲೆಗಳಲ್ಲಿ ಆರ್ಥೀಕ ಚಟುವಟಿಕೆಗೆ ಅವಕಾಶ ನೀಡಲು ಲಾಕ್ ಡೌನ್ ನಿಯಮಗಳನ್ನು ರಾಜ್ಯ ಸರ್ಕಾರ 13 ಜಿಲ್ಲೆಗಳನ್ನು ಹಸಿರು ಜಿಲ್ಲೆಗಳೆಂದು ಗುರುತಿಸಿದ್ದು ಅದರಲ್ಲಿ ಯಾದಗಿರಿ ಜಿಲ್ಲೆಯು ಒಂದಾಗಿದ್ದು 3 ಗಂಟೆ ಹೆಚ್ಚಿನ ಸಮಯ ನಿಗದಿ ನೀಡಿದ್ದು ವ್ಯಾಪಾರಸ್ಥರಿಗೆ ಸಂತಸ ತಂದಿದೆ.

Be the first to comment

Leave a Reply

Your email address will not be published.


*