ಜೀಲ್ಲಾ ಸುದ್ದಿಗಳು
ಬಿದರ ಏಪ್ರಿಲ್ 29 (ಅಂಬಿಗ ನ್ಯೂಸ್ ): ಕೊವಿಡ್-19 ಸೋಂಕು ತಡೆಗಟ್ಟಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಪಡಿತರ ವಸ್ತುಗಳ ವಿತರಣೆಯ ಕುರಿತಂತೆ ಹೊರಡಿಸಲಾದ ಕೆಲವು ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 723 ನ್ಯಾಯಬೆಲೆ ಅಂಗಡಿಗಳ ಮೂಲಕ 39806 ಅಂತ್ಯೋದಯ, 307106 ಬಿಪಿಎಲ್ ಹಾಗೂ 41583 ಎಪಿಎಲ್ ಪಡಿತರ ಚೀಟಿದಾರರಿಗೆ ಪಡಿತರಧಾನ್ಯವನ್ನು ಮೇ-2020 ಮಾಹೆಗೆ ವಿತರಿಸಲಾಗುತ್ತಿದೆ. ಜಿಲ್ಲೆಗೆ 68160.00 ಕ್ವಿಂ. ಅಕ್ಕಿ ಹಾಗೂ 3469.12 ಕ್ವಿಂ. ತೊಗರಿಬೇಳೆ ಹಂಚಿಕೆಯಾಗಿರುತ್ತದೆ.
ಅಂತ್ಯೋದಯ ಮತ್ತು ಪಿಹೆಚ್‌ಹೆಚ್ (ಬಿಪಿಎಲ್) ಪ್ರತಿ ಸದಸ್ಯರಿಗೆ 10 ಕೆ.ಜಿ. ಯಂತೆ ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ 1 ಕೆ.ಜಿ. ತೊಗರಿಬೇಳೆಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಎಪಿಎಲ್ (ಎನ್‌ಪಿಹೆಚ್‌ಹೆಚ್) ಪಡಿತರ ಚೀಟಿಯ ಒಂದು ಯುನಿಟ್‌ಗೆ 5 ಕೆ.ಜಿ. ಮತ್ತು 2 ಹಾಗೂ ಅದಕ್ಕಿಂತ ಮೇಲ್ಪಟ್ಟು ಇರುವ ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ. ಯಂತೆ ಪ್ರತಿ ಕೆ.ಜಿ. ರೂ.15 ದರದಲ್ಲಿ ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತಿದೆ.
ಪಡಿತರ ವಸ್ತುಗಳನ್ನು ಹೊರತುಪಡಿಸಿ ಇನ್ನಾವುದೇ ವಸ್ತುಗಳನ್ನು ಮಾರಾಟ ಮಾಡುವುದು ನಿಷೇಧ. ಪಡಿತರ ಚೀಟಿಯಲ್ಲಿನ ಯಾರಾದರೂ ಒಬ್ಬ ಸದಸ್ಯ ಮಾತ್ರ ಬಂದು ಪಡಿತರ ಪಡೆಯತಕ್ಕದ್ದು.
ಪಡಿತರ ವಿತರಣೆ ಕಾರ್ಯವನ್ನು ಮೇ 1ನೇ ತಾರೀಖಿನಿಂದ ತಿಂಗಳ ಪೂರ್ತಿ ವಿತರಿಸಲಾಗುತ್ತಿದ್ದು, ಯಾರೂ ಆತಂಕ ಪಡುವುದು ಅವಶ್ಯವಿರುವುದಿಲ್ಲ. ಕಾರಣ ಪ್ರತಿದಿನ ಪಡಿತರ ಚೀಟಿದಾರರು ಗುಂಪು ಸೇರದೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಅವಧಿಯಲ್ಲಿ ಪಡಿತರವನ್ನು ಪಡೆಯಬಹುದಾಗಿದೆ.
ನ್ಯಾಯಬೆಲೆ ಅಂಗಡಿಕಾರರು ಪಡಿತರವನ್ನು ಮೇ 1ನೇ ತಾರೀಖಿನಿಂದ ತಿಂಗಳ ಅಂತ್ಯದವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ (ಮಧ್ಯಾಹ್ನ ಊಟದ ಸಮಯ ಹೊರತುಪಡಿಸಿ) ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರ ವಿತರಣೆ ಮಾಡತಕ್ಕದ್ದು. ನ್ಯಾಯಬೆಲೆ ಅಂಗಡಿಕಾರರು ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ್ತç ಹಾಗೂ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಬಳಸತಕ್ಕದ್ದು.
ಪ್ರತಿದಿನ 50 ರಿಂದ 70 ಪಡಿತರ ಚೀಟಿದಾರರಿಗೆ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆಯನ್ನು ಕಾಯ್ದುಕೊಂಡು ಅಂಗಡಿಯ ಮುಂದೆ ಚೌಕ್ ಬಾಕ್ಸ್ ಹಾಕಿ ಅದರಲ್ಲಿಯೇ ಪಡಿತರ ಚೀಟಿದಾರರಿಗೆ ನಿಲ್ಲಲು ತಿಳಿಸಿ, ನಿಯಮಾನುಸಾರ ಪಡಿತರ ವಿತರಿಸುವುದು.
ಕಾರಣ ಪ್ರತಿ ಪಡಿತರ ಚೀಟಿದಾರರು ಕಡ್ಡಾಯವಾಗಿ ಪಡಿತರ ಚೀಟಿಯೊಂದಿಗೆ ತಮ್ಮ ಮೊಬೈಲ್‌ನ್ನು ತೆಗೆದುಕೊಂಡು ಬಂದು ಅಂಗಡಿಕಾರರಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಿ, ತಂತ್ರಾಂಶದಿಂದ ಬಂದ ಓಟಿಪಿಯನ್ನು ಅಂಗಡಿಕಾರರಿಗೆ ನೀಡಿ ತಮಗೆ ನಿಗಧಿಯಾದ ಪ್ರಮಾಣದಂತೆ ಪಡಿತರ ಪಡೆಯುವುದು ಅಗತವಿದ್ದಲ್ಲಿ ಸ್ಯಾನಿಟೇಜರ್ ಬಳಸಿ ಬಯೋಮೆಟ್ರಿಕ್ ಮಾಡಿ ಪಡಿತರ ಪಡೆಯುವುದು.
ಪಡಿತರ ಚೀಟಿದಾರರು ಪಡಿತರ ಪಡೆಯಲು ಬರುವಾಗ ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ್ತç ಧರಿಸಿ, ಪಡಿತರ ತೆಗೆದುಕೊಳ್ಳುವುದು. ನ್ಯಾಯಬೆಲೆ ಅಂಗಡಿಕಾರರು ಜನದಟ್ಟಣೆಯಾಗದಂತೆ ಕಾಳಜಿ ವಹಿಸಿ ಪಡಿತರ ವಿತರಿಸತಕ್ಕದ್ದು.
ಜಿಲ್ಲೆಯಲ್ಲಿ ಪೋರ್ಟಾಬಿಲಿಟಿ ಪದ್ದತಿಯು ಜಾರಿಯಲ್ಲಿರುವುದರಿಂದ ರಾಜ್ಯದ ಯಾವುದೇ ಪಡಿತರ ಚೀಟಿದಾರರು ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾಗಿದೆ.
ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗೆ ಆಹಾರಧಾನ್ಯ ಮತ್ತು ತೊಗರಿಬೇಳೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಫಲಾನುಭವಿಗಳಿಗೆ ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ ಸಂಬಂಧಿಸಿದ ತಾಲೂಕು ತಹಶೀಲ್ದಾರ ಕಚೇರಿಯ ಆಹಾರ ಶಾಖೆ ಹಾಗೂ ಉಪನಿರ್ದೇಶಕರು ಆಹಾರ ಇವರ ಕಚೇರಿಗೆ ದೂರು ಸಲ್ಲಿಸಬಹುದಾಗಿದೆ.
ಔರಾದ (ಬಿ) ತಹಸೀಲ್ ಕಛೇರಿ ಆಹಾರ ಶಿರಸ್ತೇದಾರರು ಪೋ. ನಂ.9008834904 ಮತ್ತು ಆಹಾರ ನಿರೀಕ್ಷಕರು ಪೋ ನಂ.9901741151 ಮತ್ತು 9449269001., ಬಸವಕಲ್ಯಾಣ ತಹಸೀಲ್ ಕಛೇರಿ ಆಹಾರ ಶಿರಸ್ತೇದಾರರು ಪೋ. ನಂ.9900227176 ಮತ್ತು ಆಹಾರ ನಿರೀಕ್ಷಕರು ಪೊ ನಂ.9844302280 ಮತ್ತು 9972460457., ಭಾಲ್ಕಿ ತಹಸೀಲ್ ಕಛೇರಿ ಆಹಾರ ಶಿರಸ್ತೇದಾರರು ಪೋ. ನಂ.9448262431 ಮತ್ತು ಆಹಾರ ನಿರೀಕ್ಷಕರು ಪೊ ನಂ.9448349496 ಮತ್ತು 9448947550., ಬೀದರ ತಹಸೀಲ್ ಕಛೇರಿ ಆಹಾರ ಶಿರಸ್ತೇದಾರರು ಪೋ. ನಂ.9900955598 ಮತ್ತು ಆಹಾರ ನಿರೀಕ್ಷಕರು ಪೊ ನಂ.9353149221
ಅನೌಪಚಾರಿಕ ಪಡಿತರ ಪ್ರದೇಶ ಬೀದರ ಆಹಾರ ನಿರೀಕ್ಷಕರು ಪೋ ನಂ.9886413420, 8951753186 ಮತ್ತು 9740226135. ಹುಮನಾಬಾದ್ ತಹಸೀಲ್ ಕಛೇರಿ ಆಹಾರ ಶಿರಸ್ತೇದಾರರು ಪೋ. ನಂ.9448262431 ಮತ್ತು ಆಹಾರ ನಿರೀಕ್ಷಕರು. ಪೊ ನಂ.9481207823 ಮತ್ತು 9964874917.
Be the first to comment