ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ, ಕೊರೋನಾ ರೋಗ ನಿಯಂತ್ರಣದಲ್ಲಿ ಹಗಲಿರುಳು ಹೋರಾಟ ನಡೆಸುತ್ತಿರುವ ಆಶಾ ಕಾಯ೯ಕತೆ೯ಯರು,ಆರೋಗ್ಯ ಇಲಾಖೆಯವರು,ಕಂದಾಯ ಇಲಾಖೆಯವರು,ಪೊಲೀಸ್ ಇಲಾಖೆಯವರು,ಎಲ್ಲಾ ಸ್ಥಳೀಯ ಆಡಳಿತದವರು ಹಾಗೂ ಇವರ ಕಾಯ೯ವೈಖರಿಯನ್ನು ಜನತೆಗೆ ತಿಳಿಸಿ,ಜನತೆಯಲ್ಲಿ ಜಾಗೃತಿ ಮೂಡಿಸುವ ಪತ್ರಕತ೯ರು, ಇವರೆಲ್ಲರ ಸೇವೆ ಅಪಾರವಾದದ್ದು.ನಾನು ಇವರೆಲ್ಲರಿಗೂ ಚಿರ ಋಣಿ ಎಂದು ಕೂಡ್ಲಿಗಿ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ನುಡಿದರು.ಅವರು ಏ೩೦ರಂದು ಪಟ್ಟಣದ ಪ್ರವಾಸಿ ಮಂದಿರದ ಆವರಣರಲ್ಲಿ,ಕಿಟ್ ವಿತರಣಾ ಕಾಯ೯ಕ್ರಮದಲ್ಲಿ ಮಾತನಾಡಿದರು.ತಾಲೂಕಿನ ಎಲ್ಲಾ ಜನತೆಯಲ್ಲಿ ಜಾಗೃತಿ ಮೂಡಿಸಿ,ಅವರಿಂದ ಅಗತ್ಯ ಮಾಹಿತಿ ಸಂಗ್ರಹಿಸುವ ಗುರುತರ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ,ತಾಲೂಕಿನಾಧ್ಯಂತ ಕೊರೋನಾ ಯುದ್ಧದಲ್ಲಿ ದಳಪತಿಯಂತೆ ತಮ್ಮನ್ನ ತೊಡಗಿಸಿಕೊಂಡಿರುವ ಹೋರಟಗಾರರಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿದೆ ಎಂದರು.ಕೂಡ್ಲಿಗಿ ಜನತೆ ಹೆತ್ತವರ ಪ್ರೀತಿ ಮಮತೆಯನ್ನು ನೀಡಿದ್ದಾರೆ,ನನ್ನ ಜೀವನದಲ್ಲಿ ಯಾವತ್ತಿಗೂ ಕೂಡ್ಲಿಗಿಯ ಜನತೆಯನ್ನ ಮರೆಯಲಾರೆನು ಎಂದು ಅವರು ನುಡಿದರು.ತಹಶೀಲ್ದಾರರಾದ ಎಸ್.ಮಹಾಬಲೇಶ್ವರ ಮಾತನಾಡಿ,ಕೊರೋನಾ ವಿರುದ್ಧದ ಹೋರಾಟದಲ್ಲಿ ಆಶಾ ಕಾಯ೯ಕತೆ೯ಯರು ಹಾಗೂ ಅಂಗನವಾಡಿ ಮತ್ತು ಕಿರಿಯ ಆರೋಗ್ಯ ಕಾಯ೯ಕತೆ೯ಯರ ಪಾತ್ರ ಪ್ರಮುಖದ್ದಾಗಿದೆ.ತಮ್ಮ ನಿಗಧಿತ ಕಾಯ೯ದೊಂದಿಗೆ ಸಾಂದಭಿ೯ಕವಾಗಿ ಹೆಚ್ಚುವರಿಯಾಗಿ ಕೊರೋನಾ ಯುದ್ಧದ ದಳಪತಿಗಳಾಗಿಯೂ ಕಾಯ೯ನಿವ೯ಸುತ್ತಿದ್ದಾರೆ. ಬಹುದಿನಗಳಿಂದ ಪ್ರತಿದಿನದ ೨೪ತಾಸುಗಳ ಕಾಲ ಸಾವ೯ಜನಿಕರ ಹಿತಕ್ಕಾಗಿ ಸಕಾ೯ರಕ್ಕೆ ಸಹಕಾರಿಯಾಗಿ ಕಾಯ೯ನಿವ೯ಹಿಸುತ್ತಿದ್ದಾರೆ. ಅವರ ತ್ಯಾಗ,ಶ್ರಮ ಹಾಗೂ ಪ್ರಾಮಾಣಿಕ ಸೇವೆಗೆ ಬೆಲೆಕಟ್ಟಲಾಗದು.ಕಥ೯ವ್ಯ ಸಂದಭ೯ದಲ್ಲಿ ಜನತೆ ಅವರೊಂದಿಗೆ ಸ್ಪಂಧಿಸಬೇಕಿದೆ ಎಂದರು.ತಾಲೂಕಿನ ಸಮಸ್ಥ ಜನತೆಯ ಪರವಾಗಿ ತಾವು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
*ವೈಯಕ್ತಿಕ ನೆರವು* ಶಾಸಕ ಗೋಪಾಲಕೃಷ್ಣರವರು,ತಮ್ಮ ವೈಯಕ್ತಿಕ ಕಚಿ೯ನಲ್ಲಿ ತಾಲೂಕಿನ ಎಲ್ಲಾ ಆಶಾ ಕಾಯ೯ಕತೆ೯ಯರಿಗೆ, ಅಂಗನವಾಡಿ ಕಾಯ೯ಕತೆ೯ಯರಿಗೆ ಹಾಗೂ ಮೇಲ್ವಿಚಾರಕರಿಗೆ,ಕಿರಿಯ ಆರೋಗ್ಯಸಹಾಯಕರಿಗೆ, ಸೇರಿದಂತೆ ಇತರರಿಗೆ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಕೊರೋನಾ ವಿರುದ್ಧದ ಸೈನಿಕರಿಗೆ ಚತ್ರಿ ಹಾಗೂ ಆಹಾರ ಸಾಮಾಗ್ರಿ,ಅಗತ್ಯ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ನೀಡಿದರು. ಸಾಂಕೇತಿಕವಾಗಿ ಹಾಜರಿದ್ದ ಹಲವರಿಗೆ ವಿತರಿಸಲಾಯಿತು, ಉಳಿದಂತೆ ಎಲ್ಲರಿಗೂ ಆಯಾ ಕಾಯ೯ಕೇಂದ್ರಗಳಿಗೆ ತಲುಪಿಸಲಾಗುವುದೆಂದು ತಿಳಿದುಬಂದಿದೆ.ಡಿವೈಎಸ್ಪಿ ಶಿವಕುಮಾರ,ಸಿಪಿಐ ಪಂಪನಗೌಡ,ಗುಡೇಕೋಟೆ ಜಿ.ಪಂ.ಸದಸ್ಯ ವೆಂಕಟೇಶ,ಉಜ್ಜಿನಿ ಜಿ.ಪಂ ಸದಸ್ಯ ಹಷ೯ವಧ೯ನ,ಹೂಡೇಂ ಜಿಪಂ ಸದಸ್ಯ ತರಕಾರಿ ರೇವಣ್ಣ,ತಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು,ಸದಸ್ಯರು ಇದ್ದರು.ಪಿಎಸ್ಐ ತಿಮ್ಮಣ್ಣ,ತಾಲೂಕು ಕಚೇರಿಯ ಸಿಬ್ಬಂದಿ ಹಾಗೂ ವಿವಿದ ಇಲಾಖೆಗಳ ಅಧಿಕಾರಿಗಳು, ಪ ಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ ಇತರರು,ಮುಖಂಡರಾದ ಹೆಚ್.ವೀರನಗೌಡ,ತೊಣಸಿಗೇರಿ ಮಲ್ಲಿಕಾಜು೯ನ,ಬಂಗಾರು ಹನುಮಂತು,ಮಂಜುನಾಥ,ಶಾಸಕರ ಆಪ್ತ ಸಹಾಕರಾದ ಬಂಡ್ರಿ ಶ್ರೀಕಾಂತ್,ಭರತ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.ತಾಲೂಕಿನ ಬಹುತೇಕ ಕೊರೋನಾ ವಿರುದ್ಧದ ಹೋರಾಟಗಾರರು ಕಾಯ೯ಕ್ರಮದಲ್ಲಿ ಭಾಗಿಯಾಗಿದ್ದರು.
Be the first to comment