ಭಾರತಿ ಯನ್ನು ಬಲಿ ತೆಗೆದುಕೊಂಡು- ತಲೆ ನೋವಾದ ತಲೆ ನೋವಿನ ಡಬ್ಬಿ..!?

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು,ಕೂಡ್ಲಿಗಿ ಪೊಲೀಸ್ ಠಾಣೆವ್ಯಾಪ್ತಿ ನಡುಗುತಿ೯ಗ್ರಾಮ. ಆಕಸ್ಮಿಕವಾಗಿ ಚಿಕ್ಕ ಪ್ಲಾಸ್ಟಿಕ್ ಡಬ್ಬಿಯನ್ನು ನುಂಗಿದ್ದಮಗು,ಸಾವಿಗೀಡಾದ ಘಟನೆ ಗುರುವಾರ ಜರುಗಿದೆ.ಮೃತ ಹೆಣ್ಣುಮಗು ಒಂಬತ್ತು ತಿಂಗಳ ವಯೋಮಾನದ ಭಾರತಿ, ನಡುಗುತಿ೯ ಗ್ರಾಮದ ಚಲುವಾದಿ ಕರಿಬಸಯ್ಯ ಹಾಗೂ ಕಾವೇರಿ ಎಂಬುವವರ ಮಗು ಎಂದು ತಿಳಿದುಬಂದಿದೆ. ತಲೆನೋವು ನಿವಾರಣೆಗೆ ಕಾರಣವಾಗಬೇಕಿದ್ದ ಮೆನ್ತೋಪ್ಲಸ್ ಚಿಕ್ಕ ಮಕ್ಕಳಿರುವ ಪೋಷಕರಿಗೆ ತಲೆನೋವಾಗಿದೆ.2ರೂ ಬೆಲೆಯ ಚಿಕ್ಕ ಮೆಂತೋಪ್ಲಸ್ ಚಿಕ್ಕ ಪ್ಲಾಸ್ಟಿಕ್‌ ಡಬ್ಬಿಯೊಂದಿಗೆ ಆಟವಾಡುತ್ತಿದ್ದ ಮಗು. ಕೆಲ ಸಮಯದಲ್ಲಿ ಉಸಿರಾಡಲು ತೀರಾ ತೊಂದರೆ ಪಡುತ್ತಿರುವುದನ್ನು ಗಮನಿಸಿದ ಪೋಷಕರು,ಆಟವಾಡಲು ಕೈಯಲ್ಲಿಡಿದು ಕೊಂಡಿದ್ದ ಚಿಕ್ಕಡಬ್ಬಿ ಕಾಣದಾದಾಗ ಪರೀಕ್ಷಿಸಲಾಗಿ,ಡಬ್ಬಿ ನುಂಗಿರುವುದು ಖಚಿತಪಡಿಸಿಕೊಂಡಿದ್ದಾರೆ, ಪ್ರಥಮ ಚಿಕಿತ್ಸೆ ಮೂಲಕ ಹೊರತೆಗೆಯುವ ಪ್ರಯತ್ನ ನಡೆಸುತ್ತಲೇ ಕೂಡ್ಲಿಗಿ ಆಸ್ಪತ್ರೆಗೆಂದು ತೆರಳಿದ್ದಾರೆ.ಮಾಗ೯ಮಧ್ಯದಲ್ಲಿಯೇ ಬಾಲಕಿ ಭಾರತಿ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ.

Be the first to comment

Leave a Reply

Your email address will not be published.


*