ಜೀಲ್ಲಾ ಸುದ್ದಿಗಳು
ಭಾಲ್ಕಿ, ಮಹಾಮಾರಿ ಕೊರೊನಾ (ಕೊವಿಡ್-19) ನಿಂದ ದೇಶ ಹಾಗೂ ರಾಜ್ಯ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಹಾಗೂ ಸಾವಿರಾರು ಬಡ ಕುಟುಂಬದವರು ಉದ್ಯೋಗವಿಲ್ಲದೆ ಹಸಿವಿನಿಂದ ಕಂಗಾಲಾಗಿರುವ ವಿಷಮ ಪರಿಸ್ಥಿತಿಯಲ್ಲಿ ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿದೊದ್ದೇಶ ಸಹಕಾರ ಸಂಘವು ನೆರವಿಗೆ ಧಾವಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 75 ಸಾವಿರ ರೂ. ಗಳ ಚೆಕ್‍ನ್ನು ಮಾನ್ಯ ಈಶ್ವರ ಖಂಡ್ರೆಯವರ ಸಮ್ಮುಖದಲ್ಲಿ ಮಾನ್ಯ ತಹಸಿಲ್ದಾರು ಭಾಲ್ಕಿ ಇವರಿಗೆ ಹಸ್ತಾಂತರಿಸಲಾಯಿತು.
ಅದೇ ರೀತಿ ಮಾನ್ಯ ಶಾಸಕರ ನೇತ್ರತ್ವದಲ್ಲಿ ತಾಲೂಕಿನ ರೈತರಿಂದ ತರಕಾರಿಯನ್ನು ಖರೀದಿಸಿ ಸ್ಥಳೀಯ ಬಡ ಕುಟುಂಬಗಳಿಗೆ ವಿತರಣೆ ಮಾಡುವ ಕಾರ್ಯಕ್ಕಾಗಿ 25 ಸಾವಿರ ರೂಪಾಯಿ ದೇಣಿಗೆಯನ್ನು ನಿಡಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಲ್ಮಂಡಗೆ, ಉಪಾಧ್ಯಕ್ಷ ಭಗವಾನ ವಲಾಂಡೆ, ಕಾರ್ಯದರ್ಶಿ ನಾಗಭೂಷಣ ಮಾಮಡಿ, ನಿರ್ದೇಶಕರಾದ ಶರಣಪ್ಪಾ ರಾಚೋಟ್ಟೆ, ಬಸವರಾಜ ರಂಜೇರೆ, ಪ್ರಭು ಎಸ್. ಡಿಗ್ಗೆ, ಚಂದ್ರಕಾಂತ ಮಾಶಟ್ಟೆ, ರಾಜಕುಮಾರ ಘಂಟೆ, ಷಡಕ್ಷರಿ ಹಿರೇಮಠ, ಸೋಮನಾಥ ಮುದ್ದಾ, ಬಾಬುರಾವ ಬಿರಾದಾರ, ವೀರಶಟ್ಟಿ ಇಟಗೆ, ಅನಿತಾ ಗುರಣ್ಣಾ, ಪುಣ್ಯವತಿ ಕಾಮಣ್ಣಾ ಮತ್ತು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪಾ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಸಂತೋಷ ಸ್ವಾಮಿ ಹಾಗೂ ವಿಶ್ವನಾಥ ವಾಡೆ ಹಾಜರಿದ್ದರು.
Be the first to comment