ಜೀಲ್ಲಾ ಸುದ್ದಿಗಳು
ಭಾಲ್ಕಿ:- ತಾಲೂಕಿನ ಗಡಿ ಭಾಗದ ಲಖಣಗಾಂವ, ಭಾತಂಬ್ರಾ ಸೇರಿ ಮುಂತಾದ ಕಡೆಗಳಲ್ಲಿ ಶಾಸಕ ಈಶ್ವರ ಖಂಡ್ರೆ ಮಿಂಚಿನ ಸಂಚಾರ ನಡೆಸಿ ಲಾಕ್ ಡೌನ್ ಸ್ಥಿತಿಗತಿಯ ಅವಲೋಕನ ನಡೆಸಿದರು.
ಶುಕ್ರವಾರ ಬೆಳಗ್ಗೆ ಲಖಣಗಾಂವ ಚೆಕ್ ಪೋಸ್ಟ್ ಗೆ ದಿಢೀರ ಭೇಟಿ ನೀಡಿದ ಶಾಸಕರು, ಗಡಿಯಾಚೆ ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ೧೯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಗಡಿಯಲ್ಲಿ ಕಟ್ಟಚ್ಚೆರ ವಹಿಸುವಂತೆ ಸೂಚನೆ ನೀಡಿದರು.
ಬಳಿಕ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಹಣ್ಣು ವಿತರಿಸಿ, ಚಿಕಿತ್ಸೆಗೆ ಹೊರಗಿನಿಂದ ಬರುತ್ತಿರುವ ರೋಗಿಗಳ ಮಾಹಿತಿ ಪಡೆದುಕೊಂಡರು.
ಅಲ್ಲಿಂದ ನೆರವಾಗಿ ಭಾತಂಬ್ರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಖಂಡ್ರೆ ಅವರು ಭೇಟಿ ನೀಡಿ ಕೊರೊನಾ ಟೆಸ್ಟ್ ಕಿಟ್, ಔಷಧಿ ಸೇರಿದಂತೆ ವೈದ್ಯಕೀಯ ಸೇವೆಯಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದರು.
ಹೊರ ಜಿಲ್ಲೆ, ರಾಜ್ಯದಿಂದ ಬಂದ ಜನರ ಮೇಲೆ ವೈದ್ಯರು ನಿಗಾಯಿಡಬೇಕು ಎಂದು ಶಾಸಕ ಖಂಡ್ರೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಅಂಬಾದಾಸ ಕೋರೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ತಹಸೀಲ್ದಾರ ಅಣ್ಣಾರಾವ ಪಾಟೀಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್, ಡಿವೈಎಸ್ಪಿ ಡಾ.ದೇವರಾಜ ಬಿ, ತಾಲೂಕು ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ ನೀರಗೂಡೆ ಸೇರಿದಂತೆ ಹಲವರು ಇದ್ದರು.
Be the first to comment