ಕೊರೋನಾ ಲಾಕ್ ಡೌನ್ ಎಫೆಕ್ಟ್:ಆದಾಯವಿಲ್ಲದ ಆಟೋಚಾಲಕರಿಗೆ- ಪ್ರಾಧ್ಯಾಪಕರಿಂದ ಆಹಾರ ಕಿಟ್ ನೆರವು

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ, ಸ್ಥಳೀಯ ಪ್ರಾಧ್ಯಾಪಕರು ಪಟ್ಟಣದ ಆಟೋ ಚಾಲಕರಿಗೆ ಆಹಾರದ ಕಿಟ್ ವಿತರಿಸಿದರು.ಸ್ಥಳಿಯ ಪ್ರಾಧ್ಯಾಪಕರಾದ ನಿಕ೯ಲರ ಕಲ್ಲಪ್ಪ ಹಾಗೂ ಪಿ.ಕೊಟ್ರೇಶ ರವರು ಒಡಗೂಡಿ ಕಿಟ್ ವಿತರಿಸಿದರು.ಪಿ.ಕೊಟ್ರೇಶ ಮಾತನಾಡಿ ಸಕಾ೯ರ ಸಾವ೯ಜನಿಕ ಹಿತಕ್ಕಾಗಿ ಲಾಕ್ ಡೌನ್ ನ್ನು ತುಂಬಾ ಪರಿಣಾಮ ಕಾರಿಯಾಗಿ ಜಾರಿಗೆ ತಂದಿದೆ.ಅದು ಸ್ವಾಗತಾಹಃ, ಅದರ ಪರಿಣಾಮ ಎಲ್ಲಾ ಕಾಮಿ೯ಕರು ನಿರುಧ್ಯೋಗಿಗಳಾಗಿದ್ದಾರೆ. ಕುಟುಂಬ ನಿವ೯ಹಣೆ ಅಸಾಧ್ಯ ಎನ್ನುವ ಹಂತ ತಲುಪಿದೆ. ಈ ಸಂದಭ೯ದಲ್ಲಿ ಸ್ನೇಹಿತರ ಸಲಹೆ ಯ ಮೇರೆಗೆ ತಾವು ಪಟ್ಟಣದ ಆಟೋಚಾಲಕರಿಗೆ ಅಗತ್ಯ ಆಹಾರದ ಕಿಟ್ ನ್ನು ವಿತರಿಸುತ್ತಿರುವುದಾಗಿ ಪಿ.ಕೊಟ್ರೇಶ ತಿಳಿಸಿದರು.

ಆಟೋ ಚಾಲಕ ಮುಖಂಡ ಟಿ.ಶಿವಮೂತೆ೯ಪ್ಪ.ಕುಮಾರಸ್ವಾಮಿ.ಚೌಡಪ್ಪ.ದುರುಗಪ್ಪ.ಗಿರೀಶ.ರಾಘವೇಂದ್ರ.ಗೋವಿಂದಪ್ಪ.ಅನಿಲ.ನಾಗರಾಜ.ಜುಬೇರ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*