ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಅಂಚೆಕಚೇರಿ ಹತ್ತಿರ ಕಂಡುಬಂದ ದೃಶ್ಯಾವಳಿ-ಕರೊನ ತುರ್ತು ಪರಿಸ್ಥಿತಿಯಲ್ಲಿ ಜನ ಭಾಗದ ಅಂಗವಿಕಲ, ವಿಧವೆ ಹಾಗೂ ವೃದ್ಧರ ಮಾಸಾಶಾಸನಕ್ಕೆ ಜನರು ಪರದಾಡುತ್ತಿದ್ದರು ಕೂಡ್ಲಿಗಿ ಅಂಚೆ ಕಚೇರಿಯಲ್ಲಿ ಮಾತ್ರ ತಾಂತ್ರಿಕ ತೊಂದರೆ ಎಂದು ಅಂಚೆ ಕಚೇರಿಯ ಸಿಬ್ಬಂದಿಗಳು ಬಂದಿರುವ ಫಲಾನುಭವಿಗಳಿಗೆ ಈ ಉತ್ತರವನ್ನು ಸುಮಾರು 6 ತಿಂಗಳಿನಿಂದ ಕೊಡುತ್ತಿದ್ದಾರೆ.ಕಳೆದ ಆರೇಳು
ಸಮಪ೯ಕವಾಗಿ ಪಲಾನುಭಚಿಗಳಿಗೆ ಹಣ ಸಂದಾಯವಾಗಿಲ್ಲ ಜನರ ಈಗಿನ ಪರಿಸ್ಥಿತಿಗೆ ಹಣ ಅತ್ಯವಶ್ಯಕವಾಗಿದ್ದು.ಕೆಲವರಿಗೆ ಅವರ ಮಾಸಾಶಾಸನ 2019 ಜನವರಿಯಲ್ಲಿ ಆಗಿದ್ದೆ ಕೊನೆ ಮತ್ತೆ ಅವರ ಕೈಗೆ ಯಾವುದೇ ರೀತಿಯ ಹಣ ಕೈಗೆ ಸಿಕ್ಕಿಲ್ಲ….ಈಗ ಬಂದಿರುವ ವೃದ್ಧೆಯೋರ್ವಳು ನನ್ನ ಗಂಡ ಹಾಸಿಗೆ ಹಿಡಿದಿದ್ದಾನೆ ನನ್ನ ಮಕ್ಕಳು ನಮ್ಮನ್ನು ನೋಡಿಕೊಳ್ಳುವುದಿಲ್ಲ ಈ ಮಾಸಾಶಾಸನ ಹಣವನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ ಆದರೂ ಸುಮಾರು ಆರೇಳು ತಿಂಗಳಿನಿಂದ ಯಾವುದೇ ರೀತಿಯ ಮಾಸಾಶಾಸನ ಸಿಕ್ಕಿಲ್ಲ.ಈಗಿನ ಸಂದರ್ಭದಲ್ಲಿ ಕೂಲಿ ಸಹ ಸಿಗ್ತಿಲ್ಲ ಹಣ ಕೇಳಿದ್ರೆ ಯಾರು ಕೊಡ್ತಿಲ್ಲ ನಮ್ಮ ಜೀವನ ತುಂಬಾ ಕಷ್ಟವಾಗಿದೆ ಎಂದು ವೃದ್ಧೆಯೋರ್ವಳು ತಮ್ಮ ಅಳಲನ್ನು ತೋಡಿಕೊಂಡು ಕೇಳುವವರ ಮನ ಕುಲುಕುವಂತೆ ಮಾಡಿದರು….. ಸಂಭದ್ದ ಪಟ್ಟ ಅಧಿಕಾರಿಗಳ ನಿರ್ಲಷ್ಯವೇ ಇದಕ್ಕೆಲ್ಲ ಕಾರಣ….ಯಾರು ಎನು ಕಾರಣ ಉತ್ತರ ಅಂಚೆ ಇಲಾಖೆಯ ಉನ್ನತಾಧಿಕಾರಿಗಳೇ ಹೇಳಬೇಕಿದೆ.
Be the first to comment