ಜೀಲ್ಲಾ ಸುದ್ದಿಗಳು
ದೆಹಲಿ, ಏ. 14: ಕೊರೋನಾ ಮಹಾಮಾರಿ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಲು ಸಧ್ಯ ಜಾರಿಯಲ್ಲಿರುವ ಲಾಕ್‌ಡೌನ್‌ನ್ನು ಮೇ 3ರ ವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಸ್ತರಿಸಿದ್ದಾರೆ. ಜನಸಂಖ್ಯೆಯಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ದೇಶವಾಗಿರುವ ಭಾರತದಲ್ಲಿ ಸಂಪೂರ್ಣವಾಗಿ ಲಾಕ್‌ಡೌನ್ ಜಾರಿಗೆ ತರುವುದು ಸಣ್ಣ ವಿಚಾರವಲ್ಲ.
ಆದರೆ ಜಾನ್ ಹೈತೊ ಜಹಾನ್ ಹೈ (ಜೀವ ಇದ್ದರೆ ಇಡೀ ಜಗತ್ತೇ ಇದೆ) ಎಂದಿರುವ ಪ್ರಧಾನಿ ಮೋದಿ ಅವರು ಜನರ ಜೀವಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಹೀಗಾಗಿ ದೇಶದ ಆರ್ಥಿಕತೆಯನ್ನು ಬದಿಗಿಟ್ಟು ಜನರ ಜೀವ ಉಳಿಸುವ ಲಾಕ್‌ಡೌನ್ ನಿರ್ಧಾರಕ್ಕೆ ಪ್ರಧಾನಿ ಮೋದಿ ಬಂದಿದ್ದಾರೆ. ಪ್ರಧಾನಿ ಮೋದಿ ಅವರು ಏಕಾಏಕಿ ಈ ನಿರ್ಧಾರವನ್ನು ಒಬ್ಬರೇ ತೆಗೆದುಕೊಂಡಿಲ್ಲ, ಜ್ಯೋತಿಷಿಗಳ ಸಲಹೆಯನ್ನು ಪಡೆದಿಲ್ಲ. ಬದಲಿಗೆ ಯಾರು ಯಾರೊಂದಿಗೆ ಚರ್ಚೆ ಮಾಡಿದ್ದಾರೆ ಎಂಬುದನ್ನು ಮೋದಿ ಅವರ ಸಂಪುಟದ ಸಹೋದ್ಯೋಗಿ, ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಬಿಚ್ಚಿಟ್ಟಿದ್ದಾರೆ.ಕೊರೋನಾ ವೈರಸ್‌ಗೆ ಸದ್ಯ ಲಸಿಕೆ ತಯಾರಾಗಿಲ್ಲ
ಸರ್ಕಾರದ ಭಾಗವಾಗಿ ನಾನು ಕೂಡಾ ನಿಮ್ಮನ್ನು ವಿನಂತಿಸುತ್ತೇನೆ. ಲಾಕ್‌ಡೌನ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ. ಅದನ್ನು ನಿಮಗಾಗಿ, ನಿಮ್ಮ ಕುಟುಂಬದವರಿಗಾಗಿ, ಜನರ ಆರೋಗ್ಯಕ್ಕಾಗಿ ಜಾರಿಗೆ ತರಲಾಗಿದೆ. ಲಾಕ್‌ಡೌನ್ ಹಾಗೂ ನಿಯಮಗಳನ್ನು ಜಾರಿಗೆ ತರುವುದಕ್ಕಿಂತ ಮೊದಲು ಪ್ರಧಾನಿ ಮೋದಿ ಅವರು ಈ ಎಲ್ಲವುಗಳ ಕುರಿತು ಸಲಹೆಗಳನ್ನು ಪಡೆದುಕೊಂಡಿದ್ದಾರೆ ಎಂದು ಸದಾನಂದಗೌಡ ಅವರು ಹೇಳಿದ್ದಾರೆ. ಹಾಗಾದರೆ ಮೋದಿ ಅವರಿಗೆ ಸಲಹೆ ಕೊಟ್ಟಿರುವುದು ಒಬ್ಬರೇ ವ್ಯಕ್ತಿಯಾ? ಮುಂದೆ ಓದಿ.
ಜನರ ಜೀವನಕ್ಕಿಂತ ಜನರ ಜೀವ ಉಳಿಸುವುದು ಸರ್ಕಾರದ ಆದ್ಯತೆ
ಸದ್ಯ ಜನರ ಜೀವನಕ್ಕಿಂತ ಜನರ ಜೀವ ಉಳಿಸುವುದು ಸರ್ಕಾರದ ಆಧ್ಯತೆ. ಹಾಗಾಗಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಈಗ ಅದನ್ನು ಮತ್ತೆ 19 ದಿನ ಮುಂದುವರಿಸಲಾಗಿದೆ. ಇದರಿಂದ ಬಹುತೇಕ ಕೈಗಾರಿಕೆಗಳು, ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮುಚ್ಚಿವೆ. ಇದು ಶಾಶ್ವತ ಸ್ಥಿತಿಯೇನಲ್ಲ. ಉದ್ಯೋಗದಾತರಲ್ಲಿ ಕಳಕಳಿಯ ಮನವಿ. ಈ ಸಂದರ್ಭದಲ್ಲಿ ನೌಕರರನ್ನು ದಯವಿಟ್ಟು ಕೆಲಸದಿಂದ ತೆಗೆಯಬೇಡಿ ಎಂದು ಅವರು ವಿನಂತಿಸಿದ್ದಾರೆ.
ಈ ದಿಗ್ಬಂಧನದಿಂದ ಆರ್ಥಿಕ ದುರ್ಬಲರು, ಶ್ರಮಿಕ ವರ್ಗದವರು ತೀವ್ರ ತೊಂದರೆಗೊಳಗಾಗಿದ್ದಾರೆ. ಸರ್ಕಾರವು ಬಡವರ ಕಲ್ಯಾಣ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಹಾಗಿದ್ದಾಗ್ಯೂ ನಮ್ಮ ಸುತ್ತಲಿನ ಬಡವರು ಉಪವಾಸ ಮಲಗದಂತೆ ನೋಡಿಕೊಳ್ಳುವ ಸಾಮಾಜಿಕ, ನೈತಿಕ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಡಿವಿಎಸ್ ಹೇಳಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಪಾಲಿಸಲು ಪ್ರಧಾನಿ ಮೋದಿ ಅವರು ಸಪ್ತ ಸೂತ್ರಗಳನ್ನು ಕೊಟ್ಟಿದ್ದಾರೆ. ಮನೆಯಲ್ಲಿರುವ ವಯೋವೃದ್ಧರ ಮೇಲೆ ನಿಗಾ ಇರಿಸಿ, ಅನಾರೋಗ್ಯಪೀಡಿತರ ಬಗ್ಗೆ ಹೆಚ್ಚಿನ ಆರೈಕೆ ಇರಲಿ, ಲಾಕ್‌ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರದ ಲಕ್ಷ್ಮಣ ರೇಖೆ ದಾಟಬೇಡಿ, ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಿ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಸಚಿವಾಲಯದ ಸೂಚನೆಗಳನ್ನು ಪಾಲಿಸಿ, ಕೊರೊನಾವೈರಸ್ ಸೋಂಕು ಹರಡದಂತೆ ತಡೆಯಲು ಹೊರ ತಂದಿರುವ ಆರೋಗ್ಯ ಸೇತು ಆಯಪ್ ಬಳಸಿ, ಇತರರಿಗೂ ತಿಳಿಸಿ.
ಬಡವರು, ನಿರ್ಗತಿಕರ ಊಟ, ವಸತಿ ಬಗ್ಗೆ ನಿಗಾವಹಿಸಿ, ಎಲ್ಲರೂ ನೆರವಾಗಿ. ಯಾರನ್ನು ಕೆಲಸದಿಂದ ತೆಗೆಯಬೇಡಿ, ಕೃಷಿಕರ ಬೆಂಬಲಕ್ಕೆ ನಿಲ್ಲಿ, ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಮುಂತಾದ ಕೊರೊನಾ ವಾರಿಯರ್ಸ್ ಗೌರವಿಸಿ. ಮೇ3 ರ ತನಕ ಈ ಏಳು ನಿಯಮಗಳನ್ನು ಪಾಲಿಸಿ, ರಾಷ್ಟ್ರವನ್ನು ಜಾಗೃತವಾಗಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ ಈ ಸಪ್ತ ಸೂತ್ರಗಳ ಹಿಂದೆ ಮೋದಿ ಒಬ್ಬರ ತೀರ್ಮಾನ ಇದೆಯಾ ಖಂಡಿತವಾಗಿಯೂ ಇಲ್ಲ.
ನಮ್ಮ ಭಾರತ ದೇಶದಲ್ಲಿ 130 ಕೋಟಿಗೂ ಅಧಿಕ ಜನಸಂಖ್ಯೆಯಿದೆ. ಇಷ್ಟೊಂದು ಅಗಾಧವಾದ ಜನರನ್ನು ಮನೆಯಿಂದ ಹೊರಗೆ ಬರದಂತೆ ತಡೆಯವುದೇ ಒಂದು ಸವಾಲು. ಆದರೆ ಈ ಸವಾಲನ್ನು ಹಲವು ತಜ್ಞರ ಸಹಾಯದಿಂದ ಪ್ರಧಾನಿ ನರೇಂದ್ರ ಮೋದಿ ಎದುರಿಸಿದ್ದಾರೆ. ದೇಶಾದ್ಯಂತ ಲಾಕ್‌ಡೌನ್ ವಿಸ್ತರಣೆ ಮಾಡುವ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ನಾಯಕರು, ವೈದ್ಯರು, ವೈರಾಣು ತಜ್ಞರು, ಕೈಗಾರಿಕೋದ್ಯಮಿಗಳು, ಆಡಳಿತ ತಜ್ಞರು, ಸ್ಟೇಕ್ ಹೋಲ್ಡರ್‌ಗಳ ಸಮಷ್ಟಿ ಅಭಿಪ್ರಾಯ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರ ತನಕ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ನಿರ್ಣಯ ಪ್ರಕಟಿಸಿದ್ದಾರೆ.
ಇದು ಅತ್ಯಂತ ಸಮಯೋಚಿತ ನಿರ್ಣಯವಾಗಿದೆ. ಈ ಸಂದರ್ಭದಲ್ಲಿ ಇದಕ್ಕಿಂತ ಉತ್ತಮ ನಿರ್ಧಾರ ಸಾಧ್ಯವಿರಲಿಲ್ಲ. ಇದನ್ನು ನಾನು ಸಂಪೂರ್ಣವಾಗಿ ಸ್ವಾಗತಿಸುತ್ತಿದ್ದೇನೆ. FKCCI ಸೇರಿದಂತೆ ಎಲ್ಲ ಸಂಘ-ಸಂಸ್ಥೆಗಳು ಈ ನಿರ್ಣಯವನ್ನು ಸ್ವಾಗತಿಸಿವೆ ಎಂದು ಕೇಂದ್ರ ರಸಗೊಬ್ಬರ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಹೇಳಿದ್ದಾರೆ.
Be the first to comment