ಕ್ರೈಮ್- ಪೋಕಸ್
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆವ್ಯಾಪ್ತಿಯ ಸಂಡೂರು ತಾಲೂಕಿ ಗ್ರಾಮೀಣ ಭಾಗದಲ್ಲಿದ್ದ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ತಹಶಿಲ್ದಾರರಾದ ರಶ್ಮೀರವರು ಆರೋಗ್ಯ ಇಲಾಖಾಧಿಕಾರಿಗಳ ಸಹಯೋಗದೊಂದಿಗೆ ದಾಳಿ ನಡೆಸಿದ್ದಾರೆ.ದಾಳಿವೇಳೆ ಪರಿಶೀಲಿಸಲಾಗಿ,ಅವರು ನಕಲಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಹೊಂದಿದ್ದು ಬೆಳಕಿಗೆ ಬಂದಿದೆ.ಬಂಧಿತ ಆರೋಪಿಗಳಾದ ಅಭಿಷೇಕ್. ಬಸವರಾಜ್ ಮತ್ತು ಜಾಫರ್ ಆಲಿ ಎನ್ನುವವರಲ್ಲಿ ಕನಾ೯ಟಕ ಮೆಡಿಕಲ್ ಅಸೋಷಿಯೇಷನ್ ಗೆ ಸಂಬಂಧಿಸಿದ ಯಾವುದೇ ಪ್ರಮಾಣ ಪತ್ರಗಳನ್ನು ಹೊಂದದೇ ಅವರು ಆರ.ಎಮ.ಪಿವೈದ್ಯರೆಂದು ಗುರುತಿಸಿಕೊಂಡಿದ್ದರು.ಇವರು ಸಂಡೂರು ತಾಲೂಕು ಕಾಳಿಂಗೇರಿ ಹಾಗು ಚೋರುನೂರು ಹೋಬಳಿಯ ಅಂಕಮನಾಳು ಗ್ರಾಮಗಳಲ್ಲಿ ಕ್ಲಿನಿಕ್ ಗಳನ್ನು ನಡೆಸುತ್ತಿದ್ದರೆನ್ನಲಾಗಿದೆ.ಈ ಆರೋಪದಡಿ ಇವರನ್ನು ಕೂಡ್ಲಿಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.ಕಂದಾಯ ಇಲಾಖಾಧಿಕಾರಿಗಳು,ವೈದ್ಯರಾದ ಗೋಪಾಲಕೃಷ್ಣ ಹಾಗೂ ಕಿರಣ್ ಇದ್ದರು.
Be the first to comment