ಜೀಲ್ಲಾ ಸುದ್ದಿಗಳು
ಯಾದಗಿರಿ,ಏಪ್ರಿಲ್ 02ಜೀಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಅವಶ್ಯಕವಿರುವ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳು ಮತ್ತು ಬೆಳೆ ಕಟಾವು ಮಾಡಬೇಕಾದ ಕೃಷಿ ಯಂತ್ರೋಪಕರಣಗಳನ್ನು ಹಾಗೂ ರೈತರು ಬೆಳೆದ ಕೃಷಿ ಉತ್ಪನ್ನಗಳ ಸಾಕಾಣಿಕೆ ಮಾಡಲು ರೈತರಿಗೆ ತೊಂದರೆಯಾಗದಂತೆ ಚೆಕ್‍ಪೋಸ್ಟ್‍ಗಳಲ್ಲಿ ಯಾವುದೇ ಪಾಸ್ ಇಲ್ಲದೆ ಸಾಗಾಣಿಕೆ ಮಾಡಲು ವಿನಾಯಿತಿ ನೀಡಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಆದೇಶಿಸಿದ್ದಾರೆ.
ಸರ್ಕಾರದ ಆದೇಶದನ್ವಯ ಈ ವಿನಾಯಿತಿ ನೀಡಲಾಗಿದ್ದು, ಕೃಷಿ ಪರಿಕರಗಳ ವಿತರಣೆ ಹಾಗೂ ಸಾಗಾಣಿಕೆ ಸಮಯದಲ್ಲಿ ರೈತರು ಸರ್ಕಾರ ನಿಗದಿಪಡಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್- 19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಹಾಗೂ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಕೃಷಿ ಪರಿಕರ ಮಾರಾಟಗಾರರು ಕೃಷಿ ಪರಿಕರ ವಿತರಣೆ ಅನುಮತಿ ಚೀಟಿಯನ್ನು ಕೃಷಿ ಇಲಾಖೆಯಿಂದ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ರೈತರಿಗೆ ಸೋಂಕನ್ನು ತಗಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಅಂಗಡಿಗಳಲ್ಲಿ ಸಾಬೂನು/ ಸ್ಯಾನಿಟೈಸರ್ ಮತ್ತು ಕೈತೊಳೆಯಲು ನೀರಿನ ವ್ಯವಸ್ಥೆ ಮಾಡಬೇಕು. ಮಾರಾಟ ಕೇಂದ್ರದಲ್ಲಿ ಬಯೋಮೆಟ್ರಿಕ್ ಸ್ಕ್ಯಾನರ್‍ಗಳನ್ನು ಬಳಸದೆ ಓಟಿಪಿ ಮೂಲಕ ರಸಗೊಬ್ಬರ ಖರೀದಿಸುವ ವ್ಯವಸ್ಥೆ ಮಾಡುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.
Be the first to comment