ತುರುಮುರಿ ಗ್ರಾಮದಲ್ಲಿ ನೊಣಗಳ ಹಾವಳಿ ಹೆಚ್ಚಳಕ್ಕೆ ಕಾರಣವಾಗಿರುವ ಕೋಳಿ ಫಾರ್ಮ್

ವರದಿ: ಬಸವರಾಜು ಬೆಳಗಾವಿ

ಜೀಲ್ಲಾ ಸುದ್ದಿಗಳು


ವಿಶೇಷ ವರದಿ

ಕಿತ್ತೂರು:-  ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ತುರುಮುರಿ ಹಾಗೂ ಕಡತನಾಳ ಗ್ರಾಮದ ಗ್ರಾಮಸ್ಥರಿಗೆ ಕರೋನಾ ವೈರಸ್ ಮಾರಿಯ ನಡುವೆಯೇ ದೊಡ್ಡ ಕಂಟಕವೊಂದು ಎದುರಾಗಿದೆ.

Lock down ಸಂದರ್ಭದಲ್ಲಿಯೂ ಸಹ ತುರುಮುರಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಂಧ್ರ ಮೂಲದ ಕೊಂಡರೆಡ್ಡಿ ಒಡೆತನದ ಕೋಳಿ ಫಾರ್ಮ ನಲ್ಲಿರುವ ಕೋಳಿಗಳ ಕಲ್ಮಶಗಳು ಹಾಗೂ ದುರ್ವಾಸನೆಯಿಂದ ನೊಣಗಳು ಹೆಚ್ಚಾಗಿ ಗ್ರಾಮದಲ್ಲಿರುವ ಮನೆಗಳಿಗೆ ಲಗ್ಗೆ ಇಟ್ಟು ಇಲ್ಲಿನ ನಿವಾಸಿಗಳ ಆರೋಗ್ಯದ ಜೊತೆಗೆ ಆಟವಾಡುತ್ತಿವೆ. ಮೊದಲೇ ಕರೋನ ವೈರಸ್ ನಿಂದ ಸಾಕಷ್ಟು ಆತಂಕಕ್ಕೆ ಈಡಾಗಿರುವ ಈ ಸಂದರ್ಭದಲ್ಲಿ ನೊಣಗಳ ಹಾವಳಿ ತುಂಬಾನೇ ಜಾಸ್ತಿ ಆಗಿವೆ.
ಇದರ ಜೊತೆಗೆ ಇಲ್ಲಿನ ಗ್ರಾಮಸ್ಥರು ಬೇಸತ್ತು ಇದನ್ನು ಈಗಿನ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಈ ಕೋಳಿ ಫಾರ್ಮ್ ನ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇವರಿಗೆ ನೊಣಗಳನ್ನು ನಿಯಂತ್ರಣ ಮಾಡಿ ಎಂದು ಹೇಳಿದರೂ ಯಾವುದೇ ಕ್ರಮ ಕೈ ಗೊಂಡಿಲ್ಲ. ಇನ್ನಾದರು ಸಂಬಂಧಿ ಪಟ್ಟ ಅಧಿಕಾರಿಗಳು ಈ‌ ಗ್ರಾಮಕ್ಕೆ ಭೇಟಿಕೊಟ್ಟು ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಜನರ ಆರೋಗ್ಯ ಕಾಪಾಡಬೇಕಿದೆ

Be the first to comment

Leave a Reply

Your email address will not be published.


*