ಉತ್ತರ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.

 

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬ್ಯುರೋ ಆಫ್‌ ಸಿವಿಲ್‌ ಏವಿಯೇಷನ್‌ ಸೆಕ್ಯೂರಿಟಿಯ ಸಹಾಯಕ ಪ್ರಾದೇಶಿಕ ಕಾರ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅನೋಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡಿದ ಅವರು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಹಾಯಕ ಪ್ರಾದೇಶಿಕ ಕಾರ್ಯಾಲಯ ಆರಂಭಿಸಲು ಈ ಹಿಂದಿನ ಈ ನಾಗರಿಕ ವಿಮಾನಯಾನ ಕೇಂದ್ರ ಸಚಿವರಾಗಿದ್ದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಾನು ಜನವರಿ 2024ರಲ್ಲಿ ವಿನಂತಿಸಿಕೊಂಡಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ARO ಬ್ಯುರೋ ಆಫ್‌ ಸಿವಿಲ್‌ ಏವಿಯೇಷನ್‌ ಸೆಕ್ಯೂರಿಟಿಯ ಸಹಾಯಕ ಪ್ರಾದೇಶಿಕ ಕಾರ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅನೋಮೋದನೆ ದೊರೆತಿದೆ.

ಈ ARO ಕಛೇರಿ ಅನುಮೋದನೆ ಮತ್ತು ಹುದ್ದೆಗಳ ಸೃಜನೆಗೆ ಮಂಜೂರಾತಿ ಕೊಡುವದರ ಮೂಲಕ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಅತ್ಯಂತ ಮಹತ್ವ ನೀಡಿ ಇದರ ಬೆಳವಣಿಗೆಗೆ ವಿಶೇಷ ಆಸಕ್ತಿವಹಿಸಿರುವ ನಮ್ಮೆಲ್ಲರ ನಾಯಕ ನರೇಂದ್ರ ಮೋದಿ ಅವರಿಗೆ, ಹಿಂದಿನ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂದಿನ ನಾಗರಿಕ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರಿಗೆ ಮತ್ತು ಇದಕ್ಕೆ ಆರ್ಥಿಕ ಇಲಾಖೆಯ ಅನುಮೋದನೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರಿಗೆ ಕರ್ನಾಟಕದ ವಿಶೇಷವಾಗಿ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅನಂತ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಮ್ಮ ಮನವಿಗೆ ಸ್ಪಂದಿಸಿ ಏಪ್ರಿಲ್‌ 2024ರಲ್ಲಿ ಸಹಾಯಕ ಪ್ರಾದೇಶಿಕ ಕಾರ್ಯಾಲಯವನ್ನು ಆರಂಭಿಸಲು ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿತ್ತು. ಈಗ ಕೇಂದ್ರದ ಹಣಕಾಸು ಸಚಿವಾಲಯವು ಹೊಸ ಹುದ್ದೆಗಳ ಮಂಜೂರಾತಿಗೆ ಅನುಮತಿ ನೀಡಿದ್ದು ನಮ್ಮ ಹುಬ್ಬಳ್ಳಿಯ ಎ.ಆರ್‌.ಓ ಕಚೇರಿಗೆ ಕಾರ್ಯ ಆರಂಭಿಸಲಿದೆ.

LOGO

Be the first to comment

Leave a Reply

Your email address will not be published.


*