ಬಾಗಲಕೋಟೆ:2023-24 ನೇ ಸಾಲಿನ ಇಳಕಲ್ ಪಶ್ಚಿಮ ವಲಯದ ಕ್ರೀಡಾಕೂಟ ಇಳಕಲ್ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು. ಈ ಕ್ರೀಡಾಕೂಟದಲ್ಲಿ ಬಲಕುಂದಿ ತಾಂಡಾದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ,ದ್ವೀತಿಯ, ತೃತೀಯ ಸ್ಥಾನ ಪಡೆಯುವುದರೊಂದಿಗೆ ಅಧ್ಬುತ ಪ್ರದರ್ಶನ ನೀಡಿದ್ದಾರೆ.
ಗುಂಪು ಆಟ ಬಾಲಕರ ಕಬಡ್ಡಿ ಪ್ರಥಮ ಸ್ಥಾನ, ಬಾಲಕಿಯರ 4*100 ರೀಲೆ ಪ್ರಥಮ ಸ್ಥಾನ, ಬಾಲಕರ ಖೋ ಖೋ ದ್ವೀತಿಯ ಸ್ಥಾನ,ಬಾಲಕರ 4*100 ರೀಲೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಹಾಗೂ ವೈಯುಕ್ತಿಕ ವಿಭಾಗದ ಬಾಲಕರ ಎತ್ತರ ಜಿಗಿತ ಪ್ರಥಮ ಸ್ಥಾನ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ,ಚಕ್ರ ಎಸೆತ ಹಾಗೂ 400 ಮೀ ಓಟದಲ್ಲಿ ತೃತೀಯ ಸ್ಥಾನ ಅದೇ ರೀತಿ ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಉದ್ದ ಜಿಗಿತ ಪ್ರಥಮ ಸ್ಥಾನ,ಎತ್ತರ ಜಿಗಿತ ಹಾಗೂ 600 ಮೀ ಓಟದಲ್ಲಿ ದ್ವೀತಿಯ ಸ್ಥಾನ,200 ಮೀ ಹಾಗೂ 400 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜೇತ ಎಲ್ಲಾ ಮಕ್ಕಳಿಗೆ ಹಾಗೂ ಮಾರ್ಗದರ್ಶನ ಮಾಡಿದ ಗುರುಗಳಿಗೆ ವಿಶೇಷ ಧನ್ಯವಾದಗಳನ್ನು ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮುತ್ತಣ್ಣ ಬೀಳಗಿ,ದೈಹಿಕ ಶಿಕ್ಷಕಿ ಶ್ರೀಮತಿ ರೇಣುಕಾ ಕೊಡಗಲಿ,ಹಿರಿಯ ಶಿಕ್ಷಕರಾದ ಶ್ರೀ ಎ ಡಿ ಬಾಗವಾನ,ಶ್ರೀಮತಿ ಜಿ ಕೆ ಮಠ,ಶ್ರೀಮತಿ ಪಿ ಎಸ್ ಹೊಸೂರ,ಶ್ರೀಮತಿ ಎಂ ಎನ್ ಅರಳಿಕಟ್ಟಿ,ಶ್ರೀಮತಿ ಎಂ ಪಿ ಚೇಗೂರ,ಶ್ರೀಮತಿ ಎಸ್ ಎಲ್ ಜೋಗಿನ,ಶ್ರೀಮತಿ ಎಸ್ ಎಂ ಮಲಗಿಹಾಳ,ಶ್ರೀಮತಿ ಸಾಯಿರಾ ಹೆರಕಲ್,ಶ್ರೀಮತಿ ನಿರ್ಮಲಾ ಜಾಧವ ಹಾಗೂ ಎಸ್ ಡಿ ಎಂ ಸಿ ಸರ್ವ ಸದಸ್ಯರು ಮಕ್ಕಳಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.
Be the first to comment