ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ, ಬಾಲ್ಯ ವಿವಾಹ ನಿಷೇಧ ಹಾಗೂ ಸಮಗ್ರ ಮಕ್ಕಳ ರಕ್ಷಣೆಗಾಗಿ ಸಮಿತಿಗಳನ್ನು ರಚಿಸುವ ಕಾರ್ಯಾಗಾರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ, ಬಾಲ್ಯ ವಿವಾಹ ನಿಷೇಧ ಹಾಗೂ ಸಮಗ್ರ ಮಕ್ಕಳ ರಕ್ಷಣೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳನ್ನು ವಿಲೀನಗೊಳಿಸುವ ಹಾಗೂ ಪುನರ್ ರಚಿಸುವ ಬಗ್ಗೆ ಕಾರ್ಯಕ್ರಮವನ್ನು ರೀಚ್ ಸಂಸ್ಥೆ, ಬಾಗಲಕೋಟೆ, ವಿದ್ಯಾನಿಕೇತನ, ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇಧಿಕೆ, ತಾಲ್ಲೂಕ ಆಡಳಿತ, ತಾಲ್ಲೂಕ್ ಪಂಚಾಯತ್, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

CHETAN KENDULI

ರೀಚ್ ಸಂಸ್ಥೆಯ ನಿರ್ದೇಶಕರಾದ G N ಸಿಂಹ ಇವರು ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ತಿಳಿಸುತ್ತಾ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟಲು ಮತ್ತು ಸಾಗಾಣಿಕೆಗೆ ಒಳಗಾದ ಮಹಿಳೆಯರ ರಕ್ಷಣೆ ಮತ್ತು ಬಾಲ್ಯ ವಿವಾಹ ತಡೆಗಟ್ಟಲು ಈ ಸಮಿತಿಯನ್ನು ಜಿಲ್ಲಾ ಮತ್ತು ತಾಲೂಕ ಗ್ರಾಮಮಟ್ಟದಲ್ಲಿ ರಚನೆಯಾಗಿದೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಈ ಸಮಿತಿ ಇದ್ದು ಆದರೆ ಕಾರ್ಯರೂಪಕ್ಕೆ ಇರದೇ ಇರುವುದು ಅದನ್ನು ನಾವೆಲ್ಲರೂ ಸೇರಿ ಕಾರ್ಯರೂಪಕ್ಕೆ ತರೋಣ ಮತ್ತು ಚುರುಕುಗೊಳಿಸೋಣ ಎಂದು ತಿಳಿಸಿದರು.

ಶ್ರೀಯುತ ಪ್ರಶಾಂತ್ ಮುನವಳ್ಳಿ, ಡಿ ವೈ ಎಸ್ ಪಿ, ಬಾಗಲಕೋಟೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಒಂದು ದಿನದ ಕಾರ್ಯಾಗಾರ ತುಂಬಾ ಮುಖ್ಯವಾಗಿದ್ದು ಏಕೆಂದರೆ ಈ ಸಮಿತಿ ಹಳ್ಳಿಯ ಮಟ್ಟದಲ್ಲಿ ಗಟ್ಟಿಯಾಗಿದ್ದರೆ ಗ್ರಾಮಗಳಲ್ಲಿ ಬಾಲ್ಯವಿವಾಹ ತಡೆಯುವುದಕ್ಕೆ ಸಾಧ್ಯ ನಮ್ಮ ಠಾಣೆಗೆ ಬರುವಂತಹ ಪ್ರಕರಣಗಳೆಂದರೆ ಬಾಲ್ಯ ವಿವಾಹವಾಗಿದ್ದರೆ ಕೇಸ್ ಮಾಡಬೇಡಿ ಬಿಟ್ಟುಬಿಡಿ ಎಂದು ಗ್ರಾಮದ ಮುಖ್ಯಸ್ಥರು,ಚುನಾಯಿತ ಪ್ರತಿನಿಧಿಗಳು ಮಾಜಿ ಅಧ್ಯಕ್ಷರು ಕರೆ ಮಾಡುತ್ತಾರೆ ಆದರೆ ಅವರಿಗೆ ತಾವು ಕೂಡ ಈ ಕಮಿಟಿಯ ಸದಸ್ಯರು ಬಾಲ್ಯವಿವಾಹ ತಡೆಗಟ್ಟಲು ಅವರಿಗೂ ಕೂಡ ಅಧಿಕಾರವಿದೆ ಎಂದು ಈ ಕಮಿಟಿಯ ಮುಖಾಂತರ ಅವರಿಗೆ ತಿಳಿಸುವುದು ಅವರಿಗೂ ಕೂಡ ಜವಾಬ್ದಾರಿ ನೀಡುವುದು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿಗಳಿಗೆ ತಿಳಿಸುವುದೇನೆಂದರೆ ಈ ಕಾರ್ಯಗಾರ ಕೇವಲ ತರಬೇತಿಯಾಗದೆ ಕಾರ್ಯರೂಪಕ್ಕೆ ಬರಲಿ ಮತ್ತು ಅದರ ನಿಟ್ಟಿನಲ್ಲಿ ನೀವು ಕಾರ್ಯ ನಿರ್ವಹಿಸುತ್ತೀರಾ ಎಂದು ಉದ್ಘಾಟನೆ ಭಾಷಣದಲ್ಲಿ ತಿಳಿಸಿದರು.

ಈ ಕೆಳಕಂಡ ಸದಸ್ಯರನ್ನೊಳಗೊಂಡ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯನ್ನು ರಚಿಸಿ ಅದೇಶಿಸಲಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷರು (ಮಹಿಳೆಯರು)
ಗ್ರಾಮ ಪಂಚಾಯತ್ ಉಪಾಧ್ಯಕ್ಷರು (ಮಹಿಳೆಯರು)
ಮಹಿಳಾ ಉಪಾಧ್ಯಕ್ಷರಿದ್ದಲ್ಲಿ ಅವರನ್ನೇ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸುವುದು, ಮಹಿಳಾ ಉಪಾಧ್ಯಕ್ಷರಿಲ್ಲದಿದ್ದಲ್ಲಿ ಮಹಿಳಾ ಸದಸ್ಯರನ್ನೇ ಉಪಾಧ್ಯಕ್ಷರನ್ನಾಗಿ ನೇಮಿಸುವುದು.ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎರಡು ಗ್ರಾಮ ಪಂಚಾಯತ್‌ ಸದಸ್ಯರು (ಕಡ್ಡಾಯವಾಗಿ ಒಬ್ಬರು ಮಹಿಳಾ ಸದಸ್ಯರು) ಗಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು (ತಾಲ್ಲೂಕು ಶಿಕ್ಷಣಾಧಿಕಾರಿಗಳು ಆಯ್ಕೆ ಮಾಡುವುದು) ಮುಖ್ಯೋಪಾಧ್ಯಾಯರು ಪುರುಷರಾಗಿದ್ದಲ್ಲಿ,
ಮಹಿಳಾ ಶಿಕ್ಷಕರನ್ನು ಆಯ್ಕೆ ಮಾಡುವುದು.ಗ್ರಾಮ ಲೆಕ್ಕಿಗರು (ಒಬ್ಬರನ್ನು ತಹಶೀಲ್ದಾರರು ನೇಮಿಸುವುದು) ಎಲ್.ಎಚ್.ಎ) ಎ.ಎನ್.ಎಂ ಮತ್ತು ಆಶಾ ಕಾರ್ಯಕರ್ತ (ಎಲ್.ಎಚ್.ವಿ.ಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಎ.ಎನ್.ಎಂ.ಗಳನ್ನು ತಾ ಆ ಕಾರ್ಯಕರ್ತಯನ್ನು ತಾಲ್ಲೂಕು ವೈದ್ಯಾಧಿಕಾರಿಗಳು ನಾಮ ನಿರ್ದೇಶನ ಮಾಡುವುದು)ಬೀಟ್ ಪೊಲೀಸ್ ಅಧಿಕಾರಿ (ವೃತ್ತ ನಿರೀಕ್ಷಕರು ನಿಯೋಜಿಸುವರು) ಗ್ರಾಮ ಪಂಚಾಯತಿ ವ್ಯಾಪ್ತಿಯ ಐಸಿಡಿಎಸ್ ಮೇಲ್ವಿಚಾರಕರುಆ ಕ್ಷೇತ್ರದಲ್ಲಿ, ಕಾರ್ಯ ನಿರ್ವಹಿಸುತ್ತಿರುವ ಸಯಂ ಸೇವಾ ಸಂಸ್ಥೆಯ ಮಹಿಳಾ ಪ್ರತಿನಿಧಿ
ಅಂಗನವಾಡಿ ಕಾರ್ಯಕರ್ತೆ (ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಒಬ್ಬ ಅಂಗನವಾಡಿ ಕಾರ್ಯಕರ್ತೆಯನ್ನು ಶಿಶು ಅಭಿವೃದ್ಧಿಯೋಜನಾಧಿಕಾರಿಗಳು ನೇಮಿಸುವುದು) ಸ್ತ್ರೀಶಕ್ತಿ ಸಂಘದ ಒಬ್ಬರು ಪ್ರತಿನಿಧಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಢಶಾಲೆಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ/ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿ
ಗಾಮ ಸಭೆಯಲ್ಲಿ ಇಬ್ಬರು ಗ್ರಾಮ ಪಂಚಾಯತ್‌ ಸದಸ್ಯರು, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಸ್ತ್ರೀಶಕ್ತಿ ಸಂಘದ ಇಬ್ಬರು ಪ್ರತಿನಿಧಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡುವುದು ಹಾಗೂ ಸಮಿತಿಯಲ್ಲಿ ಶೇಕಡಾ 50ರಷ್ಟು ಮಹಿಳಾ ಸದಸ್ಯರಿರುವಂತೆ ಕ್ರಮ ವಹಿಸುವುದು, ಸಮಿತಿ ಸಭೆಗಳಲ್ಲಿ ತೀರ್ಮಾನಿಸುವ ಎಲ್ಲಾ ಕಾರ್ಯ ಕ್ರಮಗಳು, ತೀರ್ಮಾನಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸದಸ್ಯ ಕಾರ್ಯದರ್ಶಿಯದ್ದಾಗಿರುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ಏರ್ಪಡಿಸಿ ಚರ್ಚಿಸುವುದು.

ಯಾರೂ ಕೂಡ ಗ್ರಾಮದಲ್ಲಿ ಮಕ್ಕಳಿಗೆ ಬಾಲ್ಯವಿವಾಹ ಮಾಡಬೇಡಿ ಬಾಲ್ಯವಿವಾಹ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ – 1098 ಕರೆ ಮಾಡಿ ಅದನ್ನು ತಡೆಗಟ್ಟಲು ಎಲ್ಲರೂ ಸಹಕರಿಸಿ ಎಂದು ತಿಳಿಸಿದರು. 200ಕ್ಕೂ ಹೆಚ್ಚು ಸಮಿತಿ ಸದಸ್ಯರು 16 ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಶ್ರೀಯುತ ದಸ್ತಗಿರಿ ಸಾಬ್ ಮುಲ್ಲಾ, CDPO (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ) ಬಾಗಲಕೋಟೆ, ಸಂಪನ್ಮೂಲ ವ್ಯಕ್ತಿ ಶೈಲಜಾ ಹಾಗೂ ಕುಮಾರ್ ಸಂಯೋಜಕರು ಉಪಸ್ಥಿತರಿದ್ದು ಸ್ವಾಗತಿಸಿದರು.ಶಾರದಾ ಭಜಂತ್ರಿ ರೀಚ್ ಸಂಸ್ಥೆ ಇವರು ಪ್ರಾರ್ಥಿಸಿದರು.

Be the first to comment

Leave a Reply

Your email address will not be published.


*