ಜಗತ್ತನ್ನು ತೋರುವ “ಕಣ್ಣು” ಅತ್ಯಮೂಲ್ಯ ಅಂಗವಾಗಿದೆ, ಅದನ್ನು ನಿರ್ಲಕ್ಷ್ಯಿಸಬೇಡಿ ಹಾಗೂ ದಾನ ಮಾಡಿ. ನೇತ್ರ ದಾನ ಮಹಾ ದಾನವಾಗಿದ್ದು, ಪ್ರತಿಯೊಬ್ಬರೂ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಬೇಕಿದೆ. ಎಂದು ಗೆಳೆಯರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ, ಬಿ. ಅಬ್ದುಲ್ ರಹೆಮಾನ್ ಸಾರ್ವಜನಿಜರಿಗೆ ಈ ಮೂಲಕ ಕರೆ ನೀಡಿದರು.
ಅವರು ಪಟ್ಟಣದ ತರಳು ಬಾಳು ಶಾಲೆಯಲ್ಲಿ, ಮೇ23ರಂದು “ನೇತ್ರದಾನ” ಕುರಿತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ. ಪ್ರಬಂಧ ಸ್ಪರ್ಧೆಯ ವಿಜೇತರಿಗೆ, ಬಹುಮಾನ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಂದರವಾದ ಜಗತ್ತನ್ನು ಕಣ್ಣಿನ ಮೂಲಕ ನೋಡಿ ಆನಂದ ಪಡುತ್ತೇವೆ, ಒಂದು ಕ್ಷಣ ಕಣ್ಣು ಕಾಣದಂತಾದರೆ ಈ ಭೂಮಿಯೇ ಕುಸಿದಷ್ಟು ಆತಂಕ ಪಡುತ್ತೇವೆ. ಮುಖಕ್ಕೆ ಬಲು ಅಂದ ನೀಡುವ ಪ್ರಮುಖವಾದ ಅಂಗ ಕಣ್ಣು, ಅದು ಪ್ರತಿಯೊಬ್ಬರ ಜೀವನಕ್ಕೂ ಬೆಳಕಾಗಲಿದೆ ಎಂದರು.
ನೇತ್ರ ದಾನದಿಂದ ಮತ್ತೊಬ್ಬರ ಬಾಳಿಗೆ ಬೆಳಕು ನೀಡಬಹುದಾಗಿದೆ, ಇಂತಹ ಮಹತ್ವದ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕಿದೆ. ಅಂಧರ ಬಾಳಿಗೆ ಬೆಳಕಾಗಲು, ಸತ್ತಾಗ ಕಣ್ಣನ್ನು ದಾನ ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆಯಬೇಕು ಎಂದರು. ಈಗಾಗಲೇ ನೇತ್ರದಾನ ಮಹಾದಾನದ ಜಾಗೃತಿ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯುತ್ತಿದೆ. ಇದರಲ್ಲಿ ಚಿತ್ರನಟರಾದ ದಿವಂಗತ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ತಮ್ಮ ಕಣ್ಣುಗಳನ್ನು ದಾನಮಾಡುವ ಮೂಲಕ ಮತ್ತೊಬ್ಬರ ದೃಷ್ಟಿಗೆ ಕಾರಣೀಭೂತರಾಗಿದ್ದಾರೆ ಎಂದರು. ಸ್ಪೂರ್ತಿ ಕೋಚಿಂಗ್ ಸೆಂಟರ್‌ನ ಬೋಧಕರಾದ ಪಿ. ಕೃಷ್ಣ ಮಾತನಾಡಿ, ಇಂದ್ರಿಯಗಳಲ್ಲಿ ಕಣ್ಣುಗಳು ಬಹು ಮುಖ್ಯ ಅಂಗವಾಗಿದ್ದು.
ಇವುಗಳನ್ನು ಆರೈಕೆ ಮಾಡಬೇಕು ಎಂದರು. ಕಣ್ಣು ಕೆಂಪಾಗುವುದು, ಕಣ್ಣಲ್ಲಿ ನೀರು ಸೋರುವುದು, ಕಣ್ಣು ಸೊಂಕಾಗಿ ನವೆ ಉಂಟಾಗುವುದು ಕಂಡುಬಂದಲ್ಲಿ ಸ್ವಯಂ ಔಷಧಿ ಉಪಚಾರ ಮಾಡದೆ ಹತ್ತಿರದ ನೇತ್ರಾಲಯಗಳಿಗೆ ಹೋಗಿ ನೇತ್ರತಜ್ಞರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕೆಂದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಗುಡೇಕೋಟೆ ವಸತಿ ನಿಲಯದ ಮೇಲ್ವೀಚಾರಕ ಶ್ರೀಕಾಂತ್ ಬಾಬು, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಯಂ. ವೀರೇಶ್ ಸೇರಿದಂತೆ ಬೋಧಕ ಸಿಬ್ಬಂದಿಯೊಂದಿಗೆ ಸ್ಪೂರ್ತಿ ಕೋಚಿಂಗ್ ಸೆಂಟರ್ ಮಕ್ಕಳಿದ್ದರು.
Be the first to comment