CHETAN KENDULIಕೃಷಿ ಯಂತ್ರಗಳ ಶೋಧಕ ಸಂಗಪ್ಪ ನಾಲ್ಕೂವರೆ ಎಕರೆಯಲ್ಲಿ ಹಿಪ್ಪುನೇರಳೆ ಬೆಳೆದು,ರೇಷ್ಮೆ ಕೃಷಿಯಲ್ಲೂ ಯಶಸ್ವಿ.
ಬಾಗಲಕೋಟೆ:ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಾಗಿ ನಿವೃತ್ತರಾಗಿರುವ ಡಾ.ಸಂಗಪ್ಪ ಎಸ್. ನಾರಾ ಅವರು ತಮ್ಮ ಅರ್ಧ ಎಕರೆ ಹಾಗೂ ಕೋರಿ ಪಡೆದ ನಾಲ್ಕು ಎಕರೆ ಭೂಮಿಯಲ್ಲಿ ಕೃಷಿ ಕಾಯಕ ಮಾಡುತ್ತಿದ್ದಾರೆ. ತಮ್ಮ ಅನುಕೂಲಕ್ಕಾಗಿ ಹಲವು ಕೃಷಿ ಯಂತ್ರಗಳನ್ನೂ ಆವಿಷ್ಕರಿಸಿದ್ದಾರೆ.
ಸಾಂಪ್ರಾದಾಯಿಕ ಕೃಷಿ ಪದ್ಧತಿ ಜೊತೆಗೆ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡ ಅವರು ಆರ್ಥಿಕ ಭದ್ರತೆ ಹೇಗೆ ಹೊಂದಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಿಪ್ಪು ನೇರಳೆ ಬೆಳೆದು, ರೇಷ್ಮೆ ಕೃಷಿ ಮಾಡಲು ಲಭ್ಯವಿರುವ ಹಳೇ ವಸ್ತುಗಳನ್ನು ಬಳಸಿ ಹಲವು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿದ್ದಾರೆ. ಈ ಮೂಲಕ ಕೃಷಿ ಕಾರ್ಮಿಕರ ಕೊರತೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಕಡಿಮೆ ನೀರು ಬಳಸಿ ಡ್ರಾಗನ್ ಫ್ರಟ್ ಬೆಳೆಯುವ ಇವರು, ಇದಕ್ಕಾಗಿ ಟ್ರ್ಯಾಲಿ ಸಿಸ್ಟಂ ಅಳವಡಿಸಿದ್ದಾರೆ. ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರನ್ನು ತಾವೇ ತಯಾರಿಸಿ ಬಳಸುತ್ತಿರುವುದರಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಹಿನ್ನೆಲೆ:ಪಟ್ಟಣದ ಶಿವಸಂಗಪ್ಪ ಹಾಗೂ ಚನ್ನಬಸವ್ವ ದಂಪತಿಗಳ ಪುತ್ರ ಡಾ.ಸಂಗಪ್ಪ ಎಸ್. ನಾರಾ ಅವರು ಬಡತನದಲ್ಲಿಯೂ ವಿದ್ಯಾಭ್ಯಾಸ ಮಾಡಿ ಶಿಕ್ಷಕರಾದರು. ನೇಕಾರಿಕೆ ವೃತ್ತಿ ಜತೆಗೆ ಕೃಷಿಯಲ್ಲಿ ತೊಡಗಿದ್ದಾರೆ. ಕನ್ನಡ ವಿಷಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
Be the first to comment