ಮಸ್ಕಿ, ಪಟ್ಟಣದ ಅಭಿನಂದನ್ ಸ್ಪೂರ್ತಿ ಧಾಮದಲ್ಲಿ ನಾಗರಾಜ್ ಸಜ್ಜನ್ ಮತ್ತು ರೇಷ್ಮಾ ಸಜ್ಜನ್ ಎಂಬ ಸರಳ ಸಜ್ಜನಿಕೆಯ ದಂಪತಿಗಳು ತಮ್ಮ ಮದುವೆಯ ವಾರ್ಷಿಕೋತ್ಸವದ 25 ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಸರಳತೆಯಿಂದ ಆಚರಿಸಿದರು.
ಸೋಮವಾರ ರಾತ್ರಿ ಅಭಿನಂದನ್ ಸ್ಪೂರ್ತಿ ಧಾಮದ ಅನಾಥ ಆಶ್ರಮದ ಮಕ್ಕಳ ಜೊತೆ ಮದುವೆಯ ವಾರ್ಷಿಕೋತ್ಸವದ 25 ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಾಗರಾಜ್ ಸಜ್ಜನ್ ಮತ್ತು ರೇಷ್ಮಾ ಸಜ್ಜನ್ ರನ್ನು ಧಾಮದ ದಾರಿಯುದ್ದಕ್ಕೂ ಫಲಪುಷ್ಪ ದಿಂದ ಅದ್ಧೂರಿಯಾಗಿ ಬರ ಮಾಡಿಕೊಂಡು ಕಳಶ ಬೆಳಗಿ ನಂತರ ಅಭಿನಂದನ್ ಸ್ಪೂರ್ತಿ ಧಾಮದ ಅನಾಥ ಆಶ್ರಮದ 30 ಮಕ್ಕಳಿಗೆ ಬಟ್ಟೆಯನ್ನು ವಿತರಿಸಿದರು. ತದ ನಂತರ 25 ನೇ ವರ್ಷದ ಮದುವೆಯ ವಾರ್ಷಿಕೋತ್ಸವ ಹಾಗು ಬೆಳ್ಳಿ ಹಬ್ಬದ ನಿಮಿತ್ತ 25 ನೇಯ ಕೇಕ್ ಕತ್ತರಿಸುವ ಮೂಲಕ ತಮ್ಮ ಸಾಂಸಾರಿಕ ಜೀವನದ ನೊಗ ಹೊತ್ತು ಕಷ್ಟ-ಸುಖದಲ್ಲೂ ಭಾಗಿಯಾದ ಇಬ್ಬರು ದಂಪತಿಗಳು ಹರ್ಷದ ನಗೆ ಬೀರಿ ಸರಳತೆಯಿಂದ ಆಚರಿಸಲಾಯಿತು. ಕುಟುಂಬ ವರ್ಗದವರು ಹಾಗೂ ಸ್ನೇಹ ಬಳಗದವರು ಶುಭ ಕೋರಿ ಹಾರೈಸಿದರು.
ಇದೇ ಸಂದರ್ಭದಲ್ಲಿ ಅಭಿನಂದನ್ ಸ್ಪೂರ್ತಿ ಧಾಮದ ರಾಮಣ್ಣ ಹಂಪರಗುಂದಿ, ಶೃತಿ ಹಂಪರಗುಂದಿ, ಕಳಕಪ್ಪ ಮುಖ್ಯ ಗುರುಗಳು,ಜಾಫರ್ ಮಿಯಾ, ಮಲ್ಲಿಕಾರ್ಜುನ್ ಬಡಿಗೇರ್,ಬಸಮ್ಮ ಸಜ್ಜನ್,ಕಿಶೋರ್,ಬಸವರಾಜ್ ಸಜ್ಜನ್,ನಾಗರಾಜ್ ಗುತ್ತೇದಾರ್,ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Be the first to comment