CHETAN KENDULIಬಾದಾಮಿ ಮತಕ್ಷೇತ್ರದ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನಮಂತ ಮಾವಿನಮರದ ಅವರು ಕಾರ್ಯಕರ್ತರು, ಮುಖಂಡರೊಂದಿಗೆ ಸೋಲಿನ ಪರಾಮರ್ಶೆ ಮಾಡಿದರು
ಬಾಗಲಕೋಟೆ:ಬಾದಾಮಿ ಮತಕ್ಷೇತ್ರದ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನಮಂತ ಮಾವಿನಮರದ ಅವರು ತಮ್ಮ ಸೋಲಿನ ಪರಾಮರ್ಶೆ ಮಾಡಿದರು.
ತಾಲ್ಲೂಕಿನ ಕೋಟೆಕಲ್ ಗ್ರಾಮದ ತಮ್ಮ ನಿವಾಸದಲ್ಲಿ ಭಾನುವಾರ ಕಾರ್ಯಕರ್ತರು, ಮುಖಂಡರ ಸಮ್ಮುಖದಲ್ಲಿ ಸೋಲಿನ ಪರಾಮರ್ಶೆ ನಡೆಸಿ, ಬಾದಾಮಿಯಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಅಚಲ ವಿಶ್ವಾಸ ಹೊಂದಲಾಗಿತ್ತು. ಎರಡು ಮೂರು ವರ್ಷಗಳಿಂದ ಜನರ ಜೀವನಾಡಿ ಅರಿತ ನಾನು ಜಾತಿ ಭೇದ ಮಾಡದೆ ಎಲ್ಲರೊಂದಿಗೆ ಇದ್ದೆ. ಆದರೆ ಕೆಲವು ಕಡೆ ಹಿನ್ನಡೆಯಾಗಿ ಮತದಾರರು ಮತ ಹಾಕದಿರುವ ನೋವು ಕಾಡುತ್ತಿದೆ ಎಂದರು.
ಬಾದಾಮಿ ಕ್ಷೇತ್ರದಲ್ಲಿ 40 ಸಾವಿರ ಮತಗಳನ್ನು ನೀಡಿದ ಮತದಾರರಿಗೆ ಅಭಿನಂದನೆಗಳನ್ನು ಹೇಳಿ ಕಾರ್ಯಕರ್ತರಿಗೆ, ಮುಖಂಡರಿಗೆ ಧೈರ್ಯ ನೀಡಿದ ಅವರು, ರಾಜಕಾರಣದಲ್ಲಿ ಸೋಲು ಗೆಲುವು ಸಹಜವಾಗಿದೆ. ಎರಡನ್ನು ಸಮಾನವಾಗಿ ಸ್ವೀಕರಿಸಿ ಹೋಗುವುದು ಕೆಲಸ, ಇನ್ನು ಮುಂದೆ ಶ್ರಮವಹಿಸಿ ಕಾರ್ಯ ಮಾಡಿ ಜನರ ವಿಶ್ವಾಸ ಗಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹನಮಂತ ಮಾವಿನಮರದ ಹೇಳಿದರು.
ಕೋಟೆಕಲ್, ಗುಳೇದಗುಡ್ಡ ಸೇರಿದಂತೆ ಬಾದಾಮಿ ಕ್ಷೇತ್ರದ ನಾನಾ ಗ್ರಾಮಗಳ ಮುಖಂಡರು ಕಾರ್ಯಕರ್ತರು ಇದ್ದರು.
Be the first to comment