ಮಸ್ಕಿ ಠಾಣೆಯಲ್ಲಿ ನಟಿ ಉಮಾಶ್ರೀ ವಿರುದ್ಧ ಎಫ್‌ಐಆರ್ ದಾಖಲು

ಮಸ್ಕಿ: ಪಟ್ಟಣದಲ್ಲಿ ಏಪ್ರಿಲ್‌ 28ರಂದು ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಉಮಾಶ್ರೀ ಅವರು ತಮ್ಮ ಭಾಷಣದಲ್ಲಿ ಬಳಸಿದ್ದ ಪದಗಳಿಗೆ ಸಂಬಂಧಿಸಿ ಅವರ ವಿರುದ್ಧ ಚುನಾವಣಾ ವಿಕ್ಷಣಾ ತಂಡದ ಸಿಬ್ಬಂದಿ ನೀಡಿದ ದೂರು ಆಧರಿಸಿ ಮಸ್ಕಿ ಠಾಣೆ ಪೊಲೀಸರು ಬುಧವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

 

ಬಿಜೆಪಿ ನಾಯಕರು ವಿಷಜಂತುಗಳು ಮತ್ತು ಕೋಮುವಾದ ಸೃಷ್ಟಿಸಿ ಬೆಂಕಿ ಹಚ್ಚುವವರು’ ಎಂದು ಉಮಾಶ್ರೀ ಮಾತನಾಡಿದ್ದರು.

 

‘ಇಂಥ ಭಾಷಣದಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡು, ಸಾರ್ವಜನಿಕ ಜೀವನದಲ್ಲಿ ನೆಮ್ಮದಿ ಹಾಳಾಗುವ ಸಾಧ್ಯತೆ ಇರುತ್ತದೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

Be the first to comment

Leave a Reply

Your email address will not be published.


*