ಮಿಸ್ಟರ್ ಡಿಕೆ ಶಿವಕುಮಾರ್‌ ನೀನು ಇನ್ನೊಂದ್ಸಲ ಹುಟ್ಟಿ ಬಂದ್ರೂ ಬಜರಂಗದಳ ಬ್ಯಾನ್‌ ಮಾಡೋಕೆ ಆಗಲ್ಲ, ಬಸನಗೌಡ ಪಾಟೀಲ್ ಯತ್ನಾಳ್ ಸವಾಲು

ಮಸ್ಕಿ : ಇಂದು ಪಟ್ಟಣದಲ್ಲಿ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಿಸ್ಟರ್ ಡಿಕೆ ಶಿವಕುಮಾರ್‌ ನೀನು ಇನ್ನೊಂದ್ಸಲ ಹುಟ್ಟಿ ಬಂದ್ರೂ ಬಜರಂಗದಳ ಬ್ಯಾನ್‌ ಮಾಡೋಕೆ ಆಗಲ್ಲ.

ನಿನಗೆ ಮತ್ತು ನಿನ್ನ ಕಾರ್ಯಕರ್ತರಿಗೆ ಗಂಡಸ್ತನ ಇದ್ದರೆ ನನ್ನ ನಾಲಿಗೆ ಕತ್ತರಿಸುವುದಲ್ಲ, ಮುಟ್ಟಿಯಾದರೂ ನೋಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು.

 

 

ಮಸ್ಕಿ ಪಟ್ಟಣದ ಬಿಜೆಪಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿ,

ಮಿಸ್ಟರ್ ಡಿ.ಕೆ. ಧಮ್ಕಿ ಕೊಡುತ್ತೀರಾ..? ಗೂಂಡಾಗಿರಿ ಮಾಡುತ್ತೀರಾ..? ಕರ್ನಾಟಕವನ್ನು ಕನಕಪುರ ಎಂದು ಭಾವಿಸಿದ್ದೀರಾ.? ಇಂಥ ಗೂಂಡಾಗಿರಿ ಪ್ರವೃತ್ತಿಯವರು ಮುಖ್ಯಮಂತ್ರಿಯಾದರೆ ಏನು ಕತೆ? ಡಿ.ಕೆ. ಶಿವಕುಮಾರ್ ಮಾತನಾಡುವ ಶೈಲಿ, ನಡೆಯುವ ಶೈಲಿ ನೋಡಿದರೆ ಗೂಂಡಾಗಿರಿ ಇದೆ. ಇಂಥವರು ನಮ್ಮಂತವರಿಗೆ ಧಮ್ಕಿ ಕೊಟ್ಟರೆ ಜನಸಾಮಾನ್ಯರ ಕತೆ ಏನು? ಹೀಗಾಗಿ ಕಾಂಗ್ರೆಸ್‌ಗೆ ಮತ ಹಾಕಬೇಡಿ,” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

 

ಈ ಬಾರಿಯ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆದರಿಂದ ಪ್ರತಾಪ ಗೌಡ ಪಾಟೀಲ್ ರನ್ನು ಗೆಲ್ಲಿಸಿ ಮುಂದೆ ಅವರು ಮಂತ್ರಿ ಆಗುವ ಎಲ್ಲಾ ಅವಕಾಶ ಅವರಿಗೆ ಇದೆ ಎಂದರು.

 

ಇದೇ ಸಂದರ್ಭದಲ್ಲಿ ಕೇಂದ್ರದ ಸಚಿವರಾದ ಶ್ರೀ ಮನುಷುಕ್ ಮಾಂಡೆ ಜಿ,ಸಂಸದರಾದ ಪ್ರತಾಪ್ ಸಿಂಹ, ಕೇಂದ್ರದ ಮಾಜಿ ಸಚಿವರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್,

ಮಸ್ಕಿ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಕ್ಷೇತ್ರದ ಪ್ರಮುಖ ಮುಖಂಡರು ,ಮಹಿಳೆಯರು, ಯುವಕರು, ಮತ್ತುಕಾರ್ಯಕರ್ತರು ಹಾಗೂ ಬಿಜೆಪಿ ಪಕ್ಷದ ಅಪಾರ ಜನಸ್ತೋಮ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

Be the first to comment

Leave a Reply

Your email address will not be published.


*