ಡಿ. ಎಸ್ ಎಸ್ ಅಂಬೇಡ್ಕರ್ ವಾದ ನೂತನ ಪದಾಧಿಕಾರಿಗಳ ಆಯ್ಕೆ 

ಮಸ್ಕಿ, ಫೆಬ್ರುವರಿ 25 : ಪಟ್ಟಣದ ಹೊರ ವಲಯದಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ಸಮ್ಮುಖದಲ್ಲಿ ಮಸ್ಕಿ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

 

ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಆದರೆ ಮಸ್ಕಿ ಯ ಪದಾಧಿಕಾರಿಗಳ ಆಯ್ಕೆ ಮಾತ್ರ ಬಾಕಿ ಇದೆ ಎಂದು ಜಿಲ್ಲಾ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕರಾದ ಚಿನ್ನಪ್ಪ ಹೆಡಗಿಬಾಳ,ಜಿಲ್ಲಾ ಉ. ಪ್ರಧಾನ ಸಂಚಾಲಕರಾದ ಎಂ ಕೆ ಮರಿಯಪ್ಪ ಶಿರಿವಾರ ಮತ್ತು ಹನುಮಂತಪ್ಪ ಬೆನಕನಾಳ,ಮಸ್ಕಿ ಪುರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮೌನೇಶ್ ಮುರಾರಿ ಹಾಗೂ ಇನ್ನಿತರೇ ಹಿರಿಯ ಮುಖಂಡರುಗಳ ಸಮ್ಮುಖದಲ್ಲಿ

 

ತಾಲೂಕ ಪ್ರಧಾನ ಸಂಚಾಲಕರು ಬಸವರಾಜ್ ಎಂ ಕೊಠಾರಿ ಮಸ್ಕಿ, ಉ. ಪ್ರಧಾನ ಸಂಚಾಲಕನ್ನಾಗಿ ಚಂದಪ್ಪ ಹಾಲಾಪುರ, ಸಂಘಟನಾ ಸಂಚಾಲಕರನ್ನಾಗಿ ಹುಲಿಗೇಶ್ ಮುರಾರಿ, ಸುಭಾಷ್ ಮಾಸ್ತರ ಮುದಬಾಳ, ರವಿರಾಜ್ ಬೆನಕನಾಳ, ನಾಗರಾಜ್ ದೀನ ಸಮುದ್ರ,ಬಸವರಾಜ್ ಯದ್ದಲ ದಿನ್ನಿ, ಖಜಾಂಚಿ ಯನ್ನಾಗಿ ಬಸವರಾಜ್ ಇರಕಲ್, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ದೇಶಪ್ಪ ಪಾಂಡುರಂಗ ಕ್ಯಾಂಪ್,ಹುಲುಗಪ್ಪ (ಗಾಡಿ) ದೀನ ಸಮುದ್ರ, ದುರುಗಪ್ಪ ಅಂಕುಶ ದೊಡ್ಡಿ, ಬಾಲಸ್ವಾಮಿ ದೀನ ಸಮುದ್ರ,ಮೌಲಪ್ಪ ಅಂಕುಶ ದೊಡ್ಡಿ, ಮೌನೇಶ್ ಅಂಕುಶ ದೊಡ್ಡಿ, ಮಸ್ಕಿ ನಗರ ಘಟಕ ನೂತನ ಪದಾಧಿಕಾರಿಗಳನ್ನಾಗಿ

 

ಪ್ರಧಾನ ಸಂಚಾಲಕರಾಗಿ ಮೌನೇಶ್ ಕೊಠಾರಿ ಮಸ್ಕಿ, ಉ ಪ್ರಧಾನ ಸಂಚಾಲಕರಾಗಿ ನಾಗರಾಜ್ ಕಟ್ಟಿಮನಿ ಮಸ್ಕಿ, ಸಂಘಟನಾ ಸಂಚಾಲಕರಾಗಿ ಆಂಜನೇಯ ಚಲವಾದಿ ಕವಿತಾಳ, ಅಯ್ಯಪ್ಪ ಮುರಾರಿ,ಅಮರೇಶ್ ಕಡಬೂರು,

ಖಜಾಂಚಿಯಾಗಿ ಅಯ್ಯಪ್ಪ ಕಡಬೂರು, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನಿರುಪಾದಿ ಚೌಡಕಿ, ರವಿ ಸುಂಕನೂರು, ರಾಮ ಕುಮಾರ್,ಆಕಾಶ್ ಕಟ್ಟಿಮನಿ, ವಿಶ್ವನಾಥ್ ಕೊಠಾರಿ, ಶರಣ ಬಸವ ಗೂಗೇಬಾಳ,ತಿಮ್ಮಯ್ಯ ಬಸಾಪುರ, ಸೂರ್ಯ ಕುಮಾರ್ ಮುರಾರಿ

ತಾಲೂಕ ಮತ್ತು ನಗರ ಘಟಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಮೌನೇಶ್ ಮುರಾರಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಕುರಿತು ಇಂದಿನಿಂದ ತಾವೆಲ್ಲ ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸಲು ಸಿದ್ದರಾಗಿದ್ದೀರಿ ಉತ್ತಮ ರೀತಿಯಲ್ಲಿ ಸಂಘಟನೆಯ ಘನತೆ ಗೌರವ ವನ್ನು ಕಾಪಾಡಿಕೊಂಡು ಮುನ್ನಡೆಯಿರಿ ಎಂದು ಸಲಹೆ ನೀಡಿದರು. ನಂತರ ಎಲ್ಲಾ ಪದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ

ವಿಜಯ ಕುಮಾರ್ ಹೂವಿನ ಭಾವಿ, ಬಾಲು ಜಾಧವ್ ಮಸ್ಕಿ ತಾಂಡಾ, ಮಹಿಬೂಬ್ ಕುಷ್ಟಗಿ, ಮೌಲ ಸಾಬ್ ಮೇಸ್ತ್ರಿ, ಜಾನಪ್ಪ ಪಾಂಡುರಂಗ ಕ್ಯಾಂಪ್,ಅಹಮ್ಮದ್ ಮಸ್ಕಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*