ಶೈನ್ ಟ್ಯಾಗ್ ಫ್ಯಾಶನ್ ರನ್ ವೇ ಸೀಸನ್ 3 ಶೋ ನಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ನಿತ್ಯಾ ರಘು ದೀಕ್ಷಿತ್
ಬೆಂಗಳೂರು, ಫೆಬ್ರುವರಿ 22 : ಶೈನ್ ಟ್ಯಾಗ್ ಫ್ಯಾಶನ್ ರನ್ ವೇ ಸೀಸನ್ 3 ಶೋವನ್ನು ಸಿಇಒ ಮತ್ತು ಶೈನ್ ಟ್ಯಾಗ್ ಸಂಸ್ಥಾಪಕಿ ಪ್ರಿಯಾ ಮರಿಯಾ ನಾಥನ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಫ್ಯಾಶನ್ ರನ್ ವೇ ಸೀಸನ್ 3 ಶೋ ನಲ್ಲಿ ನಿತ್ಯಾ ರಘು ದೀಕ್ಷಿತ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಶೈನ್ ಟ್ಯಾಗ್ ಬ್ರಾಂಡ್ ಬಟ್ಟೆ, ಮಾಡೆಲಿಂಗ್ ಮತ್ತು ಅಂದಗೊಳಿಸುವ ಬ್ರಾಂಡ್ ಆಗಿದೆ. ಈ ಪ್ರದರ್ಶನವು ವರ್ಣ ರಂಜಿತ ವೇಷ ಭೂಷಣ ಗಳೊಂದಿಗೆ 50 ರಾಂಪ್ ವಾಕ್ ಸ್ಪರ್ಧಾಳುಗಳು ಸ್ಫರ್ಧೆ ಯಲ್ಲಿ ಭಾಗವಯಿಸಿದ್ದರು. ಪದ್ಮ ಪ್ರಿಯಾ,ಸಂಧ್ಯಾ ವೆಂಕಟ್ , ದೀಮಂತ್, ಸಂತೋಷ್,ಸುಚಿತ್ರಾ, ಪ್ರಿಯಾ ಕುಮಾರ್,ಅನಿತಾ ರಂಗನಾಥ್, ಶಾಲ್ಮಲಾ, ವಂಶಿ,ಮತ್ತು ಸುವಿನಾ ಮುಖ್ಯ ಅಥಿತಿಗಳಾಗಿದ್ದರು. ಎಲ್ಲಾ ವಯೋಮಾನದ ರೂಪದರ್ಶಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ವೇದಿಕೆಯ ಮೇಲೆ ಮಕ್ಕಳು ವಿವಿಧ ಬಣ್ಣದ ವೇಷ ಭೂಷಣಗಳೊಂದಿಗೆ ನೋಡುಗರ ಗಮನ ಸೆಳೆಯುವಂತಿತ್ತು. ಮಹಿಳಾ ಮಾಡೆಲ್ ಗಳು ತುಂಬಾ ಆತ್ಮ ವಿಶ್ವಾಸದಿಂದ ರ್ಯಾಂಪ್ ವಾಕ್ ಗೆ ತೆರಳುತ್ತಿದ್ದ ನೋಡುಗರ ಗಮನ ಸೆಳೆಯಿತು.
ಈ ಪ್ರದರ್ಶನ ಸ್ಪರ್ಧೆಯು ನೋಡುಗರ ಮೈ ರೋಮಾಂಚನ ವೆನಿಸುವಂತಿತ್ತು. ಸ್ಪರ್ಧೆಯಲ್ಲಿ ಪ್ರತಿ ವರ್ಗದ ಅತ್ಯುತ್ತಮ ಮಾದರಿಗಳನ್ನು ಆಯ್ಕೆ ಮಾಡಲಾಯಿತು.ಅವರಿಗೆ ಶೈನ್ ಟ್ಯಾಗ್ ನಕ್ಷತ್ರ ಎಂದು ಶೀರ್ಷಿಕೆ ನೀಡಲಾಗಿದೆ. ಅರ್ಪಿತಾ, ಕೀರ್ತನಾ, ಅಕಿರಾ ಇವರು ಯಧುವೀರ್ ಪ್ರಶಸ್ತಿ ಗೆದ್ದಿದ್ದಾರೆ.ಇದರ ಜೊತೆಗೆ ಬ್ರಾಂಡ್ ಅಂಬಾಸಿಡರ್ ಗಳನ್ನು ಗೌರವಿಸಲಾಯಿತು. ಈ ಎಲ್ಲಾ ಬ್ರಾಂಡ್ ರಾಯಭಾರಿಗಳನ್ನು ಪ್ಯಾಶನ್ ಫೈಲ್ ಮತ್ತು ಸಮಾಜದಲ್ಲಿನ ಅವರ ಸಾಧನೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಅದರಂತೆ ಶ್ರಿಯಾ, ರಿತ್ವಿಕ್, ಆರ್ಯ, ಮೋಹಲ್,ಜೋಯಾ, ಶರ್ವೇಶ್ ಧಕ್ಷ, ಗ್ರೀಷ್ಮಾ,ರೆಡ್ದಿ ಮತ್ತು ನಿತ್ಯಾ ರಘು ದೀಕ್ಷಿತ್ ರವರನ್ನು ಬ್ರ್ಯಾಂಡ್ ಅಂಬಾಸಿಡರ್ ಗಳಾಗಿ ಆಯ್ಕೆಯಾಗಿದ್ದಾರೆ.
ಶೈನ್ ಟ್ಯಾಗ್ ಫ್ಯಾಶನ್ ರನ್ ವೇ ಸೀಸನ್ 3 ಶೋ ನಲ್ಲಿ ರಾಂಪ್ ವಾಕ್ ಸ್ಪರ್ಧೆಯಲ್ಲಿ ಭಾಗಿಯಾಗಿ ಆಯ್ಕೆಯಾದ ಪ್ರತಿಯೊಬ್ಬರನ್ನು ಅಭಿನಂದಿಸಲಾಯಿತು.
Be the first to comment