ಹುಣಸಗಿ: ರಾಜ್ಯ ಸರ್ಕಾರವು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಂಡಳಿಯನ್ನು ಘೋಷಿಸುವ ಮೂಲಕ ರಾಜ್ಯದಲ್ಲಿ ಇರುವ ನಮ್ಮ ಸಣ್ಣ ಸಮಾಜವನ್ನು ಗುರುತಿಸಿದ್ದು ಅತ್ಯಂತ ಸಂತೋಷದಾಯಕವಾಗಿದೆ.
ಹಾಗಾಗಿ ಸಮಾಜ ಬಾಂಧವರು ಈ ಅಭಿವೃದ್ಧಿ ನಿಗಮದಲ್ಲಿ ಬರುವ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಏಳಿಗೆಗೆ ಮತ್ತು ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಕೊಳ್ಳುವುದರ ಜೊತೆಗೆ ಸರಕಾರದ ಯೋಜನೆ ಸರಿಯಾಗಿ ಬಳಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಹುಣಸಗಿ ತಾಲೂಕಿನ ಆರ್ಯ ಈಡಿಗ ಸಮಾಜದ ಉಪಾಧ್ಯಕ್ಷ ಹಳ್ಳೆಪ್ಪ ನಿಂಗಯ್ಯ ಗುತ್ತೇದಾರ್ ಅವರು ಸಮಾಜದ ಪರವಾಗಿ ರಾಜ್ಯ ಸರಕಾರಕ್ಕೆ ಮತ್ತು ಸಿ.ಎಂ.ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
Be the first to comment