ಬೆಂಗಳೂರು; ಜೈನ ಸಮುದಾಯದ ರಾಷ್ಟ್ರೀಯ ಅಣುವ್ರತ ಸಮಿತಿಯು ತನ್ನ 75ನೇ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಂದ್ರಾ ಬಡಾವಣೆಯ ಶ್ರೀ ಸಿದ್ಧಗಂಗಾ ವಿದ್ಯಾಪೀಠ ಶಾಲೆಯಲ್ಲಿ ಸಾವಿರಾರು ಮಕ್ಕಳ ಜೊತೆ ಅಣುವೃತ ಸಮಿತಿ ಅಮೃತ ಮಹೋತ್ಸವದ ಲಾಂಚನ ಬಿಡುಗಡೆ ಮಾಡಲಾಯಿತು.
ಲಾಂಚನ ಬಿಡುಗಡೆ ಮಾಡಿದ ಬೆಂಗಳೂರು ಅಣುವೃತ ಸಮಿತಿ ಅಧ್ಯಕ್ಷ ಶಾಂತಿಲಾಲ್ ಪೌರ್ವಾಲ್, ಅಣುವೃತ ಸಮಿತಿಯನ್ನು ‘ಅಣು ವಿಭ’ ಸಂಸ್ಥೆ ಎಂದು ನಾಮಕಾರಣ ಮಾಡಲಾಗಿದೆ. ಈ ವರ್ಷ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಮತ್ತು ಯುವ ಸಮೂಹಕ್ಕೆ ಪ್ರೇರಣೆ ನೀಡುವ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ವಿವಿಧ ಜನಜಾಗೃತಿ ಜಾಥ, ಚರ್ಚಾಸ್ಪರ್ಧೆ, ಉಪನ್ಯಾಸ, ವಿಚಾರ ಸಂಕಿರಣ, ಚಿತ್ರಕಲೆ, ಸಾಂಸ್ಕತಿಕ ಕಾರ್ಯಕ್ರಮಗಗಳನ್ನು ಸಹ ಆಯೋಜಿಲಾಗುವುದು ಎಂದರು.
ಜೈನಾಚಾರ್ಯರಾದ ಆಚಾರ್ಯ ಮಹಾಶ್ರಮಣಜೀ ಅವರ ಮಾರ್ಗದರ್ಶನದಲ್ಲಿ “ಅಮೃತ ಮಹೋತ್ಸವ” ಆಚರಣೆ ನಡೆಯುತ್ತಿದ್ದು, ದೇಶ ವಿದೇಶಗಳಲ್ಲಿ ವಿಶೇಷ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಣುವೃತ ಜನಾಂದೋಲನವನ್ನು ಯಶಸ್ವಿಗೊಳಿಸಲಾಗುವುದು ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಅಣುವೃತ ಸಮಿತಿ ಬೆಂಗಳೂರು ಕಾರ್ಯದರ್ಶಿ ಮಾಣಿಕ್ ಸಂಚೇತಿ, ಸಂಘಟನಾ ಕಾರ್ಯದರ್ಶಿ ನಿರ್ಮಲಾ ಪೊಕ್ರಾನ್, ಶಾಂತಿ ಸಕಲೇಚ, ಸಂಯೋಜಕ ಬಿ.ವಿ.ಚಂದ್ರಶೇಖರಯ್ಯ, ಸಿದ್ಧಗಂಗಾ ಶಾಲೆಯ ಪ್ರಾಂಶುಪಾಲರಾದ ಟಿ.ಎಂ. ಹಂಸ, ಪ್ರಕಾಶ್ ಯೋಗಿ ಗುರೂಜಿ ಉಪಸ್ಥಿತರಿದ್ದರು.
Be the first to comment