ಮಸ್ಕಿ, ಫೆಬ್ರುವರಿ 22 : ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಯಿಂದಾಗಿ ರಾಜ್ಯದ ಹಡಪದ ಸಮಾಜದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.ಸಮಾಜದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ನಿಗಮ ಘೋಷಣೆ ಮಾಡಿದ್ದು ಇಡೀ ರಾಜ್ಯದ ಹಡಪದ ಸಮಾಜ ಸಂಭ್ರಮಿಸುವಂತೆ ಮಾಡಿದೆ ಎಂದು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನಿಗಮ ಘೋಷಣೆಯಿಂದಾಗಿ ಹಡಪದ ಸಮಾಜವು ಶೈಕ್ಷಣಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಸ್ಕಿ ತಾಲೂಕಿನ ಹಡಪದ ಸಮಾಜದವರು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಿಜೆಪಿಯ ಯುವ ಮುಖಂಡರಾದ ಪ್ರಸನ್ನ ಪಾಟೀಲ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಎಲ್ಲರೂ ಪರಸ್ಪರ ಸಿಹಿ ಹಂಚಿ ಪಟಾಕಿ ಹಚ್ಚಿ ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಪ್ರಸನ್ನ ಪಾಟೀಲ್ ರವರು ತುಂಬಾ ಹರ್ಷ ವ್ಯಕ್ತಪಡಿಸಿ ಹಡಪದ ಸಮಾಜಕ್ಕೆ ನಿವೇಶನ ಕೊಡಿಸುವ ಭರವಸೆ ನೀಡಿದರು. ಜಿಲ್ಲಾಧ್ಯಕ್ಷರಾದ ಮಹಾಬಲೇಶ್ವರ ಬಳಗಾನೂರು ಹಾಗೂ ಉಪಾಧ್ಯಕ್ಷರಾದ ಗದ್ಯಪ್ಪ ಜಕ್ಕೇರಮಡು ರವರು ಮುಖ್ಯಮಂತ್ರಿಗಳ ಆದೇಶವನ್ನು ಮುಕ್ತ ಕಂಠದಿಂದ ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಡಪದ ಸಮಾಜದ ಮುದಗಲ್ ಅಧ್ಯಕ್ಷರಾದ ಗುಂಡಪ್ಪ, ಮಸ್ಕಿ ಅಧ್ಯಕ್ಷರಾದ ಗುಂಡಪ್ಪ ಕಟ್ಟಿಮನಿ, ಉಪಾಧ್ಯಕ್ಷರಾದ ಚಂದ್ರಶೇಖರ್ ಸಾನಬಾಳ, ನಾಗರಾಜ್ ಕಟ್ಟಿಮನಿ,ಪಂಪಣ್ಣ ಗಬ್ಬೂರು, ಅಮರೇಶ್ ಟೈಲರ್, ತಿಪ್ಪಣ್ಣ ಟೈಲರ್, ಅಮರೇಶ್, ಹನುಮಂತಪ್ಪ ಸರ್ಜಾಪುರ್, ಶಿವಪ್ಪ ಕಟ್ಟಿಮನಿ, ಶರಣಪ್ಪ ಮೆದಿಕಿನಾಳ , ಮೌನೇಶ್ ಜಂಗಮರ ಹಳ್ಳಿ , ಮೌನೇಶ್ ಬುದ್ದಿನ್ನಿ, ನಾಗರಾಜ್ ಸಂತೆಕಲ್ಲೂರು, ವೀರೇಶ್ ಗಬ್ಬೂರು, ರಮೇಶ್ ಮುದಗಲ್, ತಿಪ್ಪಣ್ಣ ಮುದಗಲ್, ದೇವರಾಜ ಉದ್ಬಾಳ, ಶರಣಬಸವ ಉದ್ಬಾಳ, ವೀರೇಶ ಚನ್ನಬಸಪ್ಪ, ದೇವರಾಜ್ ಕ್ಯಾತ್ನಟ್ಟಿ, ವೀರೇಶ್ SVS, ಮಲ್ಲಿಕಾರ್ಜುನ, ಶಿವು ಮುಂತಾದವರು ಉಪಸ್ಥಿತರಿದ್ದರು.
Be the first to comment