ಇರಕಲ್ : ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

ಮಸ್ಕಿ, ಫೆಬ್ರುವರಿ 22 : ತಾಲ್ಲೂಕಿನ ಜಗದ್ಗುರು ಶಿವಶಕ್ತಿ ಪೀಠ ಇರಕಲ್ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಸ್ವಚ್ಚತಾ ಆಂದೋಲನ ಮತ್ತು ಜನಜಾಗೃತಿ ಯಾತ್ರೆ ಕಾರ್ಯಕ್ರಮ ನಡೆಯಿತು.

 

 

ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡುತ್ತಾ ಇಂದು ನಾವೆಲ್ಲರೂ ಪರಿಸರ ಕಾಳಜಿ ಹೊಂದಬೇಕು ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಭವಿಷ್ಯದಲ್ಲಿ ನಾವು ಉತ್ತಮವಾದ ಆರೋಗ್ಯ ,ಗಾಳಿ,ನೀರು ಸಿಗಬೇಕಾದರೆ ನಾವು ಈಗಿನಿಂದಲೇ ಹೆಚ್ಚು ಪರಿಸರ ಜಾಗೃತಿ ಗೆ ಒತ್ತುಕೊಡಬೇಕು ಎಂದು ಪಂಪನಗೌಡ ಸಹಾಯಕ ಅಭಿವೃದ್ಧಿ ಅಧಿಕಾರಿ ಮಸ್ಕಿ ತಾಲ್ಲೂಕು ಪಂಚಾಯತ ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀ ಬಸವ ಪ್ರಸಾದ ಶರಣರು ಸಾನಿಧ್ಯ ಅಲಂಕರಿಸಿ ಮಾತನಾಡುತ್ತಾ ನಾವುಗಳು ಉತ್ತಮ ಆರೋಗ್ಯ ವಂತರಾಗಬೇಕಾದರೆ ಪ್ರತಿಯೊಬ್ಬರು ಮರಗಿಡಗಳನ್ನು ರಕ್ಷಿಸಿ ಪೋಷಿಸುವ ಕೆಲಸ ಮಾಡಬೇಕು ಆಗ ಭಾರತ ಸಾರ್ಥಕ ಸಾಧನೆ ಮಾಡಿದಂತೆ ಆಗುತ್ತದೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ವಟಗಲ್ ಪಿಡಿಒ ಬಸವರಾಜ, ಮಾತಾಜಿ ಶಾರದ ದೇವಿ,ಶ್ರೀನಿವಾಸ ನಾಯಕ,ಕರಿಯಪ್ಪ ನಾಯಕ, ಶ್ರೀ ಮಠದ ಶಾಲಾ ಕಾಲೇಜು ಸಿಬ್ಬಂದಿ ಗಳಾದ ಶ್ರೀ ಕಾಂತ ಹಾಲಾಪೂರ, ಗುಂಡೆರಾವ್,ಶಿವಣ್ಣತಾತ, ಸಿದ್ದಾರ್ಥ ಪಾಟೀಲ್, ಹನುಮಂತ, ಗುರುಲಿಂಗಪ್ಪ, ಮಂಜುನಾಥ, ಶ್ವೇತಾ ನಟೆಕಲ್, ಉಮಾದೇವಿ,ಚಂದ್ರಕಲಾ,ಗೀತಾಂಜಲಿ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*