ಜಾನಪದ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ವೀರ ಕೇಸರಿ ಜಾನಪದ ಸೇವಾ ಸಿರಿ ರಾಜ್ಯ ಪ್ರಶಸ್ತಿ ಪ್ರಧಾನ

ಹುಣಸಗಿ: ವೀರ ಕೇಸರಿ ಕಲಾ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಖಾಪುರ ಹಾಗೂ ರಾಜ್ಯ ಸರ್ಕಾರಿ ಕರ್ನಾಟಕ ನೌಕರರ ಸಂಘ ಭೀಮರಾಯನ ಗುಡಿ ಇವರ ಸಹಯೋಗದಲ್ಲಿ ಪ್ರತಿವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡುವ “ವೀರಕೇಸರಿ ಜಾನಪದ ಸೇವಾ ಸಿರಿ” ಪ್ರಶಸ್ತಿಗೆ “ಜಾನಪದ ಸೇವಾಕ್ಷೇತ್ರದಿಂದ ಮಲ್ಲಿಕಾರ್ಜುನ ಕಟ್ಟಿಮನಿ ಕಾಮನಟಗಿ ಇವರು ಆಯ್ಕೆಯಾಗಿದ್ದು ಸದರಿ ಪ್ರಶಸ್ತಿಯನ್ನು ನಮ್ಮ ಸಂಸ್ಥೆ ವತಿಯಿಂದ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದಂತಹ ಭೀಮಣ್ಣ ಶಖಾಪುರ ಅವರು ತಿಳಿಸಿದರು.

 

ನಂತರ ಮಾತನಾಡಿದ ಅವರು ಇಂದು ಅದೆಷ್ಟೋ ಮಕ್ಕಳಲ್ಲಿ ಜಾನಪದ ಸೇರಿದಂತೆ ಹಲವಾರು ರೀತಿಯ ಇಂತಹ ಪ್ರತಿಭೆಗಳು ಇದ್ದೇ ಇರುತ್ತಾರೆ ಅಂತಹವರನ್ನು ಸಂಬಂಧಪಟ್ಟ ಪಾಲಕರು ಗಮನಿಸಬೇಕು. ನಾವು ಕೇವಲ ನಮ್ಮ ಮಕ್ಕಳು, ವೈದ್ಯರಾಗಲಿ ಅಥವಾ ಅಭಿಯಂತರರಾಗಲಿ ಎಂದು ಬಯಸುವುದು ತಪ್ಪು. ಮಕ್ಕಳ ಅಭಿರುಚಿ ಹಾಗೂ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿದರೆ, ಅದೆಷ್ಟೊ ಪ್ರತಿಭೆಗಳು ಅರಳುತ್ತವೆ. ಸುಂದರ ನಾಡಿನ ಪುಷ್ಪಗಳು ನಮ್ಮ ನಾಡಿನ ಮಕ್ಕಳು. ಕಿರಿಯರಿದ್ದಾಗಲೇ ಅವರು ನಮ್ಮ ನಾಡಿನ ಸಂಸ್ಕೃತಿ ಸಂಪ್ರದಾಯ ಪದ್ದತಿಗಳನ್ನು ತಿಳಿಯುತ್ತಾ, ಹಿರಿಯರು ಕಿರಿಯರೊಂದಿಗೆ ನಡೆದುಕೊಳ್ಳುವ ರೀತಿ ನೀತಿಗಳನ್ನು ತಿಳಿಯುತ್ತಾ ವಿದ್ಯಾ ಸಾಗರದಲ್ಲಿ ದುಮುಕಿದರೆ, ತಮ್ಮ ಗುರಿಯನ್ನು ತಲುಪುವುದರಲ್ಲಿ ಅನುಮಾನವೇ ಇಲ್ಲ. ನಮ್ಮ ಭಾರತದ ಅದೆಷ್ಟೋ ಪ್ರತಿಭೆಗಳು ಅರಳುತ್ತವೆ. ಹೀಗೆ ಹತ್ತು ಹಲವು ಸಾಧನೆಯಲ್ಲಿ ತೊಡಿಗಿ ಜಾನಪದ ಹಾಗೂ ಸಮಾಜ ಸೇವೆಯಲ್ಲಿ ಸಾಧನೆಯನ್ನು ಮಾಡಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗಿದೆ.

 

ಇದೇ ವೇಳೆ ಶಹಾಪುರದ ಶಾಸಕರಾದಂತ ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಬೆಂಗಳೂರಿನ ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟಿಸ್ ಮಾಲೀಕರಾದಂತಹ ಡಾ.ಎಸ್.ಪಿ ದಯಾನಂದ, ನಮ್ಮ ಕರ್ನಾಟಕ ಸೇನೆಯ ರಾಜ್ಯಾದ್ಯಕ್ಷ ಎಂ. ಬಸವರಾಜ ಪಡಿಕೋಟೆ, ಶ್ರೀ ಪರಮಪೂಜ್ಯ ಶ್ರೀ ವಿಶ್ವರಾಧ್ಯ ಸ್ವಾಮಿಜೀ ಬಾರಾಜ್ಯೋತಿರ್ಲಿಂಗ ಟ್ರಸ್ಟ್ ಅಧ್ಯಕ್ಷರು ಪರಮಪೂಜ್ಯ. ಶ್ರೀ ವರಲಿಂಗೇಶ್ವರ ಸ್ವಾಮಿಜೀ ಪುಣ್ಯಕೋಟಿ ಆಶ್ರಮ ಗೊರಗುಂಡಗಿ,ಪರಮ ಪೂಜ್ಯ ಶ್ರೀಸಿದ್ರಾಮೇಶ್ವರ ಸ್ವಾಮಿಜೀ ವೀರ ಭದ್ರೇಶ್ವರ ಹೀರೆಮಠ ಸಂಸ್ಥಾನ ನಾಗನಟಗಿ ಪರಮ ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಜೀ ಕೈಲಾಸಾಶ್ರಮ ಹೋತಪೇಠ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಮುತ್ಯಾ ಸುಕ್ಷೇತ್ರ ಮಹಲರೋಜ ಇವರ ದಿವ್ಯ ಸಾನಿಧ್ಯದಲ್ಲಿ ಕಲಾವಿದರಿಗೆ ಪ್ರಶಸ್ತಿಯನ್ಮು ಪ್ರಧಾನ ಮಾಡಲಾಯಿತು.

Be the first to comment

Leave a Reply

Your email address will not be published.


*