ಮಸ್ಕಿ, ಫೆಬ್ರವರಿ 02 : ತಾಲೂಕಿನ ಹಾಲಾಪೂರ ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಜರುಗಿತು, ಮೊದಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಿಂದ ಎತ್ತಿನ ಬಂಡೆ ತೋರಣಗಳಿಂದ ಕೂಡಿದ ಮತ್ತು ಟ್ರಾಕ್ಟರ್ ಮೂಲಕ ಹಲವಾರು ಪುಟಾಣಿ ಮಕ್ಕಳಿಂದ ರಾಷ್ಟ್ರ ನಾಯಕರ ವೇಷಭೂಷಣ ಹಾಕಿ,ಜೊತೆಗೆ ಶಾಲಾ ವಿದ್ಯಾರ್ಥಿನಿಯರು ಕಳಸ ಹಾಗೆ ಯುವಕರು ಡೊಳ್ಳು ನೊಂದಿಗೆ ಗ್ರಾಮದ ಮುಖ್ಯ ರಸ್ತೆಯೊಂದಿಗೆ ಹೋಗುತ್ತಾ ನಂತರ ಸರಕಾರಿ ಪ್ರೌಢ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರವಿ ದೇಸಾಯಿ ಉದ್ಘಾಟಿಸಿದರು.
ನಂತರ ಕಾರ್ಯಕ್ರಮದಲ್ಲಿ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿ ಕುಬೇರಪ್ಪ ರವರು ಇಂದು ಕರ್ನಾಟಕ ಘನ ಸರಕಾರವು ಶಿಕ್ಷಣ ಇಲಾಖೆಗೆ ಹಲವಾರು ಯೋಜನೆಗಳನ್ನು ಕೊಟ್ಟಿದ್ದು ಅದರಲ್ಲಿ ಮಕ್ಕಳ ಪಾಠದ ಜೊತೆಗೆ ಮಕ್ಕಳಿಗೆ ಕಲಿಕೆಯಲ್ಲಿ ಸೃಜನಶೀಲ, ಸೃಜನಾತ್ಮಕ ಶಿಕ್ಷಣ ನೀಡುವಲ್ಲಿ ಬಹಳ ಪ್ರಾಮುಖ್ಯತೆಯಾಗಿದೆ ಹೀಗಾಗಿ ಮಕ್ಕಳ ಕಲಿಕಾ ಗುಣಮಟ್ಟವು ತ್ವರಿತಗತಿಯಲ್ಲಿ ಏರಿಕೆ ಆಗಬೇಕೆಂಬ ಕಾರಣ ಇಂತಹ ಕಾರ್ಯಕ್ರಮಗಳನ್ನು ಸರಕಾರದ ಮುಖ್ಯ ಉದ್ದೇಶ ವಾಗಿದೆ ಅದಕ್ಕಾಗಿ ಶಿಕ್ಷಕರು ಕಲಿಕಾ ಹಬ್ಬವನ್ನು ಮಕ್ಕಳಿಗೆ ಕಲಿಸಬೇಕೆಂದು ಹೇಳಿದರು. ನಂತರ ಶಿಕ್ಷಕರ ಕಲಿಕೆಯಿಂದ ವಿದ್ಯಾರ್ಥಿಗಳು ಅನೇಕ ಪ್ರಾಣಿ,ಪಕ್ಷಿ ಮತ್ತು ವಿವಿಧ ಆಟೋಟ ಸಾಮಾಗ್ರಿಗಳನ್ನು ಕಾಗದ ಪೇಪರ,ಬಣ್ಣಗಳಿಂದ ತಯಾರಿಸಿದ ಚಿತ್ರಗಳು ನೋಡುಗರ ಮನಸ್ಸು ಸಂತೋಷವೆನಿಸಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿದ್ಧಲಿಂಗೇಶ್ವರ, ವೀರಭದ್ರಪ್ಪ ತಾತ, ವೆಂಕಟರಡ್ಡಿಗೌಡ, ಶರಣೇಗೌಡ, ಸಿ ಆರ್ ಪಿ ಪ್ರಶಾಂತಗೌಡ, ಸುಭಾಷ್ ಸಿಂಗ್,ಮಲ್ಲಪ್ಪ ಮುಖ್ಯ ಗುರು, ಚಂದಪ್ಪ ದೊಡ್ಡಮನಿ,ಉಮೇಶ,ಶಿವರಾಜ ಗುತ್ತೆದಾರ,ಅಮರೇಶ,ಶಂಕರಗೌಡ,ಮಂಜುನಾಥ ಶಿಕ್ಷಕರು,ಸಿದ್ದಾರ್ಥ ಪಾಟೀಲ್, ಅರವಿಂದ್ ಪಾಟೀಲ್, ಚನ್ನವೀರ ಜೊತಾನ,ಹನುಮಂತ ದೇಸಾಯಿ,ಲಕ್ಷ್ಮಣ ನಾಯಕ,ಸುಮಂತ್ , ಮಡಿವಾಳಪ್ಪ,ಶೇಖರಪ್ಪ ಸುತ್ತಮುತ್ತಲಿನ ಶಾಲೆಯ ಶಿಕ್ಷಕರು ಇತರರು ಇದ್ದರೂ.ನಂತರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಾಲೆಯ ಮಕ್ಕಳಿಗೆ ಕಲಿಕಾ ಹಬ್ಬದ ಕಾರ್ಯಗಾರ ಚಟುವಟಿಕೆಗಳನ್ನು ಶಿಕ್ಷಕರು ಉತ್ತಮವಾಗಿ ನಡೆಸಿಕೊಟ್ಟರು.
Be the first to comment