ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯಲ್ಲಿ ಅರಾಧ್ಯ ಸಮಗ್ರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ (ರಿ) ಹುನಗುಂದ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಪ್ರಯುಕ್ತ ತಾಲೂಕ ಮಟ್ಟದ “ಹೆಣ್ಣು ಮಗು ಮತ್ತು ಮಕ್ಕಳ ಹಕ್ಕುಗಳಪ್ರಬಂಧಸ್ಪರ್ಧೆಏರ್ಪಡಿಸಲಾಗಿತ್ತು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಯಮನಪ್ಪ KMS ಸಹಾಯಕ ನಿರ್ದೇಶಕರು/ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ,ಹುನಗುಂದ ಇವರು ಮಾತನಾಡಿ ಮಕ್ಕಳಲ್ಲಿ ಧನಾತ್ಮಕ ಆಲೋಚನೆ ಬೆಳೆಸುತ್ತ ಛಲವಂತರಾಗಿ ಮನಸ್ಸಿನ ಗುಲಾಮರಾಗದೆ ಮನಸ್ಸನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಹೇಳುತ್ತ ಮಕ್ಕಳಲ್ಲಿ ಸ್ಪೂರ್ತಿ ತುಂಬಿದರು.
ಶಾಲಾ-ಕಾಲೇಜುಗಳು ಈ ದಿನವನ್ನು ಆಚರಿಸದಿದ್ದರೆ, ವಿದ್ಯಾರ್ಥಿಗಳು ಮಹಿಳಾ ದಿನಾಚರಣೆಯ ಮಹತ್ವವನ್ನು ಕಲಿಯುವುದಿಲ್ಲ. ಮಹಿಳಾ ದಿನಾಚರಣೆಯು ಈಗ ಪ್ರತಿ ವರ್ಷವೂ ಒಂದು ಪದ್ಧತಿಯಾಗಿದೆ ಮತ್ತು ನಮ್ಮ ಸುತ್ತಮುತ್ತಲಿನ ಮಹಿಳೆಯರಿಗೆ ಆಚರಿಸಲಾಗುತ್ತದೆ. ಈ ಎಲ್ಲಾ ಮಹಿಳೆಯರು ಗೌರವ, ಪ್ರೀತಿ, ಕಾಳಜಿ ಮತ್ತು ಸಂತೋಷಕ್ಕೆ ಅರ್ಹರು. ಮಹಿಳಾ ಸಬಲೀಕರಣವು ಈ ಎಲ್ಲ ಮಹಿಳೆಯರಿಗೆ ಅಗತ್ಯವಿರುವ ದೊಡ್ಡ ಜವಾಬ್ದಾರಿಯಾಗಿದೆ. ಮಹಿಳೆಯರು ಅಸ್ತಿತ್ವದಲ್ಲಿರಲು ಕಷ್ಟಗಳನ್ನು ಅನುಭವಿಸದಿದ್ದಾಗ ಜಗತ್ತು ಉತ್ತಮ ಸ್ಥಳವಾಗುತ್ತದೆ.ಎಂದು ಶ್ರೀ ಹೊನಕೇರಿಮಲ್ಲಪ್ಪ ಹಡಪದತಾಲೂಕ ಸಂಯೋಜಕರು ಸ್ಪೂರ್ತಿ ಯೋಜನಾ ಕೆ.ಎಚ್.ಪಿ.ಟಿ. ಬಾಗಲಕೋಟೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರುಣಿಸುವುದರ ಮೂಲಕ ಡಾ. ಬಿಜಯಮಹಾಂತೇಶ ಕೂ. ಮಲಗಿಹಾಳ ಅಧ್ಯಕ್ಷರು, ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ (ರಿ) ಹುನಗುಂದ ಹಾಗೂ ಶ್ರೀ ಮಹಾಲಿಂಗೇಶ ನಾಡಗೌಡರ ಅಧ್ಯಕ್ಷರು ಗ್ರಾ.ಪಂ. ಕೆಲೂರ ಇವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಎಸ್.ಬಿ. ಹೆಳವರ ಮುಖ್ಯೋಪಾಧ್ಯಾಯರು, ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ, ಕೆಲೂರ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬಿ.ಜಿ.ರಾಘಾಪೂರಸಾಮಾಜಿಕ ಲೆಕ್ಕ ಪರಿಶೋಧಕರು ತಾ.ಪಂ. ಹುನಗುಂದ ಮತ್ತು
ಶ್ರೀ ಶಿವಕುಮಾರ ಕೆ. ಸೆಲ್ಕೊ ಸೋಲಾರ್ ಲೈಟ್ ಪ್ರೈ.ಲಿ ಎಕ್ಸಕ್ಯೂಟೀವ್ ಎನರ್ಜಿ ಸಲ್ಯೂಶನ್ ಇವರು ಉಪಸ್ಥಿತರಿದ್ದರು.ಶ್ರೀಮತಿ ಸಿ.ಹೆಚ್.ಕಲ್ಮಠ ಸ್ವಾಗತಿಸಿದರು,ಶಿಕ್ಷಕರಾದ ಎಸ್.ಬಿ.ಯಾವಗಲ್ಲಮಠ ನಿರೂಪಿಸಿದರು ಶ್ರೀ ವಾಯ್.ಎಸ್.ವಾಲಿಕಾರ ವಂದಿಸಿದರು.
Be the first to comment