ಕ.ಕಾ.ನಿ.ಪ. ಧ್ವನಿ ಸಂಘಟನೆಯ ಯಾದಗಿರಿ ಜಿಲ್ಲಾಧ್ಯಕ್ಷ,ವಿವಿಧ ತಾಲೂಕು ಅಧ್ಯಕ್ಷರು ಆಯ್ಕೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು, ಇಂದು ಯಾದಗಿರಿ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

 

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿರುವ 16,000 ಪತ್ರಕರ್ತರಿಗೆ ಸರ್ಕಾರಿ ಸೌಲಭ್ಯ ಹಾಗೂ ಮಾಶಾಸನ ಸೇರಿದಂತೆ ನೊಂದ ಪತ್ರಕರ್ತರ ಹಲವು ಬೇಡಿಕೆಗಳು ಈಡೇರಿಕೆಗಾಗಿ ನಿರಂತರವಾಗಿ ಶ್ರಮಿಸುವ ಮೂಲಕ ಕಾನೂನಾತ್ಮಕವಾಗಿ ನ್ಯಾಯ ಒದಗಿಸಲು ನಿರಂತರವಾಗಿ ಹೋರಾಡುತ್ತೇನೆ ಎಂದು ಹೇಳಿದರು.

 

ಇದೆ ವೇಳೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆ ಜಿಲ್ಲಾಧ್ಯಕ್ಷರನ್ನಾಗಿ ಅಯ್ಯಣ್ಣ ಹೂಗಾರ ಅವರನ್ನು ಆಯ್ಕೆ ಮಾಡಿದರು. ಶಹಾಪುರ ತಾಲ್ಲೂಕು ಅಧ್ಯಕ್ಷರಾಗಿ ಮಡಿವಾಳಪ್ಪ ಪಾಟೀಲ್, ಹುಣಸಗಿ ತಾಲೂಕು ಅಧ್ಯಕ್ಷರಾಗಿ ಬಾಪುಗೌಡ ಮೇಟಿ, ಸುರಪುರ ತಾಲೂಕು ಅಧ್ಯಕ್ಷರಾಗಿ ಮೌನೇಶ ಬಿ. ಮಂಗಿಹಾಳ

 

ಪ್ರಧಾನ ಕಾರ್ಯದರ್ಶಿಯಾಗಿ ರಘು ಮಾಸ್ತರ್, ಉಪಾಧ್ಯಕ್ಷರಾಗಿ ನಾಗರಾಜ ದೇಸಾಯಿ, ಭೀಮಾಶಂಕರ ಕರ್ನಾಳ, ಗೌರವಾಧ್ಯಕ್ಷರು ಮೌನೇಶ ಆರ್. ಬೋವಿ, ಖಜಾಂಚಿ ಮದನ್ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿ ಬಲಭೀಮ ನಾಯಕ ದೇವರಗೋನಾಲ, ಕಾರ್ಯಧ್ಯಕ್ಷ ಇಲಿಯಾಸ್ ಪಟೇಲ್, ಸಹ ಕಾರ್ಯದರ್ಶಿಗಳು ಧರ್ಮರಾಜ, ಮೌನೇಶ ಗೊಡ್ರಿಹಾಳ, ಹುಸೇನ್ ಭಾಷಾ ಅವರನ್ನು ನೇಮಕ ಮಾಡಿದರು.

 

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಇಶಾಕ್, ಸೇರಿದಂತೆ ಯಾದಗಿರಿ, ಶಹಾಪುರ, ಸುರಪುರ ಹುಣಸಗಿ ಪದಾಧಿಕಾರಿಗಳು ಇದ್ದರು.

 

Be the first to comment

Leave a Reply

Your email address will not be published.


*