ಸತ್ಯ, ಸಮಾನತೆ, ಆಹಿಂಸೆ ತತ್ವಗಳನ್ನು ಅಳವಡಿಸಿಕೊಳ್ಳಿ : ಸುಭಾಷ್ ವ್ಹಿ. ರಾಠೋಡ ಜೀ.*

*ಚಿಂಚೋಳಿ:ಜ,01-* ತಾಲೂಕಿನ ಸಲಗರ ಬಸಂತಪೂರ ಗ್ರಾಮ ಪಂಚಾಯತ ವ್ಯಾಪ್ತಿಯ ಸಲಗಾರ್ ಕಾಲೋನಿ ತಾಂಡಾದಲ್ಲಿ ನಡೆದ *ಜೈ ಬಜರಂಗ ಬಲಿ ಜಾತ್ರಾ ಮಹೋತ್ಸವ* ಕಾರ್ಯಕ್ರಮದಲ್ಲಿ *ಚಿಂಚೋಳಿ ಕಾಂಗ್ರೆಸ್ ಮುಖಂಡರಾದ ಸುಭಾಷ್ ವ್ಹಿ. ರಾಠೋಡ ಜೀ* ರವರು ಭಾಗವಹಿಸಿ, ದೇವರ ದರ್ಶನ್ ಪಡೆದು, *ಜಾತ್ರಾ ಮಹೋತ್ಸವ ಕುರಿತು ಮಾತನಾಡಿ, ಜಾಣ ಜೋ ಛಾಣ ಜೋ ಓರ ಪಚದ ಮಾನ ಜೋ (ತಿಳುವಳಿಕೆ ಬೆಳೆಸಿಕೊಳ್ಳಿ ಎಲ್ಲವನ್ನೂ ಸೋಸಿ ನೋಡಿ ನಂತರ ಮಾತ್ರ ನಂಬಿ)* ಯಾವುದೇ ಪರಿಸ್ಥಿತಿಯ ವಿಷಯ ಅಥವಾ ಪರಿಸ್ಥಿತಿಯನ್ನು ತಿಳಿದುಕೊಳ್ಳದೆ ಪರಾಮರ್ಶೆ ಮಾಡದೇ ಯಥಾವತ್ತಾಗಿ ಒಪ್ಪಿಕೊಳ್ಳದೆ ಸಮಗ್ರವಾಗಿ ತಿಳಿದುಕೊಂಡ ನಂತರವೇ ಅದನ್ನು ಒಪ್ಪಿಕೊಂಡರೆ ಮಾತ್ರ ನಿಮ್ಮ ಜೀವನದಲ್ಲಿ ಒಳಿತಾಗುತ್ತದೆಂಬುದು ಸದ್ಗುರುಗಳ ವಚನವಾಗಿತ್ತು. *ಮನ್ ಚಂಗಾ ತೋ ಕಾಟೋಟೀಮ್ ಗಂಗಾ ಜೀವನ ಪಾವನಗೊಳಿಸಲು ಗಂಗೆಗೆ ಹೋಗಬೇಕಾಗಿಲ್ಲ ನಿಮ್ಮ ಮನಸ್ಸು ಮತ್ತು ಆತ್ಮ ನಿರ್ಮಲವಾಗಿದ್ದರೆ ಸಾಕು ನಿಮ್ಮ ಮನೆಯ ಕಾಟೋಟಿಯಲ್ಲಿ (ಕೊಳಪಾಟ) ಗಂಗೆಯನ್ನು ಕಾಣಬಹುದು* ಎಂಬುದು ಸೇವಾಲಾಲ ಮಹಾರಾಜರ ಆಶಯವಾಗಿತ್ತುಸದ್ಗುರು ಸೇವಾಲಾಲ ಮಹಾರಾಜರು ತಮ್ಮ ಜೀವನದುದ್ದಕ್ಕೂ ಪ್ರಕೃತಿ, ಪ್ರೇಮ, ಸತ್ಯ, ಸಮಾನತೆ, ದಯೆ, ಕರುಣೆ, ಆಹಿಂಸೆಯನ್ನು ಬೋಧನೆ ಮಾಡಿದುದಷ್ಟೇ ಅಲ್ಲ ತಮ್ಮ ಜೀವನದಲ್ಲಿ ಇವುಗಳನ್ನು ಪಾಲಿಸಿಕೊಂಡು ಬಂದಿದ್ದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ತತ್ವಗಳ ಜೊತೆಯಲ್ಲಿ *’ರಾಜ ಬದಲಜಾಯ್’ (ಆಳ್ವಿಕೆ ಬದಲಾಗಲಿದೆ). ಕಟೊರೊ ಪಾಣಿ:* *ವಕೀಯ’ (ರೂಪಾಯಿಗೊಂದು*

*ಲೋಟ ನೀರ ಮಾರಾಟವಾಗಲಿದೆ) ‘ಮಾ ಬೇಟಾನ ಭಾರಿ ಪಡೀಯ’ (ತಾಯಿ ಮಗನಿಗೆ ಹೊರೆಯಾಗುವಳು)* ಸದ್ಗುರು, ಸೇವಾಲಾಲರು, ವ್ಯಕ್ತಿತ್ವ ವಿಕಾಸ, ಸಾಮಾಜಿಕ ಜೀವನ ಆಧ್ಯಾತ್ಮಿಕ ಜೀವನ ಧಾರ್ಮಿಕ ಆಚರಣೆಗಳು, ನ್ಯಾಯ ಪಂಚಾಯತಿ, ಆರ್ಥಿಕ ಸಬಲೀಕರಣ, ಇವೆಲ್ಲವುಗಳ ವಿಷಯವಾಗಿ ಜೀವನವಿಡಿ ಬೋಧನೆ ಮಾಡುತ್ತ ತಮ್ಮ ಜೀವನ ಕಳೆದಿದ್ದಾರೆ. ಇಂದು ಬಂಜಾರಾ ಸಮುದಾಯದಲ್ಲಿ ಕಾಣಬಹುದ ಸಾಂಸ್ಕೃತಿಕ ಸೌಂದರ್ಯತೆ, ಸಾಮೂಹಿಕ ಜೀವನದ ಸಾರ್ಥಕತೆ, ವೈಯಕ್ತಿಕ ಸಮರದ ಹಾಗೂ ಮುಗ್ಧತೆಗಳು ಸದ್ಗುರು ಸೇವಾಲಾಲ ಮಹಾರಾಜರ ಕೊಡುಗೆಗಳಾಗಿವೆ.

ಹೀಗೆ ಬಂಜಾರರ ಮಳಿಗೆಯ ಜೊತೆಯಲ್ಲಿ ಮನುಕುಲದ ಒಳಗೆಗಾಗಿ ಶ್ರಮಿಸಿದ ಸದ್ಗುರು ಸೇವಾಲಾಲರ ತತ್ವ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಯ ಆಚರಣೆ ಅರ್ಥಪೂರ್ಣವಾದೀತು, ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಹೋರಾಟದ ಫಲವಾಗಿ ಮೀಸಲಾತಿ ಅನುಭವಿಸುತ್ತಿರುವ ನಾವು ರಾಜಕೀಯವಾಗಿ, ಸಾಮಾಜಿಕವಾಗಿ ಅವರ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಿದೆ. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಸದ್ಗುರು ಸೇವಾಲಾಲ ಮಹಾರಾಜರು ಹೇಳಿಕೊಟ್ಟ ದಾರಿಯಲ್ಲಿ ಸಾಗಬೇಕಾಗಿದೆ. ಈ ಉಭಯರು ನೀಡಿರುವ ಜ್ಞಾನ ಮತ್ತು ಅವರ ಮಾರ್ಗದರ್ಶನದಲ್ಲಿ ಮುನ್ನಡೆದು ಸುಂದರ ಸಮಾಜ ಮತ್ತು ಸದೃಢ ಭಾರತ ನಿರ್ಮಿಸಲು ಪಣ ತೊಡೋಣ ಎಂದು ಹೇಳಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು *ಪರಮ ಪೂಜ್ಯ ಶ್ರೀ ರಾಜು ಮಹಾರಾಜ* ರವರು ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ವಿಠ್ಠಲ್ ಸೇಠ್ ಚವ್ಹಾಣ, ಬಲರಾಮ ನಾಯಕ, ರಾಮರಾವ್ ರಾಠೋಡ, ಭೀಮಸಿಂಗ್ ನಾಯಕ, ರಾಮಚಂದ್ರ ಕಾರಭಾರಿ, ದಶರಥ ರಾಠೋಡ, ಗೋವಿಂದ ರಾಠೋಡ ಪೂಜಾರಿ, ರಾಮಶೆಟ್ಟಿ ಜಾಧವ ಪೂಜಾರಿ, ಭೋಜು ರಾಠೋಡ, ಬಳಿರಾಮ ರಾಠೋಡ, ರಾಮು ರಾಠೋಡ, ಪ್ರಕಾಶ ರಾಠೋಡ, ವಿಷ್ಣು ರಾಠೋಡ, ನಾಗಶೆಟ್ಟಿ ಮಾಲಿ ಪಾಟೀಲ, ಉಮೇಶ ರಾಠೋಡ, ರಾಮು ಚವ್ಹಾಣ, ಬಲಭೀಮ ಜಾಧವ ಚಂದು ಗುತ್ತೇದಾರ, ತುಕಾರಾಮ ನಾಟಿಕಾರ್, ಜೈಸಿಂಗ್ ರಾಠೋಡ, ಚರಣಸಿಂಗ್ ರಾಠೋಡ, ದೇವಿದಾಸ್ ರಾಠೋಡ, ಶಂಕರ ರಾಠೋಡ, ಖಿರು ರಾಠೋಡ, ಬಂನ್ಸಿ ಸೋನಾರ್, ರೂಪಸಿಂಗ್ ರಾಠೋಡ, ಅಕ್ಷಯ್ ರಾಠೋಡ, ಮಿಥುನ ಪವಾರ್, ಬಾಬು ಸಿ. ರಾಠೋಡ, ಅರ್ಜುನ್ ರಾಠೋಡ, ಬಾಬು ಚವ್ಹಾಣ,ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು…

 

 

Be the first to comment

Leave a Reply

Your email address will not be published.


*