ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ:ಮಹಿಳಾ ಸರ್ಕಾರಿ ನೌಕರರಿಗೆ ವಿವಿಧ ಸ್ಪರ್ಧೆಗಳು

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಮಹಿಳಾ ನೌಕರರಿಗೆ ವಿವಿಧ ಸ್ಪರ್ಧೆ ಹಮ್ಮಿಕೊಂಡು,ಮಹಿಳಾ ದಿನಾಚರಣೆ ಕಾರ್ಯಕ್ರಮ ಅಧ್ಬುತವಾಗಿ ಮಾಡಿದ್ದು ಮಾದರಿ ಹಾಗೂ ಅನುಕರಣೀಯ ಕಾರ್ಯ.                                    ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜಯಶ್ರೀ ಎಮ್ಮಿ

ಬಾಗಲಕೋಟೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ‌ ಇಳಕಲ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಾಗೂ ಮಹಿಳಾ ನೌಕರರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಇಲಕಲ್ಲದ ಎಸ್ ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜರುಗಿದವು.

ಘನ ಉಪಸ್ಥಿತಿ ಹೊಂದಿದ್ದ ಡಾ.ಜಯಶ್ರೀ ಎಮ್ಮಿ‌ ಹೆಣ್ಣು ಮಕ್ಕಳಿಗಾಗಿ ಸಂಘವು ನಿರಂತರವಾಗಿ ಕಾರ್ಯ ಮಾಡುತ್ತಿದ್ದು ಸಂಘವು ಹೀಗೆಯೇ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮವನ್ನು ರಾಜ್ಯ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ ಉದ್ಘಾಟಿಸಿ ಮಾತನಾಡುತ್ತ ಇಳಕಲ್ ತಾಲ್ಲೂಕು ನೂತನ ತಾಲ್ಲೂಕು ಆದರೂ ಸಹ ಇಲ್ಲಿನ ತಾಲ್ಲೂಕು ಸಂಘ ನವೀನ,ಸೃಜನಾತ್ಮಕ ಚಟುವಟಿಕೆಗಳನ್ನು ಮಾಡುವುದರೊಂದಿಗೆ ನೌಕರರೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದು ಮಾದರಿ ಕಾರ್ಯಕ್ರಮ ಆಯೋಜನೆ ಮಾಡಿದ ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ ಹಾಗೂ ಅವರ ಇಡೀ ತಂಡದ‌ ಕಾರ್ಯ ಅಭಿನಂದನೀಯ ಎಂದರು.

ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರ ನೇತೃತ್ವದಲ್ಲಿ ಸಾಕಷ್ಟು ನೌಕರರ ಕೆಲಸಗಳು ಆಗುತ್ತಿದ್ದು,ಸಧ್ಯದಲ್ಲಿಯೇ ವೇತನ ಆಯೋಗ ರಚನೆ ಆಗುತ್ತದೆ ಇದಕ್ಕಾಗಿ ಶ್ರಮಿಸುತ್ತಿರುವ ರಾಜ್ಯಾಧ್ಯಕ್ಷರಿಗೆ ಧನ್ಯವಾದ ತಿಳಿಸಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನಾಡಿನ ಖ್ಯಾತ ಜಾನಪದ ಸಾಹಿತಿಗಳಾದ ಸಿದ್ದಪ್ಪ ಬಿದರಿ ರವರು ಹೆಣ್ಣು ಜಾನಪದದಲ್ಲಿ ಹಾಸುಹೊಕ್ಕಾಗಿದ್ದು, ಹೆಣ್ಣಿಲ್ಲದ ಜಾನಪದ ಊಹಿಸಲು ಆಗಲ್ಲ,ಸಮಾಜ ಮನೆಯ ಕಣ್ಣಾಗಿ ಬಾಳು ಬೆಳಗುವ ಹೆಣ್ಣು ಕುಲದ‌ ಬಗ್ಗೆ ತಮ್ಮದೇ ಆದ ಜಾನಪದದ ಸೊಗಡಿನೊಂದಿಗೆ ರಸವತ್ತಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಮಹಾದೇವ ಬೆಳ್ಳನವರ, ಸಂಗಣ್ಣ ಹಂಡಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ ,ಆನ್ ಲೈನ್ ನೋಂದಣಿ ಮಾಡಿಕೊಂಡ 152 ನೌಕರರೊಂದಿಗೆ ಇಂದು ಸಹ ಇಲ್ಲಿ ನೋಂದಣಿ ಮಾಡಿಕೊಂಡು, ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಹಿಳಾ‌ ನೌಕರರಿಗೆ ಅಭಿನಂದಿಸಿದರು.ಸಂಘದ ಕಾರ್ಯಗಳು ಹೀಗೆ ಅದ್ಭುತವಾಗಿ ಮೂಡಿಬರಲು ಸಹಾಯ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ಅಭಿನಂದನೆ ಸಲ್ಲಿಸಿದರು.

ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಹಿಳಾ ನೌಕರರಿಗೆ ಮೆಡಲ್ ದೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ವೇದಿಕೆಯ‌ ಮೇಲೆ ಗುಂಡಪ್ಪ‌ ಕುರಿ,ಎಸ್ ಎನ್ ಗಡೇದ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಇದ್ದರು.

ಕಾರ್ಯಕ್ರಮದಲ್ಲಿ ಸ್ವಾಗತವನ್ನು ಗುಂಡಪ್ಪ ಕುರಿ ಮಾಡಿದರು, ಪ್ರಾರ್ಥನೆಯನ್ನು ಶ್ರೀಮತಿ ಗುರುದೇವಿ‌ ಮಠ ಮಾಡಿದರು,ನಾಡಗೀತೆಯನ್ನು ಎಂ ಎಸ್ ಬೀಳಗಿ ಹಾಗೂ ಸಂಗಡಿಗರು ನಡೆಸಿದರು. ಬಸವರಾಜ‌ ಬಲಕುಂದಿ,ಶ್ರೀಕಾಂತ ಆವಿನ,ವಾಸುದೇವ ಸ್ವಾಮಿ ನಿರೂಪಿಸಿದರು. ಶರಣಪ್ಪ ಗಡೇದ ವಂದಿಸಿದರು.

Be the first to comment

Leave a Reply

Your email address will not be published.


*