ಬೆಂಗಳೂರು : ಕಳೆದ ನಿನ್ನೆ ನಡೆದ ಸಚಿವ ಸಂಪುಟ ಸಭೆ, ಐತಿಹಾಸಿಕ ಭಾಷ್ಯ ಬರೆಯಿತು. 2018ನೇ ವರ್ಷದ 2ನೇ ಸಚಿವ ಸಂಪುಟ ಸಭೆಯಲ್ಲಿ ಪ್ರವರ್ಗ-1ರ, ಕ್ರಮ ಸಂಖ್ಯೆ 86ರ ಅಡಿಯಲ್ಲಿ ಬರುವ ಗೊಲ್ಲ ಜಾತಿ ಪಟ್ಟಿಗೆ ಪರ್ಯಾಯ ಪದವಾಗಿ ಕಾಡುಗೊಲ್ಲ, ಹಟ್ಟಿಗೊಲ್ಲ ಪದಗಳನ್ನು ಸೇರ್ಪಡೆ ಮಾಡಲಾಯಿತು.
ಕರ್ನಾಟಕದಲ್ಲಿ ಕಂಡುಬರುವ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಸಮುದಾಯದ ಅಂದರೆ, ಅದು ಕಾಡುಗೊಲ್ಲ ಸಮುದಾಯ. ಈ ಸಮುದಾಯದ ಅಸ್ಮಿತೆಗಾಗಿ ಸುಮಾರು 70 ವರ್ಷಗಳಿಗೂ ಅಧಿಕ ಕಾಲ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹೋರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದು ವೇಣುಕಲ್ಲು ಗುಡ್ಡದ ನಾಗಪ್ಪ ತೋರಿಬಂದರೇ, ಆನಂತರ ದಿನಗಳಲ್ಲಿ ಸಮುದಾಯದ ಇತರರು ಇವರ ಸಾರಥ್ಯದಲ್ಲಿ ಮುಂದುವರೆದಿದ್ದು ಈಗ ಇತಿಹಾಸ.
ಈ ಕಾಡುಗೊಲ್ಲ ಸಮುದಾಯ ಬುಡಕಟ್ಟು ಸಂಸ್ಕೃತಿ ಹೊಂದಿದೆ ಎಂಬುದನ್ನು ಮೈಸೂರು ವಿವಿ ನಡೆಸಿದ ಕುಲಶಾಸ್ತ್ರೀಯ ಅಧ್ಯಯನ ಕೂಡ, ರಾಜ್ಯ ಸರ್ಕಾರಕ್ಕೆ ತನ್ನ ವರದಿ ಮೂಲಕ ತಿಳಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಪರಿಶಿಷ್ಟ ಪಂಗಡಕ್ಕೆ ಈ ಸಮುದಾಯವನ್ನು ಸೇರಿಸಬಹುದು ಎಂದು ಶಿಫಾರಸ್ಸು ಕೂಡ ಮಾಡಿತ್ತು.
ಆದರೆ ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಎಂಬ ಪದಗಳೇ ಇರದ ಕಾರಣ, ಇದು ನೆನೆಗುದಿಗೆ ಬಿದ್ದಿತ್ತು. ಈ ಮೂಲಕ ತಮ್ಮ ಆಸ್ಮಿತೆಗಾಗಿ, ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಎಂಬ ಪದಗಳನ್ನು ಸೇರ್ಪಡೆ ಮಾಡಬೇಕು ಎಂದು ಕರ್ನಾಟಕ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಚಿತ್ರದುರ್ಗದಲ್ಲಿ ಶಿವುಯಾದವ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಪತ್ರ ಸಲ್ಲಿಸಲಾಗಿತ್ತು.
ಈ ಬೃಹತ್ ಪ್ರತಿಭಟನೆಯ ನಂತ್ರವೂ ಕಾಡುಗೊಲ್ಲ ಸಮುದಾಯದ ಬೇಡಿಕೆ ಈಡೇರಿರಲಿಲ್ಲ.
ಈ ಬೇಡಿಕೆಗೆ ಮತ್ತಷ್ಟು ಹುರುಪು ತುಂಬಿದ್ದು, ಮಾಜಿ ಹಿಂದುಳಿದ ಆಯೋಗದ ಅಧ್ಯಕ್ಷರು, ಪ್ರಗತಿಪರ ಚಿಂತಕರಾದ ಡಾ.ಸಿ.ಎಸ್.ದ್ವಾರಕನಾಥ್ ಹಾಗೂ ನಟ ಚೇತನ್ ನೇತೃತ್ವದಲ್ಲಿ ಜನಪ್ರತಿನಿಧಿಗಳ ಬಾಗಿಲು ತಟ್ಟಿದಾಗ. ಇವರೊಟ್ಟಿಗೆ ಕೈಜೋಡಿಸಿದ ಸಮುದಾಯದ ಕುನ್ನಿಕೆರೆ ರಾಮಣ್ಣ, ಜಿ.ಕೆ.ನಾಗಣ್ಣ, ಜಯರಾಂ, ಜಾನಪದ ಹಾಡುಗಾರ ಮೋಹನ್ ಸೇರಿದಂತೆ ಇತರರು, ಹಗಲಿರುಳು ಎನ್ನದೇ ಜನಪ್ರತಿನಿಧಿಗಳ ಮನೆ ಬಾಗಿಲನ್ನು ಪದೇ ಪದೇ ಎಡತಾಕಿದರು. ಪ್ರವರ್ಗ -1ರ ಅಡಿಯಲ್ಲಿ ಗೊಲ್ಲ ಜಾತಿಯ ಜೊತೆಗೆ ಕಾಡುಗೊಲ್ಲ, ಹಟ್ಟಿಗೊಲ್ಲ ಜಾತಿಯನ್ನು ಸೇರಿಸುವಂತೆ ಮನವಿ ಮಾಡಿದರು. ಸಮುದಾಯದ ಒಳಿತಿಗೆ ಶ್ರಮಿಸುವಂತೆ ಕೋರಿಕೊಂಡ್ರು.
ಈ ಬೇಡಿಕೆಗೆ ಪ್ರತಿಸ್ಪಂದಿಸುವಂತೆ ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ, ಸಮಾಜಕಲ್ಯಾಣ ಸಚಿವ ಹೆಚ್.ಆಂಜನೇಯ, ಸಿಎಂ ಸಿದ್ದರಾಮಯ್ಯ ಅವರನ್ನು ನಿನ್ನೆಯ ಸಚಿವ ಸಂಪುಟ ಸಭೆಗೂ ಮುನ್ನಾ ಭೇಟಿ ಮಾಡಿದರು.
ಈ ಸಚಿವ ಸಂಪುಟ ಸಭೆಯಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಪರ್ಯಾಯ ಪದಗಳ ಸೇರಿಸುವ ಬಗ್ಗೆ ಕಡತ ವಿಷಯದ ಪ್ರಸ್ತಾಪ ಬರುತ್ತದೆ. ಈ ಬಹುದಿನದ ಬೇಡಿಕೆಗೆ ಅನುಮೋದನೆ ಮೂಲಕ, ಅಧಿಕೃತ ಮುದ್ರೇ ಒತ್ತುವಂತೆ ಡಾ.ಸಿ.ಎಸ್.ದ್ವಾರಕನಾಥ್, ನಟ ಚೇತನ್ ಸೇರಿದಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ರು.
ಇವರ ಮನವಿಗೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ಹಿಂದುಳಿದವರ ಆಶಾಕಿರಣ ಸಿಎಂ ಸಿದ್ದರಾಮಯ್ಯ ಈಡೇರಿಸಿದ್ದಾರೆ. ಕಳೆದ ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡುವ ಮೂಲಕ ಕರ್ನಾಟಕ ಇತಿಹಾಸದಲ್ಲಿ ಹೊಸ ಬಾಷ್ಯ ಬರೆದರು. ಪ್ರವರ್ಗ 1ರ ಕ್ರಮಸಂಖ್ಯೆ 86ರ ಅಡಿಯಲ್ಲಿ ಈಗ ಇರುವ ಗೊಲ್ಲ ಜಾತಿಯ ಜೊತೆಗೆ, ಕಾಡುಗೊಲ್ಲ ಹಾಗೂ ಹಟ್ಟಿಗೊಲ್ಲ ಪರ್ಯಾಯ ಪದಗಳನ್ನು ಸೇರ್ಪಡೆಗೆ ಅನುಮೋದನೆ ನೀಡಿದರು.
ಈ ಮೂಲಕ ಜಾತಿ ಪಟ್ಟಿಯಲ್ಲಿ ಈ ವರೆಗೆ ಹೆಸರೇ ಇಲ್ಲದ ಕಾಡುಗೊಲ್ಲ, ಹಟ್ಟಿಗೊಲ್ಲ ಜಾತಿಗಳು ಸೇರ್ಪಡೆಗೊಂಡಿವೆ.
ಈಗ “ಗೊಲ್ಲ” ಎಂದು ಇದುವರೆಗೆ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದ ಬುಡಕಟ್ಟು ಸಂಸ್ಕೃತಿಯುಳ್ಳ ಕಾಡುಗೊಲ್ಲ, ಹಟ್ಟಿಗೊಲ್ಲ ಸಮುದಾಯದ ಜನರು, “ಕಾಡುಗೊಲ್ಲ, ಹಟ್ಟಿಗೊಲ್ಲ” ಎಂದು ಜಾತಿ ಪ್ರಮಾಣ ಪತ್ರ ಪಡೆಯುವುದು ಅಷ್ಟೇ ಬಾಕಿ ಇದೆ. ಅಲ್ಲದೇ ಈ ಬಗ್ಗೆ ಆದಷ್ಟು ಬೇಗ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಗೆಜೆಟ್ ಮಾಹಿತಿ ಲಭ್ಯ ಆಗಿ, ಜಾರಿಯಾಗುವ ತುರ್ತು ಆಗಬೇಕಿದೆ ಎನ್ನುತ್ತಾರೆ, ಈ ಸಮುದಾಯದ ಜೊತೆಗೆ, ಇಂತಹ ಐತಿಹಾಸಿಕ ಭಾಷ್ಯಕ್ಕೆ ಕಾರಣರಾದ ಡಾ.ಸಿ.ಎಸ್.ದ್ವಾರಕನಾಥ್ ಹಾಗೂ ನಟ ಚೇತನ್.
ಇನ್ನೂ ಈ ಎಲ್ಲಾ ಐತಿಹಾಸಿಕ ಘಟನೆಗೆ ಕಾರಣರಾದ, ಜನಸಾಮಾನ್ಯರ ಬೇಡಿಕೆಗೆ ಪ್ರತಿ ಸ್ಪಂದಿಸಿದ ಸಚಿವ ಟಿ.ಬಿ.ಜಯಚಂದ್ರ, ಹೆಚ್.ಆಂಜನೇಯ ಹಾಗೂ ಸಿಎಂ ಸಿದ್ದರಾಮಯ್ಯಗೆ ಸಮುದಾಯದ ಎಲ್ಲರ ಪರವಾಗಿ, ವಿ.ನಾಗಪ್ಪ, ಅಧ್ಯಕ್ಷರು, ಕರ್ನಾಟಕದ ರಾಜ್ಯ ಕಾಡುಗೊಲ್ಲರ ಸಂಘ, ಚಿತ್ರದುರ್ಗ ಅಭಿನಂದನೆಯನ್ನ ಆನಂದ ಭಾಷ್ಪದ ಮೂಲಕ ತಿಳಿಸಿದ್ದಾರೆ. ಈ ಇಳಿ ವಯಸ್ಸಿನಲ್ಲಿ ತನ್ನ ಸಮುದಾಯದ ಹಲವು ದಿನ ಬೇಡಿಕೆ ಈಡೇರಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿದ್ದಪ್ಪ ನವರು ಕಾಡುಗೊಲ್ಲ ಜಾತಿಪಟ್ಟಿಗೆ ಸೇರಿದ್ದಕ್ಕೆ ಸಮುದಾಯದ ಮುಖಂಡರಿಗೆ, ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ಇವರ ಜೊತೆಗೆ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀಸೆ ಮಹಲಿಂಗಪ್ಪ, ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಸಿ.ಶಿವುಯಾದವ್, ಜಿ.ವಿ.ರಮೇಶ್, ಕುನ್ನಿಕೆರೆ ರಾಮಣ್ಣ, ಹರ್ಷವರ್ಧನ್, ಜಿ.ಕೆ.ನಾಗಣ್ಣ, ಡಾ.ಜಿ.ಕೆ.ಪ್ರೇಮ, ಮಾಗಡಿ ರಸ್ತೆಯ ದೊಡ್ಡ ಗೊಲ್ಲರ ಹಟ್ಡಿಯ ರಂಗಸ್ವಾಮಿ, ಹಾಗೂ ಪತ್ಯಕ್ಷವಾಗಿ, ಪರೋಕ್ಷವಾಗಿ ಹಿರಿಯರು, ಕಿರಿಯರು ಹೆಗಲಿಗೆ ಹೆಗಲಾಗಿದ್ದಾರೆ.
ಈ ಮೂಲಕ ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಜಾತಿಗಳ ಹೆಸರುಗಳು ಸೇರ್ಪಡೆಗೊಂಡಿವೆ.
ಈ ಶುಭ ಸಂದರ್ಭದಲ್ಲಿ, ಕಾಡುಗೊಲ್ಲ ಸಮುದಾಯದ ಮುಖಂಡರು, ಡಾ.ಸಿ.ಎಸ್.ದ್ವಾರಕನಾಥ್ ಅವರಿಗೆ ಸಿಹಿ ತಿನಿಸಿ, ಸಂಭ್ರವನ್ನು ಹಂಚಿಕೊಂಡರು. ನಟ ಚೇತನ್ ಗೆ ಸಮುದಾಯದ ಕಾರ್ಯಕ್ಕೆ ಶ್ರಮಿಸಿದ್ದಕ್ಕೆ ಹೃದಯ ಪೂರ್ವಕ ಕೃತಜ್ಞತೆ ತಿಳಿಸಿದರ
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ. ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು
Be the first to comment