ಅಭಿಮಾನಿಗಳನ್ನು ತಡೆಯುವ ವೇಳೆ ಪೇದೆಯ ಕಾಲು ಮುರಿತ…

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

ಬೆಂಗಳೂರು

ತೀವ್ರ ಹೃದಯಾಘಾತದಿಂದ ಮೃತಪಟ್ಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಾರೆ. ಅಭಿಮಾನಿಗಳನ್ನು ತಡೆಯಲು ವೇಳೆ ಪೊಲೀಸ್ ಪೇದೆಯ ಕಾಲು ಮುರಿದಿದೆ.

CHETAN KENDULI

ಕಂಠೀರವ ಕ್ರೀಡಾಂಗಣದ ಬಳಿಯ ಮಲ್ಯ ಸಿಗ್ನಲ್ ಗೇಟ್ ಬಳಿ ಮಡಿವಾಳ ಠಾಣೆಯ ಪೇದೆ ಗಣೇಶ್ ನಾಯಕ್ ಅವರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.

ಅಭಿಮಾನಿಗಳು ಏಕಾಏಕಿ ಕ್ರೀಡಾಂಗಣದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಅಭಿಮಾನಿಗಳನ್ನು ತಡೆಯಲು ಹೋದ ಪೇದೆ ಕೆಳಗೆ ಬಿದ್ದಿದ್ದರಿಂದ ಅವರ ಕಾಲು ಮುರಿದಿದೆ. ತಕ್ಷಣವೇ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Be the first to comment

Leave a Reply

Your email address will not be published.


*