ಸಿಗ್ನಲ್ ಜಂಪ್​ ಮಾಡಿದ ಸಂಸದ ಜಿಗಜಿಣಗಿ, ದಂಡ ಹಾಕದ ಪೊಲೀಸರು..!?

ವರದಿ: ಅಮರೇಶ ಕಾಮನಕೇರಿ


     ರಾಜ್ಯ ಸುದ್ದಿಗಳು


ವಿಜಯಪುರ: ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ನೂತನ ಸಂಚಾರಿ ನಿಯಮ ಜಾರಿಗೆ ತಂದಿದ್ದು, ನಿಯಮ ಉಲ್ಲಂಘಿಸಿದವರಿಗೆ ಭಾರೀ ಮೊತ್ತದ ದಂಡ ನಿಗದಿ ಮಾಡಿತ್ತು. ಇದೀಗ ಸಂಸದ ರಮೇಶ್ ಜಿಗಜಿಣಗಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

  ಗಾಂಧಿ ಜಯಂತಿ ಅಂಗವಾಗಿ ಸಂಸದ ರಮೇಶ್ ಜಿಗಜಿಣಗಿ, ನಗರದಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಮ್ಮ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ರಸ್ತೆಯಲ್ಲಿ ರೆಡ್​ ಸಿಗ್ನಲ್​ ಬಿದ್ದಿತ್ತು. ಬಳಿಕ ಗ್ರೀನ್ ​ಸಿಗ್ನಲ್​ ಬೀಳಲು ಇನ್ನೂ 30 ಸೆಕೆಂಡ್ ಬಾಕಿ ಇರುವಾಗಲೇ​ ಸಂಸದರ ಕಾರು ಸಿಗ್ನಲ್​ ಜಂಪ್​ ಮಾಡಿಕೊಂಡು ಮುಂದೆ ಸಾಗಿದೆ. ಈ ವೇಳೆ ಅಲ್ಲೇ ಇದ್ದ ಟ್ರಾಫಿಕ್ ಪೊಲೀಸರು ಸಂಸದರಿಗೆ ರಸ್ತೆಯಲ್ಲಿನ ಟ್ರಾಫಿಕ್​ ಕ್ಲೀಯರ್​ ಮಾಡುವುದರಲ್ಲಿ ಮಗ್ನರಾಗಿದ್ದರಂತೆ. ಆದ್ರೆ ಸಂಸದರ ಕಾರು ಸಿಗ್ನಲ್​​ ಜಂಪ್​ ಮಾಡಿದ ಬಗ್ಗೆ ಕ್ರಮ ಕೈಗೊಂಡಿಲ್ಲವಂತೆ.


ಸಿಗ್ನಲ್ ಜಂಪ್ ಮಾಡುತ್ತಿರಿ ಸಂಸದ ಜಿಗಜಿಣಗಿ ಯವರ ಕಾರು


ಒಂದು ವೇಳೆ ಸಂಸದರ ಹಾಗೆ ಸಾರ್ವಜನಿಕರು ಸಿಗ್ನಲ್​​ ಜಂಪ್​ ಮಾಡಿದ್ರೆ, ಪೊಲೀಸರಂತೂ ವಾಹನ ಸವಾರರಿಗೆ ಭಾರೀ ದಂಡ ಹಾಕದೇ ಖಂಡಿತವಾಗಿ ಬಿಡುತ್ತಿರಲಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*