ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮ ಪಂಚಾಯತಿ ಸಿಬ್ಬಂದಿಯವರು ಹೂವಿನಹಳ್ಳಿ ಗ್ರಾಮದಲ್ಲಿ ನೀರನ್ನು ಸಮರ್ಪಕವಾಗಿ ಬಿಡದ ಕಾರಣ ಮಹಿಳೆಯರು ಸೋಮವಾರರಂದು ಹೂವಿನಹಳ್ಳಿ ಗ್ರಾಮ ಪಂಚಾಯತ ಮುಂದೆ ಪ್ರತಿಭಟನೆ ನಡೆಸಿದರು.
ಸಮೀಪದ ಹೂವಿನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೂವಿನಹಳ್ಳಿ ಗ್ರಾಮದಲ್ಲಿ ಜಲಜೀವನ್ ಯೋಜನೆಯಡಿಯಲ್ಲಿ ಮನೆ ಮನೆಗಳಿಗೆ ನಳಗಳ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಈ ಮುಂಚೆ ಲಕ್ಷ್ಮಿದೇವಿ ದೇವಸ್ಥಾನದ ಹತ್ತಿರದ ನಿವಾಸಿಗಳು ಅಂಗನವಾಡಿ ಕೇಂದ್ರದ ಹತ್ತಿರ ಇರುವ ನಳದಿಂದ ನೀರನ್ನು ಒಯ್ಯುತ್ತಿದ್ದರು, ಆದರೆ ಇಂದು ಅಂಗನವಾಡಿ ಮೇಲ್ವಿಚಾರಕರು ನೀವುಗಳು ನೀರನ್ನು ಬಹಳ ಚೆಲ್ಲುತ್ತಿರಿ ಇದರಿಂದ ತುಂಬಾ ಗಲಿಜಾಗುತ್ತದೆ, ಆದ್ದರಿಂದ ಇನ್ನು ಮುಂದೆ ನಿಮಗೆ ನೀರು ಕೊಡುವುದಿಲ್ಲ.ಗ್ರಾಮ ಪಂಚಾಯತಿಯವರು ಮನೆ ಮನೆಗಳಿಗೆ ನಳಗಳನ್ನು ಅಳವಡಿಸಿದ್ದಾರೆ ಅಲ್ಲಿಂದಲೆ ನೀರು ಪಡೆದುಕೊಳ್ಳಿ ಎಂದರು.
ಆದರೆ ಇಲ್ಲಿಯವರೆಗೆ ಈ ನಳಗಳಿಂದ ಒಂದು ಹನಿ ನೀರು ಕೂಡಾ ಬಾರದ ಕಾರಣ ೩೦ಕ್ಕೂ ಹೆಚ್ಚು ಮಹಿಳೆಯರು ಖಾಲಿ ಕೊಡಗಳನ್ನು ತಗೆದುಕೊಂಡು ಹೂವಿನಹಳ್ಳಿ ಗ್ರಾಮ ಪಂಚಾಯತ ಮುಂದೆ ಪ್ರತಿಭಟನೆ ನಡೆಸಿದರು,ಆದರೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕೂಡಾ ಇರದ ಕಾರಣ ಮತ್ತಷ್ಟು ಆಕ್ರೋಶಗೊಂಡ ಮಹಿಳೆಯರು ಅವರನ್ನು ಪೋನ್ ಮೂಲಕ ಸಂಪರ್ಕಿಸಲು ಪ್ರಯತ್ನಸಿದರು ಕೂಡಾ ಕರೆಗಳನ್ನು ಸ್ವಿಕರಿಸದ ಕಾರಣ,ಪಿಡಿಓ ಬರುವವರೆಗೆ ಇಲ್ಲಿಯೆ ಕುಳಿತುಕೊಳ್ಳುತ್ತೇವೆ ಎಂದಾಗ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಸಿಬ್ಬಂದಿ ಅವರು ಪ್ರತಿಭಟನಾ ನಿರತ ಮಹಿಳೆಯರನ್ನು ಮನವೊಲಿಸಿ ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದಾಗ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.ಈ ಸಂದರ್ಭದಲ್ಲಿ ಲಕ್ಷ್ಮಿದೇವಿ ದೇವಸ್ಥಾನದ ಹತ್ತಿರ ಇರುವ ನಿವಾಸದ ಮಹಿಳೆಯರು ಇದ್ದರು.
Be the first to comment