ಮಿನುಗಾರನ ಬದುಕು

 

  • ಮಿನುಗಾರನ ಬದುಕು ತಿಳಿದಾಗ

 

ಮೀನುಗಾರರು ಎಂದು ತಮ್ಮ ಸಾಲ ಮನ್ನಾ ಮಾಡಿ ಎಂದು ಕೇಳಿದವರಲ್ಲ …ಸಾಲದ ಶೂಲದಲ್ಲಿ ಬಿದ್ದರು ಆತ್ಮಹತ್ಯೆ ಮಾಡದೆ ಜೀವನವೆಂಬ ಸಮುದ್ರವನ್ನು ಈಜಿ ಬದುಕುವವರು ಮೀನುಗಾರರು …

ಮೀನಿಗೆ ಹಣ ಹೆಚ್ಚಾಗಿದೆ ಎಂದು ಮೀನುಗಾರರನ್ನು ಬೈಯ್ಯುವ ಗ್ರಾಹಕರಿಗೇನು ಗೊತ್ತು ..ಜೀವದ ಹಂಗು ತೊರೆದು  ಭೋರ್ಗರೆವ ಆಳ ಸಮುದ್ರದ  ಒಡಲಿನಿಂದ ಮೀನು ಹಿಡಿಯುವ ಕಷ್ಟ ….

ಜೀವದ ಹಂಗು ತೊರೆದು ಮೀನು ಹಿಡಿಯುವ ಮೀನುಗಾರರಿಗೆ ಸಿಗುವುದು ದಿನಕೂಲಿ ಮಾತ್ರ …ಅದೂ ಮೀನು ಇದ್ದರೆ ಮಾತ್ರ ಇಲ್ಲದಿದ್ದರೆ ಬರಿಗೈ …

ದಲ್ಲಾಳಿಗಳು ,ಮಾಲಕರು , ವ್ಯಾಪಾರಿಗಳು ದಡದಲ್ಲಿ ನಿಂತು ಅವರು ತಂದ ಮೀನಿನಿಂದ ಲಕ್ಷಗಟ್ಟಲೆ ಲಾಭ ಪಡೆಯುತ್ತಾರೆ ….

ಮೀನುಗಾರರ ಸಂಕಷ್ಟ ಕೇಳುವವರಿಲ್ಲ …ಇಲ್ಲಿ ಬಡ ಜೀವಗಳು ಕಡಲಲ್ಲಿ ಕಣ್ಮರೆಯಾಗಿವೆ …ಯಾವುದೇ ರಾಜಕೀಯ ಮಾಡದೆ ಅವರ ಶೋಧ ಕಾರ್ಯ ನಡೆಯಲಿ …

1 Comment

Leave a Reply

Your email address will not be published.


*