ರಾಜ್ಯ ಸುದ್ದಿ
ಕುಮಟಾ: ತಾಲೂಕಿನ ಕಲಭಾಗಿನ ಉರಗ ಪ್ರೇಮಿ ಪವನ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಬೀಳಗಿಯ ಮನೆಯೊಂದರ ಬಚ್ಚಲು ಮನೆಯಲ್ಲಿ ಅಡಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ರಾತ್ರಿಯ ಸಮಯದಲ್ಲಿ ಬಚ್ಚಲು ಮನೆಯ ಮೇಲ್ಛಾವಣಿಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಕಂಡ ಮನೆಯವರು ಹಾಗೂ ಸ್ಥಳೀಯರು ಗಾಬರಿಗೊಂಡು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಅರಣ್ಯ ಇಲಾಖೆಯು ಇಲ್ಲಿನ ಹೆಸರಾಂತ ಉರಗ ಪ್ರೇಮಿ ಪವನ ನಾಯ್ಕ ಕಲಭಾಗ ಅವರನ್ನು ಸಂಪರ್ಕಿಸಿದ್ದರು. ನಂತರ ಕುಮಟಾದಿಂದ ತೆರಳಿದ ಪವನ, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.ಉರಗ ಪ್ರೇಮಿ ಪವನ ನಾಯ್ಕ ಕಲಭಾಗ ಅವರ ಕಾರ್ಯಕ್ಕೆ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Be the first to comment