ಗೋವಾ ಪೊಲೀಸರಿಂದ ದೌರ್ಜನ್ಯ ಆರೋಪ- ಮುದ್ದೇಬಿಹಾಳ ಮೂಲದ ಮೂವರು ನೇಣಿಗೆ ಶರಣು

ವರದಿ ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿ

CHETAN KENDULI

ಮುದ್ದೇಬಿಹಾಳ ( ವಿಜಯಪುರ ) : ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಮೂಲದ ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಾ ರಾಜ್ಯದ ಜುವಾರಿನಗರ ಬಿರ್ಲಾದಲ್ಲಿ ಮಂಗಳವಾರ ನಡೆದಿರುವುದು ಬೆಳಕಿಗೆ ಬಂದಿದೆ.

ಜುವಾರಿನಗರ ಬಿರ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ತಾಲೂಕಿನ ಸುಲ್ತಾನಪೂರ ಗ್ರಾಮದ ಹುಲಗೆಪ್ಪ ಅಂಬಿಗೇರ (35), ಈತನ ಸಹೋದರ ಗಂಗಪ್ಪ ಅಂಬಿಗೇರ (29) ಹಾಗೂ ಹುಲಗೆಪ್ಪನ ಪತ್ನಿ ದೇವಮ್ಮಾ ಅಂಬಿಗೇರ ( 28) ಆತ್ಮಹತ್ಯೆ ಮಾಡಿಕೊಂಡವರು.ಕೆಲಸ‌ ಅರಸಿ ಗೋವಾದ ಹುಲಗೆಪ್ಪ ಅಂಬಿಗೇರ, ಪತ್ನಿ, ಸಹೋದರ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗೋವಾದ ಜುವಾರಿನಗರ ಬಿರ್ಲಾಕ್ಕೆ ಹೋಗಿ ಕೂಲಿ ಜೀವನ ಸಾಗಿಸುತ್ತಿದ್ದರು.

ಈ ನಡುವೆ, ದೇವಮ್ಮಾ ಅವರ 17 ವರ್ಷದ ಸಹೋದರ ಸಹ ಜುವಾರಿನಗರ ಬಿರ್ಲಾಕ್ಕೆ ಬಂದು ಇವರೊಂದಿಗೆ ವಾಸವಾಗಿದ್ದ. ಈತ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ಪೊಲೀಸರು ಮನೆಗೆ ಬಂದು ದೇವಮ್ಮಳ ಸಹೋದರನನ್ನು ಕರೆದುಕೊಂಡು ಹೋಗಿದ್ದರು. ಕಾರಣ ಕೇಳಲು ಠಾಣೆಗೆ ಹೋದ ದೇವಮ್ಮಾ ಹಾಗೂ ಅವಳ ಪತಿಯನ್ನು ಪೊಲೀಸರು ಬೆದರಿಸಿ ಕಳುಹಿಸಿದ್ದರು‌ ಎನ್ನಲಾಗಿದೆ. ಇದಾದ ಕೆಲ ದಿನಗಳ ಬಳಿಕ ದೇವಮ್ಮಾ, ಹುಲಗೆಪ್ಪ ಹಾಗೂ ಗಂಗಪ್ಪ ಅವರನ್ನೂ ವಿಚಾರಣೆಗೆ ಕರೆದುಕೊಂಡು ಹೋಗಿದ್ದರು.

DEATH NOTE:

‘ಜುವಾರಿನಗರದ ಮನೆಯೊಂದರಲ್ಲಿ 10 ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣಗಳು ಕಳ್ಳತನವಾಗಿವೆ. ಈ ಕಳ್ಳತನದಲ್ಲಿ ನಿಮ್ಮ ಕುಟುಂಬದ ಕೈವಾಡವಿದೆ ಎಂದು ಪೊಲೀಸರು ಆರೋಪಿಸಿದ್ದರು. ಕಳ್ಳತನ ಮಾಡಿದ್ದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು. ಆದರೆ, ಮಾಡಿದ್ದನ್ನು ಒಪ್ಪದಿದ್ದಾಗ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು.ಇದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ಡೆತ್ ನೋಟ ಬರೆದಿದ್ದಾರೆ ಎನ್ನಲಾಗಿದೆ. ಪೊಲೀಸರು ಅವರನ್ನು ಕಳುಹಿಸಿದ ಬಳಿಕ ನಿರಂತರ ದೌರ್ಜನ್ಯಕ್ಕೊಳಗಾದ ಬಡ ಕುಟುಂಬದ ಮೂವರು ಮನೆಗೆ ಮರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ತನಿಖೆ ನಡೆಸಿ :ಲಗುಬಗೆಯಿಂದ ಮರಣೋತ್ತರ ಪರೀಕ್ಷೆಆತ್ಮಹತ್ಯೆ ಮಾಡಿಕೊಂಡವರ ಶವವನ್ನು ಪೊಲೀಸರು ಲಗುಬಗೆಯಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಹಲ್ಲೆ ಮಾಡಿದ್ದನ್ನು ಮರೆಮಾಚಲು ಪೊಲೀಸರು ಈ ರೀತಿಯಾಗಿ ವರ್ತಿಸಿದ್ದಾರೆಂದು ಹುಲಗೆಪ್ಪನ ಕುಟುಂಬಸ್ಥರು ಹಾಗೂ ಸ್ಥಳೀಯ ಸಂಘಟನೆಗಳು ಆರೋಪಿಸಿದ್ದಾರೆ.ಈ ಘಟನೆಯ ಕುರಿತು ಉನ್ನತ ತನಿಖೆ ನಡೆಸುವಂತೆ ಅಖಿಲ ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ಧಣ್ಣ ಮೇಟಿ,ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ‌ ಎ.ಎಸ್. ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*